
ಇನ್ನೇನು ಕೆಲವೇ ಕ್ಷಣಗಳಲ್ಲಿ ಟೀಂ ಇಂಡಿಯಾ 3ನೇ ಟೆಸ್ಟ್ನಲ್ಲಿ ಲಂಕಾ ಪಡೆಯನ್ನ ಎದುರಿಸುತ್ತಿದೆ. ಆದ್ರೆ ಟೆಸ್ಟ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಗೆಲ್ಲೋದು ಕನ್ಫರ್ಮ್ ಆಗಿದೆ. ಇಂದಿನಿಂದ ಆರಂಭವಾಗುವ ಕೊನೆಯ ಟೆಸ್ಟ್ ಅನ್ನೂ ಗೆದ್ದು ಸರಣಿಯನ್ನ ವೈಟ್ವಾಶ್ ಮಾಡೋದು ಗ್ಯಾರೆಂಟಿ.
ಟೀಂ ಇಂಡಿಯಾಗೆ ಸಿಕ್ಕಿದೆ ಗೆಲುವಿನ ವರ..!
ಇಂದು ಆರಂಭವಾಗಲಿರುವ ಟೆಸ್ಟ್ ಪಂದ್ಯವನ್ನ ಗೆಲ್ಲುವ ಉದ್ದೇಶದಿಂದ ಟೀಂ ಇಂಡಿಯಾ ಹುಡುಗರು ನಿನ್ನೆ ಭಾರತದ ಮಹಾಮಾತೆಯನ್ನ ಲಂಕಾದಲ್ಲಿ ಭೇಟಿ ಮಾಡಿದ್ರು. ಅವರ ಆಶೀರ್ವಾದ ಪಡೆದು ಈ ಟೆಸ್ಟ್ ಅನ್ನ ಗೆಲ್ಲಿಸು ಎಂದು ವರ ಬೇಡಿದ್ರು. ಆ ಮಹಾ ತಾಯಿಯೂ ಕೂಡ ಕೊಹ್ಲಿ ಹುಡುಗರಿಗೆ ಅವರು ಬೇಡಿದ ವರಕ್ಕೆ ತಥಾಸ್ತು ಎಂದಿದ್ದಾಳೆ.
ಕೊಹ್ಲಿ ಹುಡುಗರು ಭೇಟಿ ಮಾಡಿದ ಆ ಮಹಾತಾಯಿ ಯಾರು..?
ಅಷ್ಟಕ್ಕು ಟೀಂ ಇಂಡಿಯಾ ಹುಡುಗರು ಭೇಟಿ ಮಾಡಿದ ಆ ಮಹತಾಯಿ ಬೇಱರು ಅಲ್ಲ. ರಾಮಾಯಣದ ಮಹಾನ್ ಪ್ರತಿವ್ರತೆ, ಹಿಂದುಗಳ ಆರಾಧ್ಯ ದೇವಿ ಸೀತಾಮಾತೆಯನ್ನ. 7000 ವರ್ಷಗಳ ಹಿಂದೆ ಭಾರತದ ಅಯ್ಯೋಧ್ಯೆಯ ರಾಣಿ ಸೀತಾದೇವಿಯನ್ನ ಲಂಕಾದ ರಾಜ ರಾವಣ ಅಪಹರಣ ಮಾಡಿ ಅಶೋಕ ವನದಲ್ಲಿ ಬಂಧಿಯಾಗಿಟ್ಟಿದ್ದನು. ಒಂದು ಅಶೋಕ ವೃಕ್ಷದ ನೆರಳಲ್ಲಿ ಎಷ್ಟೋ ದಿನಗಳನ್ನ ಕಣ್ಣೀರು ಹಾಕುತ್ತಾ ಆ ಮಹಾತಾಯಿ ಕಳೆಯಬೇಕಿತ್ತು.
ಇದೇ ಅಶೋಕ ವನ ಈಗ ಸೀತಾಮಾತೆಯ ದೇವಸ್ಥಾನವಾಗಿದೆ. ಇದೇ ಪುಣ್ಯ ಸ್ಥಳಕ್ಕೆನೇ ನಿನ್ನೆ ಟೀಂ ಇಂಡಿಯಾ ಆಟಗಾರರು ಭೇಟಿ ನೀಡಿದ್ರು. 3ನೇ ಟೆಸ್ಟ್ನಲ್ಲಿ ಜಯಶೀಲನ್ನರಾಗಲು ಹರಸಮ್ಮ ಎಂದು ಕೈ ಮುಗಿದ್ರು.
ಹನುಮನ ಪಾದಕ್ಕೂ ನಮಸ್ಕರಿಸಿದ ಪ್ಲೇಯರ್ಸ್
ಕೇವಲ ಸೀತಾಮಾತೆಯ ದರ್ಶನ ಮಾತ್ರ ಪಡೆಯಲಿಲ್ಲ. ಹನುಮನ ಪಾದ ಸ್ಪರ್ಶವನ್ನೂ ಮಾಡಿ ಬಂದಿದ್ದಾರೆ. ಸೀತಾಮಾತೆ ಅಶೋಕ ವನದಲ್ಲಿ ಬಂಧಿಯಾಗಿದ್ದಾಗ ಅವರನ್ನ ಹುಡುಕಿಕೊಂಡು ಬರುವ ರಾಮನ ಭಂಟ ಹನುಮ ಸೀತಾದೇವಿಯ ಆಶೀರ್ವಾದ ಪಡೆದು, ರಾಮನು ಶೀಘ್ರದಲ್ಲಿಯೇ ನಿಮ್ಮನ್ನು ಇಲ್ಲಿಂದ ಕರೆದೊಯ್ಯುತ್ತಾರೆ ಎಂಬ ಸಂದೇಶ ನೀಡುತ್ತಾನೆ. ಈ ವೇಳೆ ಹನುಮನ ಹೆಜ್ಜೆ ಹಾಕಿದ ಗುರುತುಗಳು ಇಂದೂ ಸಹ ಅಲ್ಲಿವೆ. ಆ ಸ್ಥಳಕ್ಕೂ ಭೇಟಿ ನೀಡಿದ ಕೊಹ್ಲಿ ಟೀಂ ತಮ್ಮ ಇಷ್ಟಾರ್ಥಗಳನ್ನ ಬೇಡಿಕೊಂಡಿದೆ.
ಒಟ್ಟಿನಲ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಅಶೋಕ ವಾಟಿಕಾಗೆ ಭೇಟಿ ಕೋಟ್ಟು ತಮ್ಮ ಇಷ್ಟಾರ್ಥಗಳನ್ನ ಬೇಡಿಕೊಂಡು ನಿರಾಳರಾಗಿದ್ದಾರೆ. ಅದೇ ನಿರಾಳ ಮನೊಭಾವದಿಂದ ಕಣಕಿಳಿಯುತ್ತಿದ್ದಾರೆ. ಅವರಿಗೆ ಶುಭವಾಗಲಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.