ಬೌಲರ್ಸ್ ಮ್ಯಾಚ್ ವಿನ್ನರ್ಸ್ ಆಗಿದ್ದೇಗೆ..?: ಬಯಲಾಯ್ತು ಬಿಸಿಸಿಐ ಪ್ಲಾನ್!

By Suvarna Web DeskFirst Published Oct 28, 2017, 3:17 PM IST
Highlights

ಇತ್ತೀಚಿನ ದಿನಗಳಲ್ಲಿ ಬೌಲರ್ಸ್ ಮ್ಯಾಚ್ ವಿನ್ನರ್​ ಆಗ್ತಿದ್ದಾರೆ. ಅವರೇ ಪ್ರತಿ ಪಂದ್ಯದ ಟ್ರಂಪ್​ಕಾರ್ಡ್​ಗಳಾಗ್ತಿದ್ದಾರೆ. ಹಾಗಾದ್ರೆ ಬೌಲರ್ಸ್​ ಇದ್ದಕ್ಕಿದಂತೆ ಶೈನ್ ಆಗಲು ಕಾರಣವೇನು. ಅವರ ಯಶಸ್ಸಿನ ಗುಟ್ಟೇನು. ಇಲ್ಲಿದೆ ವಿವರ

ಟೀಂ  ಇಂಡಿಯಾ ಸ್ಟ್ರೆಂಥ್ ಬ್ಯಾಟಿಂಗ್. ಆದ್ರೆ ಇತ್ತೀಚಿನ ದಿನಗಳಲ್ಲಿ ಬೌಲಿಂಗ್ ಭಾರತೀಯ ಸ್ಟ್ರೆಂಥ್ ಆಗ್ತಿದೆ. ಪಂದ್ಯದ ಗೆಲುವಿನ ರೂವಾರಿಗಳು ಅವರೇ ಆಗ್ತಿದ್ದಾರೆ. ಮ್ಯಾನ್ ಆಫ್ ದ ಮ್ಯಾಚ್​ ಮತ್ತು ಮ್ಯಾನ್ ಆಫ್ ದ ಸಿರೀಸ್ ಅವರ ಪಾಲಾಗ್ತಿದೆ. ಪ್ರತಿ ಪಂದ್ಯದಲ್ಲೂ ಅವರ ಕಮಾಲ್ ನಡೆದೇ ಇದೆ. ಭಾರತ ಗೆದ್ದ ಪಂದ್ಯಗಳಲ್ಲಿ ಬ್ಯಾಟ್ಸ್​​ಮನ್​ಗಳಿಗಿಂತ ಬೌಲರ್​ಗಳ ಕೊಡುಗೆ ಜಾಸ್ತಿ ಇದೆ. ಸದ್ಯಕ್ಕೆ ಟೀಂ ಇಂಡಿಯಾ ಗೆಲುವಿಗೆ ಬೌಲರ್​ಗಳೇ ಕಾರಣಕರ್ತರು. ಪುಣೆ ಪಂದ್ಯವನ್ನೂ ಗೆಲ್ಲಿಸಿದ್ದು ಅದೇ ಬೌಲರ್ಸ್​.

ಬೌಲರ್​ಗಳ ಯಶಸ್ಸಿನ ಗುಟ್ಟೇನು ಗೊತ್ತಾ..?

ಅಷ್ಟಕ್ಕೂ ಬೌಲರ್'​ಗಳ ಯಶಸ್ಸಿನ ಗುಟ್ಟೇನು. ಇಷ್ಟು ದಿನ ವಿಕೆಟ್ ಪಡೆಯಲು ಪರದಾಡುತ್ತಿದ್ದ ಬೌಲರ್ಸ್​, ಚಾಂಪಿಯನ್ಸ್ ಟ್ರೋಫಿ ನಂತರ ಹೆಚ್ಚಾಗಿ ವಿಕೆಟ್​ಗಳನ್ನ ಪಡೆಯುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಶಿಸ್ತುಬದ್ಧವಾಗಿ ಬೌಲಿಂಗ್ ಮಾಡ್ತಿದ್ದಾರೆ. ಇದಕ್ಕೆ ಕಾರಣ ಬಿಸಿಸಿಐ ಮಾಸ್ಟರ್ ಪ್ಲಾನ್. ಹಾಗಾದ್ರೆ ಟೀಮ್ ಮ್ಯಾನೇಜ್​ಮೆಂಟ್ ಮತ್ತು ಸೆಲೆಕ್ಟರ್ಸ್ ಮಾಡ್ತಿರೋ ಪ್ಲಾನ್ ಆದ್ರೂ ಏನು ಗೊತ್ತಾ..?

ರೋಟೇಶನ್ ಪಾಲಿಸಿ ಯಶಸ್ಸಿನ ಗುಟ್ಟು

ಮೂರು ಮಾದರಿ ಕ್ರಿಕೆಟ್​ಗೂ ಬೌಲರ್​ಗಳು ಬದಲಾಗ್ತಿದ್ದಾರೆ. ಇದೇ ಬೌಲರ್​ಗಳ ಯಶಸ್ಸಿನ ಗುಟ್ಟಾಗಿದೆ. ಟೆಸ್ಟ್​, ಏಕದಿನ ಮತ್ತು ಟಿ20 ಪಂದ್ಯಗಳಿಗೆ ಬ್ಯಾಟ್ಸ್​ಮನ್​ಗಳು ಹೆಚ್ಚಾಗಿ ಬದಲಾಗಲ್ಲ. ಆದ್ರೆ ಬೌಲರ್ಸ್ ಪೂರ್ತಿ ಬದಲಾಗುತ್ತಾರೆ. ಬೌಲಿಂಗ್ ಬಲಿಷ್ಠಗೊಳಿಸಬೇಕು ಅನ್ನೋ ಉದ್ದೇಶದಿಂದ ರೋಟೇಶನ್ ಪಾಲಿಸಿ ಮಾಡಲಾಗ್ತಿದೆ. 2019ರ ವಿಶ್ವಕಪ್ ವೇಳೆಗೆ ಬೌಲಿಂಗ್ ವಿಭಾಗ ಬಲಿಷ್ಠಗೊಳಿಸಿ ಟಾಪ್ ಕ್ಲಾಸ್ ಬೌಲರ್​ಗಳನ್ನ ಮಹಾ ಟೂರ್ನಿಯಲ್ಲಿ ಆಡಿಸೋ ಪ್ಲಾನ್​ನಲ್ಲಿದೆ ಬಿಸಿಸಿಐ. ಹೀಗಾಗಿಯೇ ಪದೇಪದೇ ಬೌಲರ್ಸ್ ಚೇಂಜ್ ಆಗ್ತಿರೋದು.

ಚಹಲ್​-ಕುಲ್​ದೀಪ್ ಸೀಮಿತ ಓವರ್​​​​​​​​​​​​​​​​​ಗಳ ಪಂದ್ಯಕ್ಕೆ ಫಿಕ್ಸ್

ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಪಾಕಿಸ್ತಾನ ಬ್ಯಾಟ್ಸ್​ಮನ್​ಗಳಿಂದ ಭಾರತೀಯ ಬೌಲರ್ಸ್​ ಹಿಗ್ಗಾಮುಗ್ಗಿ ದಂಡಿಸಿಕೊಂಡಿದ್ದೇ ಬಂತು, ಟೀಂ  ಇಂಡಿಯಾ ಪ್ಲಾನೇ ಚೇಂಜ್ ಆಯ್ತು. ಅಲ್ಲಿಂದ ಡಿಸೈಡ್ ಆಯ್ತು. ಬ್ಯಾಕ್ ಅಪ್ ಬೌಲರ್ಸ್​ ಇಟ್ಟುಕೊಳ್ಳಬೇಕು ಅಂತ. ಹೀಗಾಗಿ ಈಗ ಭುವನೇಶ್ವರ್ ಕುಮಾರ್ ಮತ್ತು ಜಸ್​ಪ್ರೀತ್ ಬುಮ್ರಾ ಸೀಮಿತ ಓವರ್​ಗಳ ಪಂದ್ಯಗಳಿಗೆ ಫಿಕ್ಸ್​ ಆಗಿದ್ದಾರೆ. ಅವರಿಬ್ಬರಿಗೆ ಖಾಯಂ ಸ್ಥಾನ. ಕೇವಲ ಒಂಡೇ-ಟಿ20 ಆಡುವ ಈ ಇಬ್ಬರು ಬೌಲರ್ಸ್ ಸದ್ಯಕ್ಕೆ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ.

ಇನ್ನು ಯುಜವೇಂದ್ರ ಚಹಾಲ್ ಮತ್ತು ಕುಲ್​ದೀಪ್ ಯಾದವ್ ಸಹ ಸೀಮಿತ ಓವರ್​ಗಳಿಗೆ ಫಿಕ್ಸ್ ಆಗಿದ್ದಾರೆ. ಶ್ರೀಲಂಕಾ ಸರಣಿಗೆ ಪ್ರಯೋಗಕ್ಕೆ ಆಡಿಸಲಾಯ್ತು. ಆದ್ರೆ ಅವರು ಕ್ಲಿಕ್ ಆದ್ರು. ಅಲ್ಲಿಂದ ಅವರಿಗೆ ಸೀಮಿತ ಓವರ್​ಗಳ ಪಂದ್ಯಗಳಿಗೆ ಸ್ಥಾನ ನೀಡಲಾಗ್ತಿದೆ. ಅವರು ಸಹ ಉತ್ತಮ ಪ್ರದರ್ಶನವನ್ನೇ ನೀಡ್ತಿದ್ದಾರೆ.

ಟೆಸ್ಟ್ ಆಡಲಿದ್ದಾರೆ ಶಮಿ-ಉಮೇಶ್

ಈಗಾಗಲೇ ಮೂರು ಮಾದರಿ ಕ್ರಿಕೆಟ್​ನಲ್ಲಿ ಬೆಸ್ಟ್ ಬೌಲರ್​ ಎನಿಸಿಕೊಂಡಿರುವ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸದ್ಯ ಸೀಮಿತ ಓವರ್​ಗಳ ಪಂದ್ಯಗಳನ್ನ ಆಡ್ತಿಲ್ಲ. ಅವರು ಕೇವಲ ಟೆಸ್ಟ್​ ಪಂದ್ಯಗಳಿಗೆ ಫಿಕ್ಸ್ ಆಗಿದ್ದಾರೆ. ಈ ನಾಲ್ವರು ತಾವೇನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಇವರು ಯಾವಾಗ ಬೇಕಾದ್ರೂ ಸೀಮಿತ ಓವರ್​ಗಳ ಪಂದ್ಯಗಳಿಗೆ ಸೆಲೆಕ್ಟ್ ಆಗ್ಬಹುದು. ಆದ್ರೆ ಸದ್ಯಕ್ಕೆ ಅವರು ಕೇವಲ ಟೆಸ್ಟ್​ಗೆ ಸೀಮಿತವಾಗಿದ್ದಾರೆ ಅಷ್ಟೇ.

ವಿಶ್ವಕಪ್'​ಗೆ ಬೆಸ್ಟ್​ ಬೌಲರ್ಸ್​ ಸೆಲೆಕ್ಟ್

ಸದ್ಯ ಬೆಸ್ಟ್​ ಬೌಲರ್​ಗಳ ದಂಡೇ ಟೀಂ ಇಂಡಿಯಾದಲ್ಲಿದೆ. ಆದ್ರೆ 2019ರ ವಿಶ್ವಕಪ್​​​​​​​​​​​​​ ಇವರಲ್ಲಿ ಯಾರು ಬೆಸ್ಟ್​ ಅನ್ನೋದು ಗೊತ್ತಾಗಲಿದೆ. ಅಂತ ಬೌಲರ್​ಗಳು ಮಾತ್ರ ವರ್ಲ್ಡ್​ಕಪ್​​ಗೆ ಸೆಲೆಕ್ಟ್ ಮಾಡಲಾಗುತ್ತೆ. ಅಲ್ಲಿಯವರೆಗೂ ಈ ರೊಟೇಶನ್ ಪಾಲಿಸಿ ಮುಂದುವರೆಯುತ್ತೆ. ಯಾರ ಸ್ಥಾನವೂ ತಂಡದಲ್ಲಿ ಖಾಯಂ ಇಲ್ಲ. ಹೀಗಾಗಿ ಟೀಮ್​ನಿಂದ ಯಾರು ಡ್ರಾಪ್ ಆದ್ರು ಬೇಸರಪಟ್ಟುಕೊಳ್ಳೋ ಅವಶ್ಯಕತೆ ಇಲ್ಲ.

 

 

click me!