ಜಹೀರ್-ಸಾಗರಿಕಾ ಮದುವೆ ಡೇಟ್ ಫಿಕ್ಸ್...?

By Suvarna Web DeskFirst Published Aug 11, 2017, 10:29 PM IST
Highlights

ಕಳೆದ ಕೆಲ ತಿಂಗಳಿಂದ ಜಮೈಕಾದಿಂದ ಹಿಡಿದು ನ್ಯೂಯಾರ್ಕ್, ದುಬೈನಲ್ಲಿ ಹಾರಾಡಿದ್ದ ಈ ಲವ್ ಬರ್ಡ್ಸ್'ಗಳು ತಮ್ಮ ಟ್ರಿಪ್'ಗಳ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್'ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು.

ಮುಂಬೈ(ಆ.11): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹಾಗೂ ಚಕ್ ದೇ ಇಂಡಿಯಾ ಖ್ಯಾತಿಯ ನಟಿ ಸಾಗಾರಿಕ ಘಾಟ್ಗೆ ಈ ವರ್ಷಾಂತ್ಯದಲ್ಲಿ ವಿವಾಹ ಬಂಧನಕ್ಕೊಳಪಡುವ ಸಾಧ್ಯತೆಯಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು, ಈ ಬಗ್ಗೆ ಸ್ವತಃ ಸಾಗಾರಿಕಾ ಘಾಟ್ಗೆ ಮುಂಬೈನ ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆಂದು ವರದಿಯಾಗಿದೆ. ಯುವರಾಜ್ ಸಿಂಗ್ ವಿವಾಹದಲ್ಲಿ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದ ಈ  ಜೋಡಿ, ಕಳೆದ ಏಪ್ರಿಲ್'ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇವರಿಬ್ಬರ ಮದುವೆ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ಕಳೆದ ಕೆಲ ತಿಂಗಳಿಂದ ಜಮೈಕಾದಿಂದ ಹಿಡಿದು ನ್ಯೂಯಾರ್ಕ್, ದುಬೈನಲ್ಲಿ ಹಾರಾಡಿದ್ದ ಈ ಲವ್ ಬರ್ಡ್ಸ್'ಗಳು ತಮ್ಮ ಟ್ರಿಪ್'ಗಳ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್'ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು.

 

click me!