ಇಲ್ಲಿ ನಡೆದ ಫೈನಲ್’ನಲ್ಲಿ ಫ್ರಾನ್ಸ್ ವಿರುದ್ಧ 3-1ರ ಅಂತರದಲ್ಲಿ ಗೆದ್ದ ಕ್ರೊವೇಷಿಯಾ 2005ರ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಡೇವಿಸ್ ಕಪ್ ಟೂರ್ನಿಯಲ್ಲಿ ಕ್ರೊವೇಷಿಯಾಕ್ಕಿದು ಎರಡನೇ ಪ್ರಶಸ್ತಿಯಾಗಿದೆ.
ಲಿಲ್ಲಿ[ನ.26]: ಟೆನಿಸ್ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಡೇವಿಸ್ ಕಪ್’ನ 2018ರ ಚಾಂಪಿಯನ್ ಆಗಿ ಕ್ರೊವೇಷಿಯಾ ಹೊರಹೊಮ್ಮಿದೆ.
ಇಲ್ಲಿ ನಡೆದ ಫೈನಲ್’ನಲ್ಲಿ ಫ್ರಾನ್ಸ್ ವಿರುದ್ಧ 3-1ರ ಅಂತರದಲ್ಲಿ ಗೆದ್ದ ಕ್ರೊವೇಷಿಯಾ 2005ರ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಡೇವಿಸ್ ಕಪ್ ಟೂರ್ನಿಯಲ್ಲಿ ಕ್ರೊವೇಷಿಯಾಕ್ಕಿದು ಎರಡನೇ ಪ್ರಶಸ್ತಿಯಾಗಿದೆ.
Croatia are the Champions for the second time!
Read all about how clinched victory for his nation right here 👉 https://t.co/zDR0v4aIfp
🇫🇷1️⃣🆚3️⃣🇭🇷 pic.twitter.com/UjoFwxgVwx
Congrats to Croatia on the victory. I’m always impressed with the humility and class that shows in victory and in defeat.
— Bob Bryan (@Bryanbros)ಸಿಂಗಲ್ಸ್ ಪಂದ್ಯಗಳಲ್ಲಿ ಸೋಲುಂಡಿದ್ದ ಫ್ರಾನ್ಸ್, ಡಬಲ್ಸ್’ನಲ್ಲಿ ಗೆದ್ದು ಅಂತರವನ್ನು 1-2ಕ್ಕಿಳಿಸಿಕೊಂಡಿತ್ತು. ಆದರೆ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಮರಿನ್ ಸಿಲಿಚ್ ಗೆಲ್ಲುವ ಮೂಲಕ ಕ್ರೊವೇಷಿಯಾಗೆ 3-1ರ ಅಂತರದ ಗೆಲುವು ದಾಖಲಿಸಿತು.
ಫ್ರಾನ್ಸ್ ಎದುರು 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಸೋತಿದ್ದ ಕ್ರೊವೇಷಿಯಾ, ಇದೀಗ ಟೆನಿಸ್ ವಿಶ್ವಕಪ್ ಎಂದೇ ಹೆಸರಾದ ಡೇವಿಸ್ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದೆ.