ಕುಂಬ್ಳೆ@10 : ಪಾಕಿಸ್ತಾನಕ್ಕೆ ಜಂಬೋ ಚಳ್ಳೆಹಣ್ಣು ತಿನ್ನಿಸಿ ಇಂದಿಗೆ 19 ವರ್ಷ

By Suvarna Web DeskFirst Published Feb 7, 2018, 2:23 PM IST
Highlights

ಕುಂಬ್ಳೆ ಕೈ ಚಳಕಕ್ಕೆ ಹೊಸತೊಂದು ಇತಿಹಾಸವೇ ನಿರ್ಮಾಣವಾಯ್ತು. ದೆಹಲಿ ಮೈದಾನದಲ್ಲಿ ಕೇವಲ 74 ರನ್ ನೀಡಿ ಪಾಕ್'ನ 10 ವಿಕೆಟ್ ಪಡೆಯುವಲ್ಲಿ ಜಂಬೋ ಯಶಸ್ವಿಯಾದರು.

ಇಂದಿಗೆ ಸರಿ ಸುಮಾರು 19 ವರ್ಷಗಳ ಹಿಂದೆ ಫಿರೋಜ್ ಷಾ ಕೋಟ್ಲಾದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಪಾಕಿಸ್ತಾನ ತಂಡದ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು.

ಫೆಬ್ರವರಿ 7, 1999ರಲ್ಲಿ ಗೂಗ್ಲಿ ಸ್ಪೆಷಲಿಸ್ಟ್ ಕುಂಬ್ಳೆ ವಿನೂತನ ದಾಖಲೆ ಬರೆದಿದ್ದರು. ಒಂದು ಹಂತದಲ್ಲಿ ಭಾರತ ನೀಡಿದ್ದ 420 ರನ್'ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ ಕುಂಬ್ಳೆ ಕೈ ಚಳಕಕ್ಕೆ ಹೊಸತೊಂದು ಇತಿಹಾಸವೇ ನಿರ್ಮಾಣವಾಯ್ತು. ದೆಹಲಿ ಮೈದಾನದಲ್ಲಿ ಕೇವಲ 74 ರನ್ ನೀಡಿ ಪಾಕ್'ನ 10 ವಿಕೆಟ್ ಪಡೆಯುವಲ್ಲಿ ಜಂಬೋ ಯಶಸ್ವಿಯಾದರು.

ಕುಂಬ್ಳೆ 10 ವಿಕೆಟ್ ಪಡೆದ ಕ್ಷಣ ಹೀಗಿತ್ತು...

ಕುಂಬ್ಳೆ ಸಾಧನೆಯನ್ನು ಸ್ಮರಿಸಿ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು ಹೀಗೆ.. 

Wow! 19years since bhai became forever. What an afternoon that was against Pakistan at Kotla - 10/74 .

— Virender Sehwag (@virendersehwag)

in 1999, Indian legend wrote himself into the record books by taking 1️⃣0️⃣ ∕ 7️⃣4️⃣ against Pakistan in the 2nd Test! pic.twitter.com/HtldN6dG6l

— ICC (@ICC)

ಈ ಮೊದಲು 1956ರಲ್ಲಿ ಇಂಗ್ಲೆಂಡ್'ನ ಜಿಮ್ ಲೇಕರ್ ಆಸ್ಟ್ರೇಲಿಯಾ ವಿರುದ್ಧ ಒಂದೇ ಇನಿಂಗ್ಸ್'ನಲ್ಲಿ ಎಲ್ಲಾ 10 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

click me!