ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಾಗಿ ಅಭ್ಯಾಸ ನಡೆಸುವ ವೇಳೆ ಎದುರಾಳಿ ತಂಡದ ಬ್ಯಾಟ್ಸ್’ಮನ್ ವಿವೇಕ್ ಸಿಂಗ್ ಬಾರಿಸಿದ ಚೆಂಡು ನೇರವಾಗಿ ದಿಂಡಾ ಹಣೆಗೆ ಬಡಿದಿದೆ.
ಕೋಲ್ಕತಾ[ಫೆ.11]: ಕೆಲವರ್ಷಗಳ ಹಿಂದಷ್ಟೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಅಶೋಕ್ ದಿಂಡಾ ಅಭ್ಯಾಸ ಪಂದ್ಯವೊಂದರಲ್ಲಿ ಬೌಲಿಂಗ್ ಮಾಡುವಾಗ ತಲೆಗೆ ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಘಟನೆ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದಿದೆ.
ಇಂಡೋ-ಕಿವೀಸ್ ಕೊನೆಯ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದ ಧೋನಿ
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಾಗಿ ಅಭ್ಯಾಸ ನಡೆಸುವ ವೇಳೆ ಎದುರಾಳಿ ತಂಡದ ಬ್ಯಾಟ್ಸ್’ಮನ್ ವಿವೇಕ್ ಸಿಂಗ್ ಬಾರಿಸಿದ ಚೆಂಡು ನೇರವಾಗಿ ದಿಂಡಾ ಹಣೆಗೆ ಬಡಿದಿದೆ. ತಕ್ಷಣವೇ ಮೈದಾನಕ್ಕೆ ಆಗಮಿಸಿದ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದರು. ನಂತರ ನೈಂಟಿಗೇಲ್ ಆಸ್ಫತ್ರೆಗೆ ಕರೆದೊಯ್ಯಲಾಯಿತು. ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಯಾವುದೇ ತೊಂದರೆ ಇಲ್ಲ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಹೀಗಿತ್ತು ಆ ಕ್ಷಣ:
ಇತ್ತೀಚೆಗಷ್ಟೇ ಮುಕ್ತಾಯವಾದ ರಣಜಿ ಟೂರ್ನಿಯಲ್ಲಿ ಬಂಗಾಳ ತಂಡ ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗಿದ್ದರೂ ತಂಡದ ಪರ ದಿಂಡಾ ಗಮನಾರ್ಹ ಪ್ರದರ್ಶನ ತೋರಿದ್ದರು. ಆಡಿದ 8 ಪಂದ್ಯಗಳಲ್ಲಿ 28 ವಿಕೆಟ್ ಕಬಳಿಸುವ ಮೂಲಕ ತಂಡದ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು.