ಬಿಸಿಸಿಐಗೆ ಎಚ್ಚರಿಕೆ ನೀಡಿದ ಶ್ರೀಶಾಂತ್..!

By Suvarna Web DeskFirst Published Feb 2, 2017, 3:18 PM IST
Highlights

2005ರಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಶ್ರೀಶಾಂತ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು.

ನವದೆಹಲಿ(ಫೆ.02): ಆರನೇ ಐಪಿಎಲ್ ಸಂದರ್ಭದಲ್ಲಿ ನಡೆಯಿತ್ತೆನ್ನಲಾದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ 27 ದಿನಗಳ ಜೈಲುವಾಸ ಅನುಭವಿಸಿದ ಕ್ರಿಕೆಟಿಗ ಶ್ರೀಶಾಂತ್, ಬಿಸಿಸಿಐ ವಿರುದ್ಧ ತಿರುಗಿಬಿದ್ದಿದ್ದಾರೆ.

2015ರ ಜುಲೈನಲ್ಲಿ ಪ್ರಕರಣದಿಂದ ನ್ಯಾಯಾಲಯವೇ ನನ್ನನ್ನು ದೋಷಮುಕ್ತಗೊಳಿಸಿದೆ. ಆದರೆ, ಬಿಸಿಸಿಐ ಆಜೀವ ನಿಷೇಧ ಹೇರಿರುವುದನ್ನು ಪತ್ರದಲ್ಲಾಗಲೀ ಇಲ್ಲವೇ ಇ-ಮೇಲ್ ಮೂಲಕವಾಗಲೀ ತಿಳಿಸಿಲ್ಲ ಎಂದು ಶ್ರೀಕಾಂತ್ ತಿಳಿಸಿದ್ದಾರೆ.

Latest Videos

ಮತ್ತೊಮ್ಮೆ ಕ್ರಿಕೆಟ್ ಆಡಲು ತುಡಿಯುತ್ತಿರುವ ನನಗೆ ಬಿಸಿಸಿಐ ಅಡ್ಡಿಪಡಿಸಿದ್ದೇ ಆದಲ್ಲಿ ಅದರ ವಿರುದ್ಧ ಕಾನೂನು ಸಮರ ಸಾರದೆ ಬೇರೆ ಮಾರ್ಗವಿಲ್ಲ ಎಂದು ಕೇರಳ ಮೂಲದ ವೇಗಿ ಎಚ್ಚರಿಸಿದ್ದಾರೆ!

2005ರಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಶ್ರೀಶಾಂತ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು.

click me!