
ನವದೆಹಲಿ(ಫೆ.07): ಇಂಟರ್ನೆಟ್, ಜಗತ್ತಿನ ಯಾವುದೋ ಮೂಲೆಯಲ್ಲಿರುವ ಹೃದಯಗಳನ್ನು ಹತ್ತಿರ ತರಬಹುದು. ಆದರೆ, ಅದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ, ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ, ಮೂವರಲ್ಲಿ ಇಬ್ಬರಿಗೆ ತಮ್ಮ ಸಂಗಾತಿ ಅಥವಾ ಸಂಬಂಧಿಗಳ ಮೇಲಿನ ಆಸಕ್ತಿಗಿಂತ ಹೆಚ್ಚು ಆಸಕ್ತಿ, ತಾವು ಬಳಕೆ ಮಾಡುವ ಇಂಟರ್ನೆಟ್ ಸಂಪರ್ಕಿತ ಫೋನ್ ಅಥವಾ ಉಪಕರಣದ ಮೇಲಿದೆ ಎನ್ನಲಾಗಿದೆ.
ಭದ್ರತಾ ಪರಿಹಾರ ಪೂರೈಕೆದಾರ ಮ್ಯಾಕಫೀ ನಡೆಸಿದ ಸಮೀಕ್ಷೆಯನುಸಾರ, ನಾಲ್ವರಲ್ಲಿ ಮೂವರು ತಮ್ಮ ಉಪಕರಣಗಳ ಜೊತೆಗೆ ಸಂಗಾತಿಯತ್ತ ಗಮನ ನೀಡಲು ಹರಸಾಹಸಪಡುತ್ತಾರೆ. ತಂತ್ರಜ್ಞಾನದ ಬಳಕೆಯಿಂದ ಸಂಬಂಧಗಳು ದೂರವಾಗುತ್ತಿವೆ ಎಂದು ಶೇ.77 ಮಂದಿ ಒಪ್ಪಿದ್ದಾರೆ. ಜೊತೆಗಿರುವಾಗ ಜೊತೆಗಿರುವವರಿಗಿಂತ ಹೆಚ್ಚಾಗಿ ಫೋನ್'ನಲ್ಲೇ ಮುಳುಗಿರುವ ಬಗ್ಗೆ ಬಂಧುಗಳು, ಸಂಗಾತಿ, ಸ್ನೇಹಿತರ ಜೊತೆ ವಾಗ್ವಾದ ನಡೆಸಿದ್ದ ಬಗ್ಗೆ ಶೇ.81 ಮಂದಿ ತಿಳಿಸಿದ್ದಾರೆ.
ಸಂಗಾತಿ ಜೊತೆಗಿರುವಾಗ ಮೊಬೈಲ್ ಫೋನ್ ಬಳಕೆಗೆ ಕಡ್ಡಾಯ ನಿಯಂತ್ರಣ ಹೇರುವುದಕ್ಕೆ ಶೇ.20 ಮಂದಿಗೆ ಮಾತ್ರ ಸಾಧ್ಯವಾಗಿದೆ. ಕುತೂಹಲಕಾರಿ ವಿಷಯವೆಂದರೆ, ಶೇ.45 ಮಂದಿ ತಮ್ಮ ಸಂಗಾತಿಯ ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್ ಬಳಕೆಯ ಉಪಕರಣದ ಮೇಲೆ ಗೂಢಾಚಾರಿಕೆ ಮಾಡಿದ್ದಾರೆ ಎಂಬುದೂ ಸಮೀಕ್ಷೆಯಿಂದ ತಿಳಿದು ಬಂದಿದೆ. ಬೆಂಗಳೂರು, ದೆಹಲಿ, ಮುಂಬೈಯಲ್ಲಿ ಈ ಸಮೀಕ್ಷೆ ನಡೆದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.