500ನೇ ಟೆಸ್ಟ್ ಸಂಭ್ರಮ: ದ್ರಾವಿಡ್-ಸೆಹ್ವಾಗ್ ಭಾಗವಹಿಲಿಲ್ಲ ಏಕೆ? ಇಲ್ಲಿದೆ ಕಾರಣ

By Internet DeskFirst Published Sep 24, 2016, 12:33 PM IST
Highlights

ನವದೆಹಲಿ(ಸೆ.24): ಭಾರತದ ಪಾಲಿನ 500ನೇ ಐತಿಹಾಸಿಕ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಟೆಸ್ಟ್ ತಂಡವನ್ನು ಮುನ್ನೆಡೆಸಿದ ನಾಯಕರನ್ನು ಸನ್ಮಾನಿಸಲಾಯಿತು. ಈ ವೇಳೆ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದ ರಾಹುಲ್ ದ್ರಾವಿಡ್ ಹಾಗೂ ವಿರೇಂದ್ರ ಸೆಹ್ವಾಗ್ ಗೈರು ಎದ್ದು ಕಾಣುತ್ತಿತ್ತು.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ದ್ರಾವಿಡ್ ಈ ಐತಿಹಾಸಿಕ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

Latest Videos

ಇನ್ನು ಕೆಲ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನೆಡೆಸಿದ್ದ ವಿರೇಂದ್ರ ಸೆಹ್ವಾಗ್ 'ಕ್ರಿಕೆಟ್ ಯುನೈಟೆಡ್' ಹೆಸರಿನ ಚಾರಿಟಿ ಪಂದ್ಯವನ್ನಾಡಲು ಇಂಗ್ಲೆಂಡ್'ಗೆ ತೆರಳಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ಯಾರನ್ ಸ್ಯಾಮಿ ನೇತೃತ್ವದ ಕ್ರಿಕೆಟ್ ಯುನೈಟೆಡ್ ಇಲೆವೆನ್ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯದಲ್ಲಿ ವೀರೂ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ರಾಹುಲ್ ದ್ರಾವಿಡ್, ವಿರೇಂದ್ರ ಸೆಹ್ವಾಗ್ ಮಾತ್ರವಲ್ಲದೆ ಗುಂಡಪ್ಪ ವಿಶ್ವನಾಥ್, ಬಿಷನ್ ಸಿಂಗ್ ಬೇಡಿ, ಚಂದು ಬೋರ್ಡ್ ಕೂಡ ಐತಿಹಾಸಿಕ ಪಂದ್ಯದಿಂದ ಹೊರಗುಳಿದಿದ್ದರು.

click me!