ಗೆಲುವಿನತ್ತ ಹೆಜ್ಜೆ ಇಟ್ಟ ಭಾರತ; ಪಂದ್ಯ ಉಳಿಸಲು ವಿಂಡೀಸ್ ಹೋರಾಟ!

By Web DeskFirst Published Sep 2, 2019, 10:15 PM IST
Highlights

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲೂ ಗೆಲವಿನತ್ತ ಹೆಜ್ಜೆ ಇಟ್ಟಿದೆ. ಭಾರತದ ಗೆಲುವಿಗೆ ಇನ್ನು 6 ವಿಕೆಟ್ ಅವಶ್ಯಕತೆ ಇದೆ. ಸದ್ಯ ವಿಂಡೀಸ್ ನಾಲ್ಕು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರಿಸಿದೆ. ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

ಕಿಂಗ್ಸ್‌ಸ್ಟನ್(ಸೆ.02): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನತ್ತ ಹೆಜ್ಜೆ ಇಟ್ಟಿದೆ. 2ನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 468 ರನ್ ಗುರಿ ಪಡೆದಿರುವ ವಿಂಡೀಸ್ ನಾಲ್ಕನೇ ದಿನದಾಟದಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಲಂಚ್ ಬ್ರೇಕ್ ವೇಳೆ ವೆಸ್ಟ್ ಇಂಡೀಸ್ 145 ರನ್ ಸಿಡಿಸಿದೆ. ವಿಂಡೀಸ್ ಗೆಲುವಿಗೆ ಇನ್ನೂ 323 ರನ್ ಅವಶ್ಯಕತೆ ಇದ್ದರೆ, ಟೀಂ ಇಂಡಿಯಾ 6 ವಿಕೆಟ್ ಬೇಕಿದೆ.

ಇದನ್ನೂ ಓದಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

3ನೇ ದಿನದಾಟದಲ್ಲಿ 2  ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ನಾಲ್ಕನೇ ದಿನದಲ್ಲಿ ಎಚ್ಚರಿಕೆಯ ಬ್ಯಾಟಿಂಗ್‌ನತ್ತ ಗಮನ ಹರಿಸಿತು. ಡರೆನ್ ಬ್ರಾವೋ ಹಾಗೂ ಶಾಮ್ರಾ ಬ್ರೂಕ್ಸ್ ಜೊತೆಯಾಟ ವಿಂಡೀಸ್ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಬ್ರಾವೋ 23 ರನ್ ಸಿಡಿಸಿ ರಿಟೈರ್ಡ್ ಹರ್ಟ್ ಆದರು. ರೋಸ್ಟನ್ ಚೇಸ್ 12 ರನ್ ಸಿಡಿಸಿ ನಿರ್ಗಮಿಸಿದರು.

ಇದನ್ನೂ ಓದಿ: ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

ಶಿಮ್ರೊನ್ ಹೆಟ್ಮೆಯಲ್ ಕೇವಲ 1 ರನ್ ಸಿಡಿಸಿ ಔಟಾದರು. ಬ್ರೂಕ್ಸ್ ಹಾಗೂ ಜರ್ಮೈನ್ ಬ್ಲಾಕ್‌ವುಡ್ ಹೋರಾಟ ವಿಂಡೀಸ್ ತಂಡಕ್ಕೆ ಹೊಸ ಹುರುಪು ನೀಡಿತು. ದಿಢೀರ್ ಕುಸಿತ ತಪ್ಪಿಸಿದ ಈ ಜೋಡಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಭೋಜನ ವಿರಾಮದ ವೇಳೆಗೆ ವಿಂಡೀಸ್ 4 ವಿಕೆಟ್ ನಷ್ಟಕ್ಕೆ 145 ರನ್ ಸಿಡಿಸಿದೆ. ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 1 ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು.

click me!