ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಅಭೂತಪೂರ್ವ ಪ್ರದರ್ಶನ ತೋರುವುದರೊಂದಿಗೆ ಒಂದೂ ಪಂದ್ಯ ಸೋಲದೇ ಕೆರಿಬಿಯನ್ ಪ್ರವಾಸ ಮುಗಿಸಿದೆ. ಇನ್ನು ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಿಂಗ್ಸ್’ಟನ್[ಸೆ.03]: ಮತ್ತೊಮ್ಮೆ ಅದ್ಭುತ ಪ್ರದರ್ಶನ ತೋರಿದ ಟೀಂ ಇಂಡಿಯಾ, ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 210 ರನ್’ಗಳಿಗೆ ಆಲೌಟ್ ಮಾಡುವ 257 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತ 120 ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಗೆಲುವಿನತ್ತ ಹೆಜ್ಜೆ ಇಟ್ಟ ಭಾರತ; ಪಂದ್ಯ ಉಳಿಸಲು ವಿಂಡೀಸ್ ಹೋರಾಟ!
undefined
ಗೆಲ್ಲಲು 468 ರನ್’ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 59.5 ಓವರ್’ಗಳಲ್ಲಿ 210 ರನ್’ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಭಾರತ ಪರ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 2 ಹಾಗೂ ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು. ಇನ್ನು ವಿಂಡೀಸ್ ಪರ ಶಮರ್ಥ್ ಬ್ರೂಕ್ಸ್ ಅರ್ಧಶತಕ ಸಿಡಿಸಿ ರನೌಟ್ ಆದರು. ಇನ್ನು ಡ್ಯಾರನ್ ಬ್ರಾವೋ ಬದಲು ಆಡಲಿಳಿದ ಜೆರ್ಮೖನ್ ಬ್ಲಾಕ್’ವುಡ್[38] ಹಾಗೂ ನಾಯಕ ಜೇಸನ್ ಹೋಲ್ಡರ್[39] ಟೀಂ ಇಂಡಿಯಾ ಬೌಲರ್’ಗಳೆದುರು ಕೊಂಚ ಪ್ರತಿರೋಧ ತೋರಿದರಾದರೂ, ತಂಡವನ್ನು ಸೋಲಿನಿಂದ ಬಚಾವ್ ಮಾಡಲು ಸಾಧ್ಯವಾಗಲಿಲ್ಲ.
ಸ್ಟ್ರೆಂಥ್ & ಕಂಡೀಷನ್ ಸ್ಟಾಫ್ ಆಯ್ಕೆ; ಕೊಹ್ಲಿ, ಶಾಸ್ತ್ರಿಯಲ್ಲಿ ಭಿನ್ನಮತ!
ಈ ಗೆಲುವಿನೊಂದಿಗೆ ವಿರಾಟ್ ಒಂದೂ ಸೋಲು ಕಾಣದೆ ಯಶಸ್ವಿಯಾಗಿ ವಿದೇಶಿ ಪ್ರವಾಸ ಮುಗಿಸಿದೆ. ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಏಕದಿನ ಸರಣಿಯನ್ನು 2-0 ಅಂತರದಿಂದ ಟೀಂ ಇಂಡಿಯಾ ಜಯಿಸಿತ್ತು. ಇದೀಗ ಟೆಸ್ಟ್ ಸರಣಿಯಲ್ಲೂ ಭಾರತ ಅಜೇಯ ಪ್ರಾಬಲ್ಯ ಮೆರೆದಿದೆ.
ವಿರಾಟ್ ನಂ.1 ನಾಯಕ: ಕಿಂಗ್ಸ್’ಟನ್ ಟೆಸ್ಟ್ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಭಾರತಕ್ಕೆ ಅತಿಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ಭಾರತದ ನಾಯಕ ಎನ್ನುವ ಕೀರ್ತಿ ವಿರಾಟ್ ಕೊಹ್ಲಿ ಪಾಲಾಗಿದೆ. ಈ ಮೊದಲು ಎಂ.ಎಸ್ ಧೋನಿ ಟಿಂ ಇಂಡಿಯಾವನ್ನು 27 ಬಾರಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ಕೊಹ್ಲಿ 28 ಬಾರಿ ತಂಡಕ್ಕೆ ಗೆಲುವು ತಂದುಕೊಟ್ಟ ನಾಯಕ ಎನಿಸಿದ್ದಾರೆ.