ಸಾಲ ಮರು ಪಾವತಿಸಲು ಬೆಕರ್‌ ಟ್ರೋಫಿ ಹರಾಜು!

By Web DeskFirst Published Jun 25, 2019, 1:18 PM IST
Highlights

ವಿಂಬಲ್ಡನ್ ಪ್ರಶಸ್ತಿ ಗೆದ್ದ ಅತಿ ಕಿರಿಯ ಟೆನಿಸಿಗ ಎನ್ನುವ ದಾಖಲೆ ಬರೆದಿದ್ದ ಜರ್ಮನಿಯ ಟೆನಿಸ್ ದಿಗ್ಗಜ ಬೋರಿಸ್‌ ಬೆಕರ್‌ ಸಾಲಬಾಧೆ ತಾಳಲಾರದೇ ತಮ್ಮಲ್ಲಿರುವ ಪ್ರಶಸ್ತಿ, ಸ್ಮರಣಿಕೆ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಹರಾಜು ಹಾಕಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ. 

ಲಂಡನ್‌(ಜೂ.25): ಜರ್ಮನಿಯ ಟೆನಿಸ್‌ ದಿಗ್ಗಜ, 6 ಬಾರಿ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್‌, ವಿಂಬಲ್ಡನ್ ಜಯಿಸಿದ ಅತಿ ಕಿರಿಯ ಆಟಗಾರ ಎನಿಸಿದ್ದ ಬೋರಿಸ್‌ ಬೆಕರ್‌ ಸಾಲ ಮರು ಪಾವತಿಸಲು ತಾವು ಗೆದ್ದ ಟ್ರೋಫಿ, ಪದಕ, ಸ್ಮರಣಿಕೆಗಳನ್ನು ಹರಾಜು ಹಾಕುತ್ತಿದ್ದಾರೆ. 

ಸೋಮವಾರದಿಂದ ಬ್ರಿಟನ್‌ನ ವೈಲ್ಸ್‌ ಹಾರ್ಡಿ ಎನ್ನುವ ಸಂಸ್ಥೆ ಆನ್‌ಲೈನ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಿದೆ. ಜು.11ರ ವರೆಗೂ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪದಕಗಳು, ಟ್ರೋಫಿಗಳು, ಕೈಗಡಿಯಾರ ಮತ್ತು ಫೋಟೋಗ್ರಾಪ್ಸ್ ಸೇರಿದಂತೆ ಒಟ್ಟು 82 ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

2017ರಲ್ಲಿ ಬೆಕರ್‌ ದಿವಾಳಿಯಾಗಿದ್ದರು. ಅವರ ಸಾಲದ ಮೊತ್ತ 400 ಕೋಟಿ ರುಪಾಯಿಗಳಿಗೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಹರಾಜಿನಿಂದ ಸ್ವಲ್ಪ ಪ್ರಮಾಣದ ಸಾಲ ಮಾತ್ರ ತೀರಲಿದೆ ಎಂದು ವರದಿಯಾಗಿದೆ.
6 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳ ಪೈಕಿ, ವಿಂಬಲ್ಡನ್ ಸೇರಿದಂತೆ ಪ್ರಮುಖ ಮೂರು ಪ್ರಶಸ್ತಿಗಳನ್ನು ಬೋರಿಸ್‌ ಬೆಕರ್‌ ಕೇವಲ 17 ವಯಸ್ಸಿನಲ್ಲಿದ್ದಾಗಲೇ ಗೆದ್ದು ಇತಿಹಾಸ ನಿರ್ಮಿಸಿದ್ದರು.  
 

click me!