ಬಲಿಷ್ಠ ಆಸೀಸ್'ಗಳನ್ನ ಹೆಚ್ಚು ಕಾಡಿರುವುದು ಯಾರು?: ನಂ.1 ತಂಡಕ್ಕೆ ಸಿಂಹಸ್ವಪ್ನನಾಗಿದ್ದು ಈ ಕ್ರಿಕೆಟಿಗ

Published : Oct 03, 2017, 03:22 PM ISTUpdated : Apr 11, 2018, 12:57 PM IST
ಬಲಿಷ್ಠ ಆಸೀಸ್'ಗಳನ್ನ ಹೆಚ್ಚು ಕಾಡಿರುವುದು ಯಾರು?: ನಂ.1 ತಂಡಕ್ಕೆ ಸಿಂಹಸ್ವಪ್ನನಾಗಿದ್ದು ಈ ಕ್ರಿಕೆಟಿಗ

ಸಾರಾಂಶ

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಯಾವ ಆಟಗಾರ ಹೆಚ್ಚು ಅಬ್ಬರಿಸಿದ್ದಾನೆ ಅಂದರೆ ಎಲ್ಲರೂ ಥಟ್​​ ಅಂತ ಸಚಿನ್​ ತೆಂಡೂಲ್ಕರ್​​, ವಿವಿಎಸ್​​ ಲಕ್ಷ್ಮಣ್​, ಯುವರಾಜ್​ ಸಿಂಗ್​ ಅಂತಾರೆ. ಆದ್ರೆ ನಾವೇಳ್ತಿದ್ದೀವಿ ಇವಱರೂ ಕಾಂಗರುಗಳ ವಿರುದ್ಧ ಹೆಚ್ಚು ಆರ್ಭಟಿಸಿಯೇ ಇಲ್ಲ. ಹಾಗಾದ್ರೆ ಯಾರಪ್ಪ ಕಾಂಗರೂಗಳನ್ನ ಕ್ರಿಕೆಟ್​​ ಲೋಕದಲ್ಲಿ ಇನ್ನಿಲ್ಲದಂತೆ ಕಅಡಿರೋದು ಅಂತೀರಾ..? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ವಿಷಯ

ಸದ್ಯ ಆಸ್ಟ್ರೇಲಿಯಾ ಕೊಹ್ಲಿ ಹುಡುಗರ ಮುಷ್ಠಿಗೆ ಸಿಲುಕಿ ನರಳಾಡುತ್ತಿದೆ. ಬ್ಯಾಕ್​ ಟು ಬ್ಯಾಕ್​ ಸೋಲುಗಳನ್ನ ಕಂಡು ಕಂಗಾಲಾಗಿದೆ. ಆದ್ರೆ ಇದೇ ಆಸೀಸ್​​ ಕೆಲ ವರ್ಷಗಳಿಂದೆ ಹೀಗಿರಲಿಲ್ಲ. ದಶಕಗಳ ಕಾಲ ಕ್ರಿಕೆಟ್​​ ಲೋಕವನ್ನ ಆಳಿ, ದೊರೆಗಳಂತೆ ಮೆರದಿತ್ತು. ಇವರುಗಳ ವಿರುದ್ಧ ಆರ್ಭಟಿಸೋದು ಅಂದ್ರೆ ಸುಲಭದ ಮಾತಾಗಿರಲಿಲ್ಲ. ಹೀಗಿದ್ರೂ ಕೆಲವರು ಅಂದ್ರೆ ಟೀಂ ಇಂಡಿಯಾದ ಸಚಿನ್​, ಲಕ್ಷ್ಮಣ್​ ಮತ್ತು ಯುವಿ ಕೆಲವೊಮ್ಮೆ ಆರ್ಭಟಿಸಿ ಆಸೀಸ್​ಗಳಿಗೆ ಶಾಕ್​ ನೀಡಿದ್ದಾರೆ. ಆದ್ರೆ ನಿಜಕ್ಕೂ ಆಸ್ಟ್ರೇಲಿಯನ್ನರನ್ನ ಹೆಚ್ಚು ಕಾಡಿದ್ದು, ಕಾಡುತ್ತಿರುವುದು ಯಾರು ಎಂದು ಹುಡುಕ ಹೊರಟ ನಮಗೆ ಸಿಕ್ಕಿದ್ದು ಟೀಂ ಇಂಡಿಯಾದ ಹಿಟ್​​ಮ್ಯಾನ್​ ರೋಹಿತ್​​ ಶರ್ಮಾ.

ಶರ್ಮಾ ಆರ್ಭಟಕ್ಕೆ ಕಾಂಗರೂಗಳು ಧೂಳೀಪಟ

ರೋಹಿತ್​ ಶರ್ಮಾ ಕ್ರಿಕೆಟ್​​ ಇತಿಹಾಸದಲ್ಲಿ ಬಲಿಷ್ಠ ಕಾಮಗರೂಗಳನ್ನ ಹೇಗೆಲ್ಲಾ ಕಾಡಿದ್ದಾರೆ ಅನ್ನೋದಕ್ಕೆ ಬೆಸ್ಟ್​​​ ಎಕ್ಸಾಂಪಲ್​ ಮೊನ್ನೆ ಮುಕ್ತಾಯವಾದ ಏಕದಿನ ಸರಣಿ. 5ಕ್ಕೆ ಏದೂ ಪಂದ್ಯದಲ್ಲು ಅದ್ಭುತ ಬ್ಯಾಟಿಂಗ್​ ಮಾಡಿದ ರೋಹಿತ್​​ ಸ್ಮಿತ್​ ಪಡೆಯನ್ನ ಗೋಳುಹೊಯ್ದುಕೊಂಡ್ರು.

ಆಸೀಸ್​​ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್​ ಶರ್ಮ ಪ್ರದರ್ಶನ ಹೀಗಿದೆ. ಒಟ್ಟು 5 ಪಂದ್ಯಗಳಲ್ಲಿ ಬ್ಯಾಟಿಂಗ್​ ಮಾಡಿರುವ ರೋಹಿತ್​ ಒಟ್ಟು 296 ರನ್​ಗಳನ್ನ ಗಳಿಸಿದ್ದಾರೆ. 59.20ರ ಸರಾಸರಿಯಲ್ಲಿ ಮ್ಯಾಟಿಂಗ್​ ಮಾಡಿದ್ದು 104.22ರ ಸ್ಟ್ರೈಕ್​ ರೇಟ್​​ ಹೊಂದಿದ್ರು. ಇದರಲ್ಲಿ 1 ಆತಕ ಮತ್ತು 2 ಅರ್ಧಶತಕ ದಾಖಲಿಸಿದ್ದಾರೆ. ಮೊನ್ನೆಯ ಕೊನೆಯ ಪಂದ್ಯದಲ್ಲಿ ಗಳಿಸಿದ್ದ 125ರನ್​ ಈ ಸರಣಿಯಲ್ಲಿ ಶರ್ಮಾರ ಬೆಸ್ಟ್​​​ ಸ್ಕೋರ್​​ ಆಗಿದೆ.

ಇದು ಜಸ್ಟ್​​​ ಎಕ್ಸಾಂಪಲ್​ ಅಷ್ಟೇ. ಇನ್ನೂ ಅವರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ರೆಕಾರ್ಡ್​ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ. ರೋಹಿತ್​​ ಕಾಮಗರೂಗಳನ್ನ ಹೀಗೆಲ್ಲಾ ಕಾಡಿದ್ದಾರ ಅಂತ ದಂಗಾಗಾ್ತೀರಾ.

ಒಟ್ಟಾರೆಯಾಗಿ ಆಸೀಸ್​​ ವಿರುದ್ಧ ಶರ್ಮಾ ರೆಕಾರ್ಡ್​ ಇಂತಿದೆ. ಇದುವರೆಗೂ 28 ಪಂದ್ಯಗಳನ್ನಾಡಿರುವ ರೋಹಿತ್​ ಒಟ್ಟು 1593 ರನ್​ಗಳನ್ನ ಗಳಿಸಿದ್ದಾರೆ. 66.38ರ ಸರಾಸರಿಯಲ್ಲಿ ಬ್ಯಾಟಿಂಗ್​ ಮಾಡಿದ್ದು 5 ಅರ್ಧಶತಕ ಮತ್ತು 6 ಶತಕ ದಾಖಲಿಸಿದ್ದಾರೆ. 209 ರನ್​ಗಳಿಸಿರೋದು ಶರ್ಮಾರ ಬೆಸ್ಟ್​​​ ಸ್ಕೋರ್​​ ಆಗಿದೆ.

ಈ ರೆಕಾರ್ಡ್​ ನೋಡಿದ್ರೆನೇ ಗೊತ್ತಾಗುತ್ತೆ ಶರ್ಮಾ ಕಾಂಗರೂಗಳ ಪಾಲಿಗೆ ಎಷ್ಟು ಡೇಂಜರಸ್​​ ಎನ್ನಿಸಿಕೊಂಡಿದ್ದಾರೆ ಅಂತ. ಇದಿಷ್ಟೇ ಅಲ್ಲ ಕಾಂಗರೂಗಳ ವಿರುದ್ಧ ವಿಶ್ವದ ಬೆಸ್ಟ್​​​ ಆಟವನ್ನಾಡಿರುವ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆಸೀಸ್​​ ವಿರುದ್ಧ ಅತೀ ಹೆಚ್ಚು ಸರಾಸರಿ ಹೊಂದಿರುವ ಆಟಗಾರನೆನಿಸಿಕೊಂಡಿದ್ದಾರೆ.

ಆಸೀಸ್​​ ವಿರುದ್ಧ ಅತೀ ಹೆಚ್ಚು ಸರಾಸರಿ ಹೊಂದಿರುವ ಟಾಪ್​ 3 ಬ್ಯಾಟ್ಸ್​​ಮನ್​ ಪಟ್ಟಿ ಇಂತಿದೆ.  ಒಟ್ಟು 28 ಪಂದ್ಯಗಳಿಂದ 1542 ರನ್​ಗಳಿಸಿ 66.38 ರ ಸರಾಸರಿ ಹೊಂದಿ ಟೀಂ ಇಂಡಿಯಾದ ಹಿಟ್​ಮ್ಯಾನ್​ ಮೊದಲ ಸ್ಥಾನದಲ್ಲಿದ್ರೆ. ದಕ್ಷಿಣಾ ಆಫ್ರಿಕಾದ ಎಬಿ ಡಿವಿಲಿಯರ್ಸ್​​​ 26 ಪಂದ್ಯಗಳಿಂದ 1250 ರನ್​ಗಳನ್ನಗಳಿಸಿ 59.52 ರ ಸರಾಸರಿ ಹೊಂದಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ವಿಂಡೀಸ್​​ನ ಕ್ಲೈವ್​​ ಲಾಯ್ಡ್​​​ 32 ಪಂದ್ಯಗಳಿಂದ 976 ರನ್​ಗಳಿಸಿ 54.22 ರ ಸರಾಸರಿ ಕಾಪಾಡಿ ಆಸೀಸ್​​ ವಿರುದ್ಧ ಅತೀ ಹೆಚ್ಚು ಸರಾಸರಿ ಹೊಂದಿರುವ ಟಾಪ್​ 3ನೇ ಆಟಗಾರನೆನಿಸಿಕೊಂಡಿದ್ದಾರೆ.

ಈ ಅಂಕಿ ಅಂಶಗಳನ್ನ ನೋಡ್ತಿದ್ರೆನೇ ಗೊತ್ತಾಗುತ್ತೆ ಸದ್ಯ ಶರ್ಮಾರನ್ನ ಕಂಡ್ರೆ ಆಸೀಸ್​​ಗಳಿಗೆ ಎಷ್ಟು ಭಯ ಇದೆ ಅಂತ. ಮೊದಲು ಆಸೀಸ್​ಗಳು ಲಕ್ಷ್ಮಣ್​​ರನ್ನ ಕಂಡ್ರೆ ದಿಗಿಲು ಪಡ್ತಿದ್ರು. ಅವರ ನಂತರ ಈಗ ರೋಹಿತ್​ನನ್ನ ಕಂಡ್ರೆ ಭಯ ಪಡ್ತಿದ್ದಾರೆ. ಗಢಗಢ ಅಂತ ನಡಗುತ್ತಿದ್ದಾರೆ. ಇನ್ನೂ ಟಿ20 ಸರಣಿ ಬಾಕಿ ಇದೆ. ಅದರಲ್ಲಿ ನಮ್ಮ ಹಿಟ್​​ಮ್ಯಾನ್​ ಕಾಂಗರೂಗಳನ್ನ ಇನ್ನೆಷ್ಟು ಹೆದರಿಸುತ್ತಾರೋ ಕಾದು ನೋಡೋಣ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಮತ್ತೆ ಘರ್ಜಿಸಲು ರೆಡಿಯಾದ RCB ಐದು ಹುಲಿಗಳಿವು!
14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ