ರಾಯುಡು 3D ಟ್ವೀಟ್‌ಗೆ ಮೊದಲ ಪ್ರತಿಕ್ರಿಯೆ ನೀಡಿದ ಆಯ್ಕೆ ಸಮಿತಿ!

By Web DeskFirst Published Jul 21, 2019, 5:18 PM IST
Highlights

ಅಂಬಾಟಿ ರಾಯುಡು 3ಡಿ ಟ್ವೀಟ್ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. ವಿವಾದ ಬಳಿಕ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಆಯ್ಕೆ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡರಿಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ರಾಯುಡು ವಿವಾದದ ಕುರಿತು ಆಯ್ಕೆ ಸಮಿತಿ ಪ್ರತಿಕ್ರಿಯೆ ನೀಡಿದೆ.

ಮುಂಬೈ(ಜು.21): ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿ ಹೊರಬಿತ್ತು. ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿದೆ. ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಯಿಂದ, ಸೆಮಿಫೈನಲ್ ವರೆಗೂ ಟೀಂ ಇಂಡಿಯಾದಲ್ಲಿ ಹಲವು ವಿವಾದಕ್ಕೆ ಗುರಿಯಾಗಿದೆ. ಇದರಲ್ಲಿ ಮಧ್ಯಮ ಕ್ರಮಾಂಕದ ಆಯ್ಕೆಯಲ್ಲಿ ಅಂಬಾಟಿ ರಾಯುಡು ಕೈಬಿಟ್ಟ ಆಯ್ಕೆ ಸಮಿತಿಗೆ 3ಗ್ಲಾಸ್ ಟ್ವೀಟ್ ಮೂಲಕ ರಾಯುಡು ತಿರುಗೇಟು ನೀಡಿದ್ದರು. ಈ ಟ್ವೀಟ್‌ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಅಯ್ಯೋ ಪಾಪ: ಟ್ವೀಟ್ ಮಾಡಿ ಕೆಟ್ಟ ರಾಯುಡು!

3 ಡೈಮೆನ್ಶನ್ ಆಟಗಾರನಾಗಿ ವಿಜಯ್ ಶಂಕರ್‌ಗೆ ಸ್ಥಾನ ನೀಡಲಾಗಿದೆ ಎಂದು ಪ್ರಸಾದ್ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ರಾಯುಡು, ವಿಶ್ವಕಪ್ ಪಂದ್ಯ ವೀಕ್ಷಿಸಲು 3ಡಿ ಗ್ಲಾಸ್ ಖರೀದಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇದು ಬಾರಿ ವಿವಾದಕ್ಕೆ ಕಾರಣವಾಗಿತ್ತು. ಟೂರ್ನಿ ಮುಗಿದ ಬಳಿಕ ಇದೀಗ ಆಯ್ಕೆ ಸಮಿತಿ ಈ ಕುರಿತು ಪ್ರತಿಕ್ರಿಯೆ ನೀಡಿದೆ. ರಾಯುಡು ಟ್ವೀಟ್‌ನ್ನು ಆನಂದಿಸಿದ್ದೇನೆ. ತಕ್ಕ ಸಮಯಕ್ಕೆ ಅದ್ಬುತ ಪ್ರತಿಕ್ರಿಯೆ ಎಂದು ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ನಿಂದ ಕಡೆಗಣನೆ; ಕ್ರಿಕೆಟ್‌ಗೆ ಅಂಬಟಿ ರಾಯುಡು ವಿದಾಯ..!

ವಿಶ್ವಕಪ್ ಟೂರ್ನಿಯಿಂದ ಕಡೆಗಣಿಸಿದ ಕಾರಣಕ್ಕೆ ಅಂಬಾಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದರು. ಇದು ಈ ವಿವಾದಕ್ಕೆ ಮತ್ತಷ್ಟು ತುಪ್ಪು ಸುರಿದಿತ್ತು. ಆಯ್ಕೆ  ಸಮಿತಿ ವಿರುದ್ಧ ಟೀಕೆಗಳು ಕೇಳಿಬಂದಿತ್ತು. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ.
 

click me!