ಫುಟ್'ಬಾಲ್ ಲೆಜೆಂಡ್ ಮೆಸ್ಸಿಯನ್ನೂ ಮೀರಿಸಿದ ಕೊಹ್ಲಿ: ಕೊಹ್ಲಿಯ ಕ್ರಿಕೆಟೇತರ ಗಳಿಕೆ ಎಷ್ಟು ಗೊತ್ತಾ..?

Published : Oct 27, 2017, 03:38 PM ISTUpdated : Apr 11, 2018, 12:36 PM IST
ಫುಟ್'ಬಾಲ್ ಲೆಜೆಂಡ್ ಮೆಸ್ಸಿಯನ್ನೂ ಮೀರಿಸಿದ ಕೊಹ್ಲಿ: ಕೊಹ್ಲಿಯ ಕ್ರಿಕೆಟೇತರ ಗಳಿಕೆ ಎಷ್ಟು ಗೊತ್ತಾ..?

ಸಾರಾಂಶ

ಸದ್ಯ ವಿಶ್ವ ಕ್ರಿಕೆಟ್'​​​ನಲ್ಲಿ ಅಬ್ಬರಿಸಿತ್ತಿರೋ ಕೊಹ್ಲಿ ಇದೇ ಕ್ರಿಕೆಟ್​​ ಲೋಕದಿಂದ ಕೋಟಿಕೋಟಿ ಹಣ ಸಂಪಾದಿಸುತ್ತಿದ್ದಾರೆ. ಅವರ ಪರ್ಸನಲ್​ ಲೈಫ್ ಬಿಂದಾಸಾಗಿರಲು ಕ್ರಿಕೆಟೇ ಕಾರಣ ಎಂಬುವುದು ಎಲ್ಲರ ಅಭಿಪ್ರಾಯ. ಆದರೆ ನಿಜ ಸಂಗತಿ ಬೇರೆನೇ ಇದೆ. ಕೊಹ್ಲಿ ಕ್ರಿಕೆಟ್​​'ನಿಂದ ಎಷ್ಟು ಸಂಪಾದಿಸುತ್ತಿದ್ದಾರೋ ಅದರ ದುಪ್ಪಟ್ಟು ಜಸ್ಟ್​​ ಅವರ ಹೆಸರಿನಿಂದ ಸಂಪಾದಿಸುತ್ತಿದ್ದಾರೆ.

ಸದ್ಯ ವಿಶ್ವ ಕ್ರಿಕೆಟ್'​​​ನಲ್ಲಿ ಅಬ್ಬರಿಸಿತ್ತಿರೋ ಕೊಹ್ಲಿ ಇದೇ ಕ್ರಿಕೆಟ್​​ ಲೋಕದಿಂದ ಕೋಟಿಕೋಟಿ ಹಣ ಸಂಪಾದಿಸುತ್ತಿದ್ದಾರೆ. ಅವರ ಪರ್ಸನಲ್​ ಲೈಫ್ ಬಿಂದಾಸಾಗಿರಲು ಕ್ರಿಕೆಟೇ ಕಾರಣ ಎಂಬುವುದು ಎಲ್ಲರ ಅಭಿಪ್ರಾಯ. ಆದರೆ ನಿಜ ಸಂಗತಿ ಬೇರೆನೇ ಇದೆ. ಕೊಹ್ಲಿ ಕ್ರಿಕೆಟ್​​'ನಿಂದ ಎಷ್ಟು ಸಂಪಾದಿಸುತ್ತಿದ್ದಾರೋ ಅದರ ದುಪ್ಪಟ್ಟು ಜಸ್ಟ್​​ ಅವರ ಹೆಸರಿನಿಂದ ಸಂಪಾದಿಸುತ್ತಿದ್ದಾರೆ.

ಫೋರ್ಬ್ಸ್​ ರಿವೀಲ್​​ ಮಾಡಿದೆ ಕೊಹ್ಲಿ ಬ್ರಾಂಡ್​​ ವ್ಯಾಲ್ಯೂ​​​​​

ಅಮೇರಿಕಾದ ಮ್ಯಾಗಜೀನ್​​​ ಫೋಬ್ಸ್​​​​ ಬಿಡುಗಡೆ ಮಾಡಿರುವ ಅತೀ ಹೆಚ್ಚು ಬ್ರಾಂಡ್​​​ ವ್ಯಾಲ್ಯೂ ಹೊಂದಿರುವ ಟಾಪ್​ 10 ಕ್ರೀಡಾಪಟುಗಳ ಲಿಸ್ಟ್​​​ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​​​ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಫುಟ್​​​ಬಾಲ್​​ ಲೆಜೆಂಡ್​​ ಅರ್ಜೆಂಟಿನಾದ ಲಿಯಾನಲ್​ ಮೆಸ್ಸಿಯನ್ನ ಹಿಂದಿಕ್ಕಿದ್ದಾರೆ.  

ಕೊಹ್ಲಿ ಅನ್ನೋ ಹೆಸರೇ ಗಳಿಸುತ್ತೆ ಕೋಟಿ ಕೋಟಿ ಹಣ

ವಿರಾಟ್​​​ ಕೊಹ್ಲಿ ಕ್ರಿಕೆಟ್​​​'ನಿಂದ ಎಷ್ಟು ದುಡ್ಡು ಸಂಪಾದಿಸುತ್ತಾರೋ ಅದರ ದುಪಟ್ಟು ಜಸ್ಟ್​​​ ಅವರ ಹೆಸರು ಸಂಪಾಧಿಸುತ್ತಿದೆ. ಅದಕ್ಕೆ ಸಾಕ್ಷಿ ಫೋರ್ಬ್ಸ್​​ ಕಂಪನಿ ನೀಡಿರೋ ಅಂಕಿ ಅಂಶ.​​​ ಕ್ರೀಡಾಪಟುಗಳು ಪ್ರತಿನಿಧಿಸೋ ಕ್ರೀಡೆಯಿಂದ ಪಡೆಯೋ ವೇತನ ಮತ್ತು ಅದರಿಂದ ಸಿಗೋ ಬೋನಸ್​​​ಗಳನ್ನ ಹೊರತು ಪಡಿಸಿ, ಜಾಹಿರಾತು, ಖಾಸಗಿ ಕಾರ್ಯಕ್ರಮಗಳಿಂದ ಬರೋ ವರಮಾನದ ಆಧಾರದ ಮೇಲೆ ಫೋರ್ಬ್ಸ್​​​ ಸಿದ್ಧ ಪಡಿಸಿರೋ ಟಾಪ್​​ 10 ಕ್ರೀಡಾಪಟುಗಳಲ್ಲಿ ಕೊಹ್ಲಿ 7ನೇ ಸ್ಥಾನ ಪಡೆದಿದ್ದಾರೆ.

ವಿವಿಧ ಜಾಹೀರಾತುಗಳಲ್ಲಿ ಕಾಣಸಿಕೊಳ್ಳ ವಿರಾಟ್​​ ಕೊಹ್ಲಿ ಜಾಹಿರಾತು ಕಂಪನಿಗಳಿಂದ ಮತ್ತು ಖಾಸಗಿ ಕಾರ್ಯಕ್ರಮಗಳಿಂದ ವಿರಾಟ್​​ ಕೊಹ್ಲಿ ವರ್ಷಕ್ಕೆ 94.5 ಕೋಟಿ ಗಳಿಸುತ್ತಿದ್ದಾರೆ. ಇದರ ಮೂಲಕ 88 ಕೋಟಿ ಗಳಿಸುತ್ತಿರೋ ಮೆಸ್ಸಿಯನ್ನ ಹಿಂದಿಕ್ಕಿದ್ದಾರೆ. ಇನ್ನೂ ಟೆನಿಸ್​​​ ಲೆಜೆಂಡ್​​ ರೋಜರ್​​​ ಫೆಡರರ್​​​​ 241 ಕೋಟಿ ಗಳಿಸೋ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಈ ಅಂಕಿ ಅಂಶಗಳನ್ನ ನೋಡ್ತಿದ್ರೆ ಒಂದಂತೂ ಸ್ಪಷ್ಠವಾಗ್ತಿದೆ. ಕ್ರಿಕೆಟ್​​ನಿಂದ ಜೀವನ ಕಂಡುಕೊಂಡು ಅದನ್ನೇ ಉಸಿರಾಗಿಸಿರೋ ವಿರಾಟ್​​ ಕೊಹ್ಲಿ ಇಂದು ದುಡ್ಡು ಗಳಿಸುತ್ತಿರೋದು ಬೇರೆಯ ಮೂಲದಿಂದ. ಆದ್ರೆ ಒಂದಂತೂ ಸ್ಪಷ್ಟ ಅವರ ಈ ಬ್ರಾಂಡ್​​ ವ್ಯಾಲ್ಯು ಹೆಚ್ಚಾಗಲು ಕಾರಣ ಕೂಡ ಕ್ರಿಕೆಟ್ಟೇ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!
T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?