ಕೊಹ್ಲಿಯಿಂದಲೇ ಖಾಯಂ ಸ್ಥಾನ ಮಾಡಿಕೊಂಡ ಐವರು: ಆ ಪಂಚ ಪಾಂಡವರು ಯಾರು ಗೊತ್ತಾ..?

Published : Aug 12, 2017, 03:18 PM ISTUpdated : Apr 11, 2018, 12:41 PM IST
ಕೊಹ್ಲಿಯಿಂದಲೇ ಖಾಯಂ ಸ್ಥಾನ ಮಾಡಿಕೊಂಡ ಐವರು: ಆ ಪಂಚ ಪಾಂಡವರು ಯಾರು ಗೊತ್ತಾ..?

ಸಾರಾಂಶ

ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ಕ್ಯಾಫ್ಟನ್. ಅವರು ಹೇಳಿದ್ದೇ ಆಗ್ಬೇಕು. ಹಠವಾದಿ ಅಂತ ಹೇಳ್ತೀವಿ. ಆದ್ರೆ ಅವರು ನಾಯಕನಾದ್ಮೇಲೆ ಐದಾರು ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರೆಲ್ಲರಿಗೂ ಟೀಂ ಇಂಡಿಯಾದಲ್ಲಿ ಈಗ ಖಾಯಂ ಸ್ಥಾನವಿದೆ. ಇದಕ್ಕೆ ಕಾರಣನೂ ವಿರಾಟ್ ಕೊಹ್ಲಿಯೇ. ಅದು ಹೇಗೆ? ಅಂತೀರಾ? ಹಾಗಾದ್ರೆ ಇಲ್ಲಿದೆ ನೋಡಿ ವಿವರ

ಸದ್ಯ ವರ್ಲ್ಡ್​ ಕ್ರಿಕೆಟ್​'ನಲ್ಲಿ ವಿರಾಟ್ ಕೊಹ್ಲಿ ಐಕಾನ್ ಪ್ಲೇಯರ್​. ಬೆಸ್ಟ್​ ಕ್ಯಾಪ್ಟನ್ ಆಗಲು ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಅವರ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ 28 ಟೆಸ್ಟ್​ಗಳಲ್ಲಿ 18 ಗೆದ್ದಿದೆ. 30 ಒಂಡೇ ಮ್ಯಾಚ್​​ನಲ್ಲಿ 22 ಗೆದ್ದಿದೆ. ಸದ್ಯದ ಅವರ ರೆಕಾರ್ಡ್​ ನೋಡಿದ್ರೆ ಇಂಡಿಯಾದ ಬೆಸ್ಟ್​ ಕ್ಯಾಪ್ಟನ್ ಆಗಿದ್ದಾರೆ. ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಆಡಿ ಬೆಳಕಿಗೆ ಬಂದ ಐವರು ಆಟಗಾರರಿದ್ದಾರೆ. ಅವರ ಪ್ರತಿಭೆಯನ್ನ ಬೆಳಕಿಗೆ ತಂದಿದ್ದೇ ವಿರಾಟ್ ಕೊಹ್ಲಿ.

ಮೂರು ಮಾದರಿಯಲ್ಲೂ ರಾಹುಲ್ ಆಡಲು ಕೊಹ್ಲಿಯೇ ಕಾರಣ

ಕರ್ನಾಟಕ ಕೆಎಲ್ ರಾಹುಲ್, ಐಪಿಎಲ್​​​ನಲ್ಲಿ ಆರ್​ಸಿಬಿ ಪರ ಮಿಂಚಿದ್ದೇ ತಡ. ಅವರನ್ನ ಟೀಂ ಇಂಡಿಯಾ ಮೂರು ಮಾದರಿ ಕ್ರಿಕೆಟ್​​​ನಲ್ಲಿ ಆಡಿಸಿದ್ದು ಇದೇ ವಿರಾಟ್ ಕೊಹ್ಲಿ. ಟೆಸ್ಟ್​ ತಂಡದಲ್ಲಿದ್ರೂ ಖಾಯಂ ಸ್ಥಾನವಿರಲಿಲ್ಲ. ಆದ್ರೆ ಆರ್​ಸಿಬಿ ತಂಡದ ಕ್ಯಾಪ್ಟನ್ ಆಗಿದ್ದ ಕೊಹ್ಲಿ, ಐಪಿಎಲ್​​​ನಲ್ಲಿ ರಾಹುಲ್ ಪ್ರತಿಭೆಯನ್ನ ಹತ್ತಿರದಿಂದ ನೋಡಿದ್ರು. ಹೀಗಾಗಿ ಅವರಿಗೆ ಮೂರು ಮಾದರಿ ತಂಡದಲ್ಲೂ ಆಡಲು ಅವಕಾಶ ನೀಡಿದ್ರು. ಇದನ್ನ ಸದ್ಭಳಕೆ ಮಾಡಿಕೊಂಡ ರಾಹುಲ್ ಈಗ ಮೂರು ಮಾದರಿ ತಂಡದಲ್ಲೂ ಖಾಯಂ ಸ್ಥಾನ ಮಾಡಿಕೊಂಡಿದ್ದಾರೆ. ರಾಹುಲ್ ಸದ್ಯ ಭರ್ಜರಿ ಪ್ರದರ್ಶನ ನೀಡುತ್ತಿರುವುದಕ್ಕೆ ವಿರಾಟ್ ಕೊಹ್ಲಿಯೇ ಕಾರಣ.

ಕೊಹ್ಲಿಯಿಂದಲೇ ಜಡೇಜಾ ವರ್ಲ್ಡ್​ ನಂಬರ್ ವನ್ ಆಗಿದ್ದು

ಕಳಪೆ ಫಾರ್ಮ್​ನಿಂದಾಗಿ ರವೀಂದ್ರ ಜಡೇಜಾ ಟೀಂ ಇಂಡಿಯಾದಿಂದಲೇ ಕಿಕೌಟ್ ಆಗಿದ್ದರು. ಆದ್ರೆ ವಿರಾಟ್ ಕ್ಯಾಪ್ಟನ್ ಆದ್ಮೇಲೆ ಜಡ್ಡು ಫರ್ಫಾಮೆನ್ಸ್​ ಅದ್ಭುತವಾಯ್ತು. ತಂಡಕ್ಕೆ ಕಮ್​ಬ್ಯಾಕ್ ಮಾಡಿದ ನಂತರ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ 19 ಟೆಸ್ಟ್​​ಗಳನ್ನಾಡಿರುವ ಜಡೇಜಾ, 106 ವಿಕೆಟ್ ಕಬಳಿಸಿದ್ದಾರೆ. ಸದ್ಯ ಐಸಿಸಿ ಟೆಸ್ಟ್​ ಬೌಲಿಂಗ್ ಮತ್ತು ಆಲ್​ರೌಂಡರ್ ಱಂಕಿಂಗ್​ನಲ್ಲಿ ಜಡೇಜಾ ನಂಬರ್​ ವನ್ ಸ್ಥಾನದಲ್ಲಿದ್ದಾರೆ. ಧೋನಿ ಜಡ್ಡು ಪ್ರತಿಭೆ ಗುರುತಿಸಿದ್ದರೂ, ಕೊಹ್ಲಿ ನಾಯಕತ್ವದಲ್ಲಿ ಅವರು ಕ್ಲಿಕ್ ಆಗಿದ್ದು.

ಪೂಜಾರ ಸ್ಟ್ರೈಕ್​ರೇಟ್ ಹೆಚ್ಚಿಸಿದ ವಿರಾಟ್

ಧೋನಿ ಕ್ಯಾಪ್ಟನ್ಸಿಯಲ್ಲಿ ಸೌರಾಷ್ಟ್ರದ ಚೇತೇಶ್ವರ್ ಪೂಜಾರ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಸ್ಟ್ರೈಕ್​ರೇಟ್​ ತೀರ ಕಮ್ಮಿಯಿದೆ ಅನ್ನೋ ಕಾರಣಕ್ಕೆ ಅವರನ್ನ ವೆಸ್ಟ್​ ಇಂಡೀಸ್ ವಿರುದ್ಧದ ಒಂದು ಟೆಸ್ಟ್​ಗೆ ವಿರಾಟ್ ಕೊಹ್ಲಿ ಡ್ರಾಪ್ ಸಹ ಮಾಡಿದ್ದರು. ಸ್ಟ್ರೈಕ್​ರೇಟ್​​ ಹೆಚ್ಚಿಸಿಕೊಂಡರಷ್ಟೇ ತಂಡದಲ್ಲಿ ಸ್ಥಾನ ಅಂತಲೂ ಎಚ್ಚರಿಕೆ ನೀಡಿದ್ದರು. ಅದಾದ ನಂತರ ಪೂಜಾರ ಆಟ ಮನಮೋಕವಾಯ್ತು. ಕೊಹ್ಲಿ ನಾಯಕತ್ವದಲ್ಲಿ ಪೂಜಾರ ಆಡಿರುವ 23 ಟೆಸ್ಟ್​ಗಳಲ್ಲಿ ಎರಡು ಸಾವಿರಕ್ಕೂ ಅಧಿಕ ರನ್ ಹೊಡೆದಿದ್ದಾರೆ. 7 ಶತಕ, 9 ಅರ್ಧಶತಕ ದಾಖಲಿಸಿದ್ದಾರೆ.

ಉಮೇಶ್ ಬೆನ್ನಿಗೆ ನಿಂತ ಕೊಹ್ಲಿ

ಫಾಸ್ಟ್ ಬೌಲರ್​ ಉಮೇಶ್ ಯಾದವ್ ವಿದೇಶಿ ಪಿಚ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಫಾರಿನ್​ನಲ್ಲಿ ಟೆಸ್ಟ್​ ಆಡುವಾಗ ಅವರಿಗೆ ಖಾಯಂ ಸ್ಥಾನವಿತ್ತು. ಆದ್ರೆ ಏಷ್ಯಾ ಖಂಡದಲ್ಲಿ ಅವರ ಫರ್ಫಾಮೆನ್ಸ್ ಅಷ್ಟಕಷ್ಟೆ. ಆದ್ರೆ ವಿರಾಟ್ ಕೊಹ್ಲಿ ಕ್ಯಾಪ್ಟನ್​ ಆದ್ಮೇಲೆ ಉಮೇಶ್​ ಬೌಲಿಂಗ್ ವೇಗ ಮತ್ತಷ್ಟು ಜಾಸ್ತಿಯಾಯ್ತು. ಭಾರತದಲ್ಲೂ ಅವರ ಪ್ರದರ್ಶನ ಅದ್ಭುತವಾಯ್ತು. ಕೊಹ್ಲಿ ನಾಯಕತ್ವದಲ್ಲಿ 21 ಟೆಸ್ಟ್​ ಆಡಿರುವ ಯಾದವ್ 45 ವಿಕೆಟ್ ಕಬಳಿಸಿದ್ದಾರೆ. 15 ಒಂಡೇ ಮ್ಯಾಚ್​ನಿಂದ 25 ವಿಕೆಟ್ ಪಡೆದಿದ್ದಾರೆ. ಅವರ ಹಿಂದಿನ ಸಾಧನೆ ನೋಡಿದ್ರೆ ಈಗಿನ ಸಾಧನೆ ಉತ್ತಮವಾಗಿದೆ.

ಶಮಿಯನ್ನ ಮತ್ತೆ ಕರೆತಂದ ವಿರಾಟ್

ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಾಗ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಮೊಹಮ್ಮದ್ ಶಮಿ, ದಿನ ಕಳೆದಂತೆ ಗಾಯಾಳುವಾಗಿ ಸೈಡ್​ಲೈನ್ ಆಗಿದ್ದರು. ಶಮಿಯನ್ನ ಎಲ್ಲರೂ ಮರೆತಿದ್ದರು. ಆದ್ರೆ ಕೊಹ್ಲಿ ಕ್ಯಾಪ್ಟನ್ಸಿ ಆದ್ಮೇಲೆ ಶಮಿಗೆ ಮತ್ತಷ್ಟು ಚಾನ್ಸ್ ಕೊಟ್ರು. ವಿರಾಟ್ ನಾಯಕತ್ವದ ಅಡಿಯಲ್ಲಿ ಶಮಿ ಆಡಿದ 14 ಟೆಸ್ಟ್​​ನಲ್ಲಿ 43 ವಿಕೆಟ್​ ಉರುಳಿಸಿದ್ದಾರೆ. 2015ರ ವರ್ಲ್ಡ್​ಕಪ್ ನಂತರ ಅವರು ಮತ್ತೆ ಒಂಡೇ ಮ್ಯಾಚ್ ಆಡಿದ್ದೇ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ. ಇವತ್ತು ಶಮಿ ಭಾರತದ ಟ್ರಂಪ್​ಕಾರ್ಡ್​ ಆಗಿದ್ದಾರೆ ಅಂದ್ರೆ ಅದಕ್ಕೆ ಕಾರಣ ವಿರಾಟ್.

ಈ ಐವರು ಆಟಗಾರರು ಟೀಂ ಇಂಡಿಯಾದಲ್ಲಿದ್ದರೂ ಖಾಯಂ ಸ್ಥಾನವಿರಲಿಲ್ಲ. ಆದ್ರೆ ಕೊಹ್ಲಿ ಕ್ಯಾಪ್ಟನ್ ಆದ್ಮೇಲೆ ಈ ಐವರ ಪ್ರದರ್ಶನ ವೃದ್ಧಿಯಾಗಿದೆ. ಜೊತೆಗೆ ಅವರೆಲ್ಲರಿಗೂ ಟೀಂ ಇಂಡಿಯಾದಲ್ಲಿ ಈಗ ಖಾಯಂ ಸ್ಥಾನವಿದೆ. ಒಟ್ನಲ್ಲಿ ಕೊಹ್ಲಿ ಕ್ಯಾಪ್ಟನ್ ಆಗಿದ್ದು ಯಾರಿಗೆ ಹೆಲ್ಪ್ ಆಯ್ತೋ ಗೊತ್ತಿಲ್ಲ. ಈ ಐವರಿಗೆ ಮಾತ್ರ ವಿರಾಟ್ ನಾಯಕನಾಗಿದ್ದು ತುಂಬ ಹೆಲ್ಪ್ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!