ಅಂದು ಸೋಲಿಗೆ ಕಾರಣರಾದ್ದರು, ಇಂದು ಗೆಲ್ಲಬೇಕಾದ್ರೆ ಈ ನಾಲ್ವರೇ ಟ್ರಂಪ್ ಕಾರ್ಡ್ಸ್

Published : Jul 03, 2022, 10:33 AM IST
ಅಂದು ಸೋಲಿಗೆ ಕಾರಣರಾದ್ದರು, ಇಂದು ಗೆಲ್ಲಬೇಕಾದ್ರೆ ಈ ನಾಲ್ವರೇ ಟ್ರಂಪ್ ಕಾರ್ಡ್ಸ್

ಸಾರಾಂಶ

ಇಂದು ನಡೆಯುವ ಡು ಆರ್​​ ಡೈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದರೆ, ಅಗಬಹುದಾದ ಭಾರಿ ಅವಮಾನವನ್ನ ತಪ್ಪಿಸಿಕೊಳ್ಳಬೇಕಾದರೆ ಯಾರು ಮೊದಲ ಪಂದ್ಯದ ಸೋಲಿಗೆ ಕಾರಣರಾಗಿದ್ದರೋ ಅವರೇ ಇಂದು ಗೆಲ್ಲಿಸಬೇಕಾಗಿದೆ. ಇಂದು ಈ ನಾಲ್ವರು ಕೀವೀಸ್​​​ಗಳಿಗೆ ಮಾರಕವಾದರೆ ಮಾತ್ರ ಟೀಂ ಇಂಡಿಯಾಗೆ ಗೆಲುವು.

ನ್ಯೂಜಿಲೆಂಡ್​​ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ ಅಷ್ಟರ ಮಟ್ಟಿಗೆ  ಹೀನಾಯವಾಗಿ ಸೋತು ಸುಣ್ಣವಾಗುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ. ಆದರೆ ಅಂದು ನಮ್ಮ ಹುಡುಗರು ಭಾರತದ ಕ್ರಿಕೆಟ್​​ ಪ್ರೇಮಿಗಳನ್ನ ನಿರಾಸೆ ಮೂಡಿಸಿದ್ದರು. ಆದರೆ ಅಂದು ಟೀಂ ಇಂಡಿಯಾ ಸೋಲು ಕಾರಣವಾಗಿದ್ದ ಬೌಲರ್​​ಗಳ ಹೀನಾಯ ಬೌಲಿಂಗ್​ ಪ್ರದರ್ಶನ.

ಅಂದು ಬ್ಯಾಟ್ಸ್​​'ಮನ್'​ಗಳು 280 ರನ್​ಗಳ ಬೃಹತ್​ ಮೊತ್ತ ಪೇರಿಸಿದ್ರೂ ಬೌಲರ್'​ಗಳು ಆ ಸ್ಕೋರ್​​'ನ್ನು ಡಿಫೆಂಡ್​​​ ಮಾಡಲು ವಿಫಲಾರಾಗಿದ್ರು. ಕೀವಿಸ್'​​​ಗಳ ವಿಕೆಟ್​​ ಪಡೆಯಲು ಪರದಾಡಿದ್ದರು. ಮಾರಕ ಬೌಲರ್ಸ್​​ಗಳಿದ್ರೂ ನ್ಯೂಜಿಲೆಂಡ್​​ ಬ್ಯಾಟ್ಸ್​​ಮನ್​ಗಳೆದುರು ಮಂಕಾಗಿಬಿಟ್ಟಿದ್ದರು.

ಅಂದು ಸೋಲಿಸಿದವರು ಇಂದು ಗೆಲ್ಲಿಸುತ್ತಾರಾ..?

ಅಂದು ಯಾವ ಬೌಲರ್ಸ್​​ ಟೀಂ ಇಂಡಿಯಾ ಸೋಲಿಗೆ ಕಾರಣರಾಗಿದ್ದರೋ ಇಂದು ಅದೇ ಬೌಲರ್ಸ್​ ಇಂದಿನ ಪಂದ್ಯಕ್ಕೆ ಟ್ರಂಪ್​ ಕಾರ್ಡ್'ಗಳಾಗಿದ್ದಾರೆ. ಸದ್ಯ ವಿಶ್ವ ಕ್ರಿಕೆಟ್​​'ನ ಬೆಸ್ಟ್​​ ಬೌಲರ್'​​​ಗಳಾದ ಯುಜವೇಂದ್ರ ಚಹಲ್​, ಕುಲ್​ದೀಪ್​​ ಯಾದವ್​​, ಭುವನೇಶ್ವರ್​​​ ಕುಮಾರ್​​​ ಮತ್ತು ಜಸ್​​ಪ್ರೀತ್​​ ಬುಮ್ರಾ ಇಂದು ಅಬ್ಬರಿಸಲೇಬೇಕಿದೆ.

ಉತ್ತಮ ಆರಂಭ ಕೊಡ್ತಾರ ಸ್ವಿಂಗ್​ ಬೌಲರ್ಸ್​

ಇಂದು ಕಿವೀಸ್​​​ ಬ್ಯಾಟ್ಸ್​​'ಮನ್​'ಗಳು ದೊಡ್ಡ ಮೊತ್ತ ಪೇರಿಸಬಾರ್ದು ಅವರನ್ನ ಆರಂಭದಲ್ಲೇ ಕಟ್ಟಿ ಹಾಕಬೇಕಾದ್ರೆ ಆರಂಭದಲ್ಲೇ ಅವರ ವಿಕೆಟ್​​ಗಳನ್ನ ಪಡೆಯಬೇಕು, ಅದರ ಜವಾಬ್ದಾರಿ ವೇಗಿಗಳಾದ ಭುವನೇಶ್ವರ್​​​ ಕುಮಾರ್​​ ಮತ್ತು ಜಸ್'​​ಪ್ರೀತ್​​​ ಬುಮ್ರಾ ಮೇಲಿದೆ. ಇವರಿಬ್ಬರೂ ಆರಂಭದಲ್ಲೇ ವಿಕೆಟ್​​ಗಳನ್ನ ಪಡೆದ್ರೆ ಮಾತ್ರ ಇಂದು ಟೀಂ ಇಂಡಿಯಾ ಮೇಲುಗೈ ಸಾಧಿಸಬಹುದು.

ಮಿಡಿಲ್​ ಓವರ್ಸ್'​​ನಲ್ಲಿ ಮಾರಕರಾಗ್ತಾರ ಸ್ಪಿನ್​ ಬ್ರದರ್ಸ್​​​..?

ಕೇವಲ ಆರಂಭದಲ್ಲಿ ವೇಗಿಗಳು ಕಾರ್ಯನಿರ್ವಹಿಸಿದ್ರೆ ಸಾಲದು ಮಿಡಿಲ್​ ಓವರ್'​​ಗಳಲ್ಲಿ ಭಾರತದ ಸ್ಪಿನ್​ ಮೋಡಿ ವರ್ಕ್​ ಆಗಬೇಕು. ಕಳೆದ ಪಂದ್ಯದಲ್ಲಿ ಮಿಡಿಲ್​ ಓವರ್​​'ಗಳಲ್ಲಿ ಕೀವಿಸ್​​ ಇಸಿಯಾಗಿ ರನ್​ ಗಳಿಸಿದ್ರು. ಆದ್ರೆ ಇಂದು ಹಾಗೆ ಆಗುವ ಹಾಗಿಲ್ಲ. ಇಂದು ರಿಸ್ಟ್​​ ಸ್ಪಿನ್ನರ್'​​ಗಳ ಮ್ಯಾಜಿಕ್​ ವರ್ಕ್​ ಆಗಲೇ ಬೇಕು. ಇಲ್ಲವಾದ್ರೆ ಹಿಂದಿನ ಪಂದ್ಯದಲ್ಲಿ ಆಗಿದ್ದೇ ಮರುಕಳಿಸುತ್ತದೆ.

ಈ ನಾಲ್ವರುಗಳ ಜೊತೆ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯಕೂಡ ತಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇವರಲ್ಲಿ ಯಾರಾದ್ರು ಒಬ್ರು ಕೈಕೊಟ್ರು ಮುಗೀತು ಸರಣಿ ಕೈ ತಪ್ಪಿ ಹೋಗಲಿದೆ. ಸರಣಿ ಸೋತ ಅವಮಾನ ಎದುರಿಸಬೇಕಾಗುತ್ತೆ. ಆದ್ರೆ ಹಾಗಾದೇ ಇರಲಿ ಇಂದು ಟೀಂ ಇಂಡಿಯಾ ಬೌಲರ್​ಗಳು ಕ್ಲಿಕ್​ ಆಗಲಿ ಎಂಬುದಷ್ಟೇ ನಮ್ಮ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌