Latest Videos

ಮೋಟಾರ್‌ ರೇಸ್‌ನಲ್ಲಿ ಭೀಕರ ಸರಣಿ ಅಪಘಾತ : ವಿಡಿಯೋ ವೈರಲ್‌

By Anusha KbFirst Published Apr 25, 2022, 9:04 PM IST
Highlights
  • ಅಲ್ಗಾರ್ವೆಯಲ್ಲಿ ನಡೆದ ಮೋಟೋ2 ಸ್ಪೋರ್ಟ್ಸ್‌ ಬೈಕ್‌ ರೇಸ್‌
  • ಒಟ್ಟೊಟ್ಟಿಗೆ ಅಪಘಾತಕ್ಕೀಡಾದ ಹಲವು ಬೈಕ್‌ಗಳು
  • ಮೋಟಾರ್‌ ರೇಸ್‌ನಲ್ಲಿ ಭೀಕರ ಸರಣಿ ಅಪಘಾತ 

ಪೋರ್ಚುಗಲ್‌: ಇಲ್ಲಿನ  ಅಲ್ಗಾರ್ವೆಯಲ್ಲಿ ನಡೆದ ಮೋಟೋ2 ಸ್ಪೋರ್ಟ್ಸ್‌ ಬೈಕ್‌ ರೇಸ್‌ನಲ್ಲಿ ಒಂದರ ಹಿಂದೆ ಒಂದರಂತೆ ಬಂದ ಐದಾರು ಬೈಕ್‌ಗಳು ಒಟ್ಟೊಟ್ಟಿಗೆ ಅಪಘಾತವಾಗಿದ್ದು, ಈ ಭೀಕರ ಅಪಘಾತ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರದಂದು ಈ ಅಹಿತಕರ ಘಟನೆ ನಡೆದಿದೆ.

15 ಲ್ಯಾಪ್‌ಗಳು  ಪೂರ್ಣಗೊಳ್ಳಲು ಬಾಕಿ ಇದ್ದಾಗ ಎರಡನೇ ಕಾರ್ನರ್‌ ಸಮೀಪಿಸುವ ಮುನ್ನ ಒಮ್ಮಿಂದೊಮ್ಮೆಗೆ ಹಲವಾರು ಸವಾರರು ಅಪಘಾತಕ್ಕೀಡಾಗಿದ್ದಾರೆ. ಝೋಂಟಾ ವ್ಯಾನ್ ಡೆನ್ ಗೂರ್ಬರ್ಗ್ (Zonta Van Den Goorbergh) ಅವರ ಬೈಕ್ ಆಘಾತಕಾರಿ ರೀತಿಯಲ್ಲಿ ಬೆಂಕಿಗಾಹುತಿಯಾಗಿದ್ದರಿಂದ ರೇಸರ್‌ಗೆ ಬೈಕ್‌ ಬಿಟ್ಟು ಓಡಿಹೋಗುವುದನ್ನು ಹೊರತುಪಡಿಸಿ  ಬೇರೆ ಆಯ್ಕೆಗಳಿರಲಿಲ್ಲ.

La pluie provoque un énorme crash - Grand Prix du Portugal - Moto2 https://t.co/9xu7N59sTB via

— Lacrizio_ (@Lacrizio_)

 

ದಿ ಸನ್ ಪ್ರಕಾರ, ಅಪಘಾತಕ್ಕೆ ಒಳಗಾದ ಎಲ್ಲಾ ಸವಾರರು ಪ್ರಸ್ತುತ  ಸುರಕ್ಷಿತವಾಗಿದ್ದಾರೆ ಎಂದು MotoGP ದೃಢಪಡಿಸಿದೆ. ಈ ಅಪಘಾತ ನೋಡಲು ತುಂಬಾ ಬಹಳ ಭಯಾನಕವಾಗಿತ್ತು. ಅದಕ್ಕಿಂತಲೂ ಮುಖ್ಯವಾದುದೆಂದರೆ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಮತ್ತು ಕ್ಷೇಮವಾಗಿದ್ದೇವೆ ಎಂದು ಅಮೆರಿಕನ್‌ ಮೋಟರ್‌ ರೇಸರ್‌  ಕ್ಯಾಮರೂನ್ ಬ್ಯೂಬಿಯರ್ ಹೇಳಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ. ಈ ರೇಸ್‌ನಲ್ಲಿ ಸಾಕಷ್ಟು ಅವ್ಯವಸ್ಥೆ ಇತ್ತು. ಬೈಕ್‌ಗಳು ಜಾರಲ್ಪಟ್ಟವು ಅಲ್ಲೇನೋ ಇದ್ದವು ಅವುಗಳೇನು ಎಂದು 29 ವರ್ಷದ  ಕ್ಯಾಮರೂನ್ ಬ್ಯೂಬಿಯರ್ (Cameron Beaubier) ಪ್ರಶ್ನಿಸಿದ್ದಾರೆ. ಈ ಅಪಘಾತಕ್ಕೆ ಒಳಗಾದ ಒಬ್ಬ ಚಾಲಕನೂ ಓಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಎಂಟು ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. 

ಟೈರ್‌ ಪಂಕ್ಚರ್‌ ಆದ ಬೈಕಲ್ಲಿ ರೇಸ್‌ ಗೆದ್ದ ವೀರ!
 

ಇನ್ನು ಈ ಪೋರ್ಚುಗಲ್‌ನ ಟಿಸ್ಸಾಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಜೋ ರಾಬರ್ಟ್ಸ್ ಗೆಲುವು ಸಾಧಿಸಿದರು. 24 ರ ಹರೆಯದ ರೈಡರ್ ತಮ್ಮ ವೃತ್ತಿ ಜೀವನದ ಚೊಚ್ಚಲ ಗೆಲುವನ್ನು ತಮ್ಮದಾಗಿಸಿಕೊಂಡರು. ಸೆಲೆಸ್ಟಿನೊ ವಿಯೆಟ್ಟಿ (Celestino Vietti) ಈ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆದರು. ಜಾರ್ಜ್ ನವರೊ (Jorge Navarro) ಮೂರನೇ ಸ್ಥಾನದಲ್ಲಿ ಓಟವನ್ನು ಪೂರ್ಣಗೊಳಿಸಿದರು. ಸ್ಪಾನಿಷ್‌ ಮೋಟರ್‌ ರೇಸರ್‌ ನವರೊಗೆ ಇದು ತಮ್ಮ ವೃತ್ತಿ ಜೀವನದ ಸಂವೇದನಾಶೀಲ ತಿರುವುವಾಗಿದೆ. 26 ವರ್ಷದ ರೈಡರ್ ಇತ್ತೀಚೆಗೆ ಹಾನಿಗೊಳಗಾದ ಅಸ್ಥಿರಜ್ಜುವಿಗೆ ಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿದ್ದರು.  ಆದಾಗ್ಯೂ ಸ್ಪೇನ್‌ನಾರ್ಡ್ ವೇದಿಕೆಯ ಫೈನಲ್‌ ಗೆ ಬರಲು ಅವರು ಕೆಲವು ಸಂವೇದನೆಯ ಚಾಲನಾ ಕೌಶಲ್ಯಗಳನ್ನು ಪ್ರದರ್ಶಿಸಿದರು.

ರೇಸ್‌ ವೇಳೆ ಟಾಸ್‌ ಹಾಕಿದಂತೆ ಸೈಕ್ಲಿಸ್ಟ್‌ನನ್ನು ಎತ್ತಿ ಬಿಸಾಕಿದ ಗೂಳಿ... ವಿಡಿಯೋ ವೈರಲ್‌
 

click me!