ಅಂಡರ್-17 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕಾಗಿ ಇಂದು ಇಂಗ್ಲೆಂಡ್-ಸ್ಪೇನ್ ಸೆಣಸು

By Suvarna Web DeskFirst Published Oct 28, 2017, 12:45 PM IST
Highlights

ಅ.6ರಿಂದ ಆರಂಭವಾಗಿದ್ದ ಪಂದ್ಯಾವಳಿ ಇಂದು ಅಂತ್ಯಗೊಳ್ಳಲಿದೆ. ಟೂರ್ನಿಯಲ್ಲಿ ಇಂಗ್ಲೆಂಡ್ 6 ಪಂದ್ಯಗಳಿಂದ 18 ಗೋಲು ಗಳಿಸಿದ್ದರೆ, ಸ್ಪೇನ್ 15 ಗೋಲು ದಾಖಲಿಸಿದೆ.

ಕೋಲ್ಕತಾ(ಅ.28): 2017 ಫಿಫಾ ಅಂಡರ್ 17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಅಂತಿಮ ಘಟ್ಟ ತಲುಪಿದ್ದು, 22 ದಿನಗಳ ಕಾಲ ನಡೆದ ಫುಟ್ಬಾಲ್ ಹಬ್ಬ ಕ್ಲೈಮ್ಯಾಕ್ಸ್'ಗೆ ಆತಿಥ್ಯ ವಹಿಸಲು ಕೋಲ್ಕತಾ ಸಜ್ಜಾಗಿದೆ. ಯುರೋಪ್‌'ನ ಎರಡು ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಸ್ಪೇನ್ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

17 ವರ್ಷದೊಳಗಿನ ಫುಟ್ಬಾಲ್ ವಿಶ್ವಕಪ್‌'ನಲ್ಲಿ ಇದೇ ಮೊದಲ ಬಾರಿಗೆ ಯುರೋಪ್‌'ನ ರಾಷ್ಟ್ರಗಳು ಸೆಣಸಾಡುತ್ತಿದ್ದು, ಗೆದ್ದ ತಂಡಗಳು ಹೊಸ ಚಾಂಪಿಯನ್ ಎಂಬ ಹಣೆಪಟ್ಟಿ ಪಡೆಯಲಿವೆ. ಇಲ್ಲಿನ ಸಾಲ್ಟ್‌'ಲೇಕ್ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯಲಿದೆ.

ಅ.6ರಿಂದ ಆರಂಭವಾಗಿದ್ದ ಪಂದ್ಯಾವಳಿ ಇಂದು ಅಂತ್ಯಗೊಳ್ಳಲಿದೆ. ಟೂರ್ನಿಯಲ್ಲಿ ಇಂಗ್ಲೆಂಡ್ 6 ಪಂದ್ಯಗಳಿಂದ 18 ಗೋಲು ಗಳಿಸಿದ್ದರೆ, ಸ್ಪೇನ್ 15 ಗೋಲು ದಾಖಲಿಸಿದೆ.

ಇಂಗ್ಲೆಂಡ್ ಅಜೇಯ ತಂಡ: ಇಂಗ್ಲೆಂಡ್‌'ಗಿದು ಮೊದಲ ಫೈನಲ್ ಆಗಿದೆ. ಟೂರ್ನಿಯಲ್ಲಿ ಇಂಗ್ಲೆಂಡ್ ಅಜೇಯವಾಗಿದ್ದು, ಆಡಿರುವ ಎಲ್ಲ ಪಂದ್ಯಗಳಲ್ಲೂ ಜಯಿಸಿದೆ. ಸೆಮೀಸ್‌'ನಲ್ಲಿ ಬ್ರೆಜಿಲ್ ಎದುರು ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಸುತ್ತಿಗೇರಿದೆ.

ಜಯದ ವಿಶ್ವಾಸದಲ್ಲಿ ಸ್ಪೇನ್: ಇನ್ನು ಸ್ಪೇನ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಬ್ರೆಜಿಲ್ ಎದುರು ಸೋಲು ಕಂಡಿತ್ತು. ಉಳಿದಂತೆ ಎಲ್ಲ ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಸ್ಪೇನ್ 1991, 2003 ಮತ್ತು 2007ರಲ್ಲಿ ಫೈನಲ್‌'ನಲ್ಲಿ ನಿರಾಸೆ ಅನುಭವಿಸಿತ್ತು.

ಕಂಚಿನ ಪದಕಕ್ಕಾಗಿ ಬ್ರೆಜಿಲ್- ಮಾಲಿ ನಡುವೆ ಸೆಣಸಾಟ

ಸೆಮಿಫೈನಲ್ ಪಂದ್ಯಗಳಲ್ಲಿ ಸ್ಪೇನ್ ಎದುರು ಸೋಲು ಕಂಡಿದ್ದ ಮಾಲಿ ಹಾಗೂ ಇಂಗ್ಲೆಂಡ್ ಎದುರು ಪರಾಭವ ಹೊಂದಿದ್ದ ಬ್ರೆಜಿಲ್ ತಂಡಗಳು ಕಂಚಿನ ಪದಕಕ್ಕಾಗಿ ಸೆಣಸಲಿವೆ. ಸಂಜೆ 5 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಜಯದ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿವೆ.

ಇಂದಿನ ಪಂದ್ಯಗಳು:

3ನೇ ಸ್ಥಾನಕ್ಕಾಗಿ ಬ್ರೆಜಿಲ್/ಮಾಲಿ ಸಂಜೆ-5ಕ್ಕೆ,

ಫೈನಲ್ ಪಂದ್ಯ ಇಂಗ್ಲೆಂಡ್/ಸ್ಪೇನ್ ರಾತ್ರಿ 8ಕ್ಕೆ

ಸ್ಥಳ: ಕೋಲ್ಕತಾ

 

click me!