ಚಾಂಪಿಯನ್ಸ್ ಟ್ರೋಫಿಗೆ ಭಾರತ ಗೈರು?

Published : Feb 03, 2017, 11:12 AM ISTUpdated : Apr 11, 2018, 12:46 PM IST
ಚಾಂಪಿಯನ್ಸ್ ಟ್ರೋಫಿಗೆ ಭಾರತ ಗೈರು?

ಸಾರಾಂಶ

ಇಂದಿನಿಂದ ಆರಂಭವಾಗಿರುವ ಐಸಿಸಿಯ ಕಾರ್ಯಕಾರಿ ಸಭೆಯಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಸಿಸಿಐ ಮೂಕಪ್ರೇಕ್ಷಕ ಪಾತ್ರ ವಹಿಸಿದೆ.

ನವದೆಹಲಿ(ಫೆ.03): ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ತರಲು ಉದ್ದೇಶಿಸಿರುವ ಪ್ರಮುಖ ಬದಲಾವಣೆಗಳಿಂದ ನಲುಗಿಹೋಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡೆಯ ಅಸ್ತ್ರವೆಂಬಂತೆ ಇದೇ ಜೂನ್‌'ನಲ್ಲಿ ಲಂಡನ್‌'ನಲ್ಲಿ ನಡೆಯಲಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಇಂದಿನಿಂದ ಆರಂಭವಾಗಿರುವ ಐಸಿಸಿಯ ಕಾರ್ಯಕಾರಿ ಸಭೆಯಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಸಿಸಿಐ ಮೂಕಪ್ರೇಕ್ಷಕ ಪಾತ್ರ ವಹಿಸಿದೆ. ಸಭೆಯಲ್ಲಿ ಬಿಸಿಸಿಐನ ಪ್ರತಿನಿಧಿಗಳಾಗಿ ಐಡಿಎಫ್‌ಸಿ ಎಂಡಿ ಮತ್ತು ಸಿಇಒ ವಿಕ್ರಂ ಲಿಮಯೆ, ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಭಾಗವಹಿಸಿದ್ದಾರೆ.

ಬಿಗ್ ತ್ರೀಗೆ ಇತಿಶ್ರೀ?

ಐಸಿಸಿಯ ಸ್ವತಂತ್ರ ಮುಖ್ಯಸ್ಥರಾಗಿ ಆಯ್ಕೆಯಾದಾಗಿನಿಂದ ಬಿಸಿಸಿಐ ವಿರುದ್ಧವೇ ಸೆಟೆದು ನಿಂತಂತಿರುವ ಶಶಾಂಕ್ ಮನೋಹರ್ ವಿಶ್ವ ಕ್ರಿಕೆಟ್ ಸದಸ್ಯ ರಾಷ್ಟ್ರಗಳಿಗೆ ಸಮಾನ ಪಾಲು ನೀಡಲು ನಿಶ್ಚಯಿಸಿದ್ದಾರೆ. ಐಸಿಸಿ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅಧಿಕಾರದ ವೇಳೆ ಅಸ್ತಿತ್ವಕ್ಕೆ ಬಂದಿದ್ದ ಬಿಗ್ ತ್ರೀ (ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ) ವ್ಯವಸ್ಥೆಯು ಈ ಮೂರು ರಾಷ್ಟ್ರಗಳಿಗೆ ಐಸಿಸಿ ಆದಾಯದ ಸಿಂಹಪಾಲು ಸಲ್ಲುತ್ತಿದೆ. ಪ್ರಸಕ್ತ ಬಿಸಿಸಿಐ, ಐಸಿಸಿ ಆದಾಯದಲ್ಲಿ ಶೇ. 20.3ರಷ್ಟನ್ನು ಭಾರತವೇ ಪಡೆಯುತ್ತಿದ್ದು, ಒಂದೊಮ್ಮೆ ಬಿಗ್ ತ್ರೀ ವ್ಯವಸ್ಥೆ ರದ್ದಾದರೆ, ಅರ್ಧದಷ್ಟು ಮೊತ್ತವನ್ನು ಬಿಸಿಸಿಐ ಕಳೆದುಕೊಳ್ಳಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್‌ನಿಂದ ತನ್ನ ಕ್ರಿಕೆಟ್ ಬದುಕೇ ಹಾಳು ಮಾಡಿಕೊಂಡೆ: ಅಚ್ಚರಿ ಹೇಳಿಕೆ ಕೊಟ್ಟ ಕೆವಿನ್ ಪೀಟರ್‌ಸನ್!
ಚಿನ್ನಸ್ವಾಮಿ ಸ್ಟೇಡಿಯಂ; ಫ್ಯಾನ್ಸ್‌ಗೆ ಮತ್ತೊಂದು ಗುಡ್ ನ್ಯೂಸ್ ಕೊಡಲು ರೆಡಿಯಾದ ಕೆಎಸ್‌ಸಿಎ!