ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 9 ವರ್ಷವಾಯ್ತು...

By Internet DeskFirst Published Sep 24, 2016, 10:34 AM IST
Highlights

ಬೆಂಗಳೂರು(ಸೆ.24): ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಚೊಚ್ಚಲ ಟಿ20 ವಿಶ್ವಕಪ್'ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಎತ್ತಿಹಿಡಿದು ಇಂದಿಗೆ ಒಂಬತ್ತು ವರ್ಷಗಳಾಯ್ತು.

ಜೋಹಾನ್ಸ್'ಬರ್ಗ್'ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀ0 ಇಂಡಿಯಾ ಗೌತಮ್ ಗಂಭೀರ್ ಅವರ ಭರ್ಜರಿ ಅರ್ಧಶತಕ(75)ದ ನೆರವಿನಿಂದ 157 ರನ್ ಕಲೆಹಾಕಿತ್ತು.

Latest Videos

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದ ಇಮ್ರಾನ್ ನಜೀರ್(33) ಅವರನ್ನು ರಾಬಿನ್ ಉತ್ತಪ್ಪ ರನೌಟ್ ಮಾಡಿ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು.  

ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ಆಡುತ್ತಿದ್ದ ಮಿಸ್ಬಾ-ಉಲ್ ಹಕ್ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸುವ ಹತ್ತಿರ ಬಂದು ಕೊನೆಕ್ಷಣದಲ್ಲಿ ವಿಫಲರಾದರು. ಕೊನೆಯ ಓವರ್'ನಲ್ಲಿ ಪಾಕ್ ಗೆಲ್ಲಲು 13 ರನ್'ಗಳ ಅವಶ್ಯಕತೆ ಇತ್ತು. ಇನ್ನು ಭಾರತ ವಿಶ್ವಕಪ್ ಎತ್ತಿಹಿಡಿಯಲು ಕೇವಲ ಒಂದು ವಿಕೆಟ್ ಬೇಕಾಗಿತ್ತು. ಅನನುಭವಿ ಆಟಗಾರ ಜೋಗಿಂದರ್ ಶರ್ಮಾ ಕೈಯಲ್ಲಿ ಬಾಲ್ ಇತ್ತು... ಮುಂದೆ ನಡೆದದ್ದು ಇತಿಹಾಸ...

click me!