ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ಪ್ರದರ್ಶನವನ್ನ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಶ್ಲಾಘಿಸಿದ್ದಾರೆ. ಆದರೆ ಇದೇ ವೇಳೆ ಕೆಲ ಸಲಹೆ ನೀಡಿದ್ದಾರೆ. ಕನ್ನಡಿಗ ವೆಂಕಿ ಟೀಂ ಇಂಡಿಯಾಗೆ ನೀಡಿದ ಸೂಚನೆ ಏನು? ಇಲ್ಲಿದೆ.
ಬೆಂಗಳೂರು(ಡಿ.28): ಆಸ್ಟ್ರೇಲಿಯಾ ವಿರುದ್ದದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಟೀಂ ಇಂಡಿಯಾ ಟಾಪ್ ಕ್ಲಾಸ್ ಬೌಲಿಂಗ್ ಪ್ರದರ್ಶನ ನೀಡಿದೆ. ಆದರೆ ಇದು ಟೀಂ ಇಂಡಿಯಾದ ಶ್ರೇಷ್ಠ ವೇಗಿಗಳ ತಂಡ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ದಾಳಿ ಕುರಿತು ಮೈನೇಶನ್.ಕಾಂ ಜೊತೆ ಮಾತನಾಡಿದ ವೆಂಕಟೇಶ್ ಪ್ರಸಾದ್, ಶ್ರೇಷ್ಠ ಬೌಲಿಂಗ್ ದಾಳಿ ಅಳೆಯುವಾಗ ಎದುರಾಳಿ ಬ್ಯಾಟ್ಸ್‌ಮನ್ ಬಲ ಕೂಡ ಗಮನಿಸಬೇಕು ಎಂದಿದ್ದಾರೆ. ಮಾರ್ಕ್ ವ್ಹಾ, ಸ್ಟೀವ್ ವ್ಹಾ, ಮಾರ್ಕ್ ಟೇಲರ್, ರಿಕಿ ಪಾಂಟಿಂಗ್, ಮೈಕಲ್ ಕ್ಲಾರ್ಕ್, ಮಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ಆ್ಯಡಮ್ ಗಿಲ್‌ಕ್ರಿಸ್ಟ್ ಇಂತಹ ಬ್ಯಾಟ್ಸ್‌ಮನ್‌ಗಳು ಎಕಾಂಗಿಯಾಗಿ ಪಂದ್ಯವನ್ನ ಬದಲಾಯಿಸಬಲ್ಲರು. ಆದರೆ ಸದ್ಯ ಆಸಿಸ್ ತಂಡದಲ್ಲಿ ಇಂತಹ ಶ್ರೇಷ್ಠ ಬ್ಯಾಟ್ಸ್‌ಮನ್ ಇಲ್ಲ ಎಂದು ವೆಂಕಿ ಹೇಳಿದ್ದಾರೆ.
ಇದನ್ನೂ ಓದಿ: ಫಾಲೋ-ಆನ್ ಹೇರದ ಕೊಹ್ಲಿ ನಿರ್ಧಾರ ಎಷ್ಟು ಸರಿ- ದಿಗ್ಗಜ ಕ್ರಿಕೆಟಿಗ ಪ್ರಶ್ನೆ!
ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರ್ ನಿಂದ ನಿಷೇಧಕ್ಕೊಳಗಾಗಿದ್ದಾರೆ. ಹೀಗಾಗಿ ಆಸಿಸ್ ಬ್ಯಾಟಿಂಗ್ ವಿಭಾಗ ದುರ್ಬಲವಾಗಿದೆ. ಹಾಗಂತ ಟೀಂ ಇಂಡಿಯಾ ಪ್ರದರ್ಶನ ಕಳಪೆಯಾಗಿಲ್ಲ. ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ಆಸಿಸ್ ತಂಡವನ್ನ ಆಲೌಟ್ ಮಾಡಿದೆ. ಬುಮ್ರಾ 6 ವಿಕೆಟ್ ಕಬಳಿಸೋ ಮೂಲಕ ದಾಖಲೆ ಬರೆದಿದ್ದಾರೆ. ಪ್ರತಿ ಓವರ್‌ನಲ್ಲೂ ಎದುರಾಳಿ ಬ್ಯಾಟ್ಸ್‌ಮನ್‌ಗಳು ಒತ್ತಡಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ಮೆಲ್ಬರ್ನ್‌ನಲ್ಲಿ ಬುಮ್ರಾ ಮ್ಯಾಜಿಕ್- 346 ರನ್ ಮುನ್ನಡೆಯಲ್ಲಿ ಕೊಹ್ಲಿ ಬಾಯ್ಸ್!
ಸದ್ಯ ಟೀಂ ಇಂಡಿಯಾದ ಎಲ್ಲಾ ವೇಗಿಗಲು 140 kmph ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಬುಮ್ರಾ ಅಥವಾ ಭುವನೇಶ್ವರ್ ಮೇಲೆ ಟೀಂ ಇಂಡಿಯಾ ಅವಲಂಬಿತವಾಗಬಾರದು ಎಂದು ಕಿವಿ ಮಾತು ಹೇಳಿದ್ದಾರೆ. ಇಡೀ ಬೌಲಿಂಗ್ ವಿಭಾಗ ಸಂಘಟಿತ ದಾಳಿ ನಡೆಸಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ!
ಮೆಲ್ಬರ್ನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಪ್ರದರ್ಶನಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಬುಮ್ರಾ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು. ಹೆಚ್ಚು ಹೆಚ್ಚು ಪಂದ್ಯ ಆಡುವಾಗ ಮತ್ತಷ್ಟು ಪರಿಪಕ್ವ ಆಗ್ತಾರೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ವೆಂಕಟೇಶ್ ಪ್ರಸಾದ್ ಸಂದರ್ಶನ ಇಂಗ್ಲೀಷ್‌ನಲ್ಲಿ ಒದಲು ಇಲ್ಲಿ ಕ್ಲಿಕ್ ಮಾಡಿ: