
ನವದೆಹಲಿ : ನವದೆಹಲಿ : ಪಾಕ್ ಹಾಗೂ ಭಾರತವನ್ನು ಎಂದಿಗೂ ಎಲ್ಲಾ ರಂಗದಲ್ಲಿಯೂ ಕೂಡ ವಿರೋಧಿಗಳೆಂದು ಬಿಂಬಿಸಲಾಗುತ್ತದೆ. ಯುದ್ಧರಂಗದಿಂದ ಹಿಡಿದು ಕ್ರಿಕೆಟ್ ಅಂಗಳದವರೆಗೂ ಅವರು ವಿರೋಧಿಗಳೆನ್ನುವುದು ಎಲ್ಲರ ಮನಸ್ಸಿನಲ್ಲಿರುವ ವಿಚಾರವಾಗಿದೆ.
ಆದರೆ ಈ ಘಟನೆಯಿಂದ ಆಟಗಾರರು ಕ್ರೀಡಾಂಗಣದಲ್ಲಿ ಎದುರಾಳಿಗಳಷ್ಟೇ ಅವರು ಶತ್ರುಗಳಲ್ಲ ಎನ್ನುವುದನ್ನು ಸಾಬೀತಾಗಿದೆ. ಕ್ರೀಡಾಂಗಣದಲ್ಲಿಯೇ ನಡೆದ ಘಟನೆಯು ಸಾಕ್ಷಿಯಾಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಅಂಡರ್ 19 ವರ್ಲ್ಡ್ ಕಪ್ ವೇಳೆ ಕ್ರೀಡಾಂಗಣದಲ್ಲಿ ಭಾರತದ ಆಟಗಾರ ಶುಭಂ ಗಿಲ್ ಶೂಲೇಸ್ ಬಿಚ್ಚಿದ್ದು ಅದನ್ನು ಪಾಕ್ ಫೀಲ್ಡರ್ ಓರ್ವ ಕಟ್ಟುತ್ತಿರುವ ಫೊಟೋ ಇದೀಗ ಭಾರೀ ವೈರಲ್ ಆಗಿದೆ. ಆತ ಕ್ರೀಡಾಂಗಣದಲ್ಲಿ ತಾವು ಎದುರಾಳಿಗಳು ಎನ್ನುವುದನ್ನು ಮರೆತು ಈ ರೀತಿಯಾಗಿ ನಡೆದುಕೊಂಡಿರುವುದು ಭಾರಿ ಸುದ್ದಿ ಮಾಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.