ವಿರಾಟ್ ಕೊಹ್ಲಿಯನ್ನ ಅಣಕಿಸಿದ ಐಸಿಸಿ-ರೊಚ್ಚಿಗೆದ್ರು ಫ್ಯಾನ್ಸ್!

Published : Aug 05, 2018, 07:31 PM IST
ವಿರಾಟ್ ಕೊಹ್ಲಿಯನ್ನ ಅಣಕಿಸಿದ ಐಸಿಸಿ-ರೊಚ್ಚಿಗೆದ್ರು ಫ್ಯಾನ್ಸ್!

ಸಾರಾಂಶ

ಮೈಕ್ ಡ್ರಾಪ್ ಸೆಲೆಬ್ರೇಷನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಕ್ಕ ತಿರುಗೇಟು ನೀಡಿದ್ದರು. ಇದೀಗ ಇದೇ ವಿಚಾರವನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಅಣಕಿಸಿದೆ. ಐಸಿಸಿ ಟ್ವೀಟ್‌ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಐಸಿಸಿ ಟ್ವೀಟ್ ಹಾಗೂ ಅಭಿಮಾನಿಗಳು ಪ್ರತಿಕ್ರಿಯೆ ಏನು? ಇಲ್ಲಿದೆ.

ದುಬೈ(ಆ.05): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಅಂತ್ಯವಾದರೂ, ಹಲವು ಕಾರಣಗಳಿಂದ ಮತ್ತೆ ಮತ್ತೆ ಸದ್ದು ಮಾಡುತ್ತಿದೆ. ಇಂಗ್ಲೆಂಡ್ ನಾಯಕ ಜೋ ರೂಟ್ ರನೌಟ್ ಮಾಡಿದ ವಿರಾಟ್ ಕೊಹ್ಲಿ ಮೈಕ್ ಡ್ರಾಪ್ ಸೆಲೆಬ್ರೇಷನ್ ಮಾಡಿ ತಿರುಗೇಟು ನೀಡಿದ್ದರು. ಇದೀಗ ಕೊಹ್ಲಿಯನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಣಕಿಸಿದೆ.

ಜೋ ರೂಟ್ ಏಕದಿನ ಸರಣಿಯಲ್ಲಿ ಬ್ಯಾಟ್ ಡ್ರಾಪ್ ಮಾಡಿ ಸಂಭ್ರಮಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ, ಮೈಕ್ ಡ್ರಾಪ್ ಸೆಲೆಬ್ರೇಷನ್ ಮಾಡಿದ್ದರು. ಇದೀಗ ಸರಣಿ ಮುಗಿದ ಬಳಿಕ ಐಸಿಸಿ, ಕೊಹ್ಲಿಯನ್ನ ಅಣಕಿಸೋ ರೀತಿಯಲ್ಲಿ ಟ್ವೀಟ್ ಮಾಡಿದೆ.

 

 

ವಿರಾಟ್ ಕೊಹ್ಲಿ ಹಾಗೂ ಜೋ ರೂಟ್ ಫೋಟೋ ನಡುವೆ ಮೈಕ್ ಚಿತ್ರವನ್ನ ಎಡಿಟ್ ಮಾಡಲಾಗಿದೆ. ಇದನ್ನ ಐಸಿಸಿ ಟ್ವಿಟರ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದೆ. ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಜವಾಬ್ದಾರಿಯುತ ಸಮಿತಿ ಟ್ರೋಲ್ ಪೇಜ್ ರೀತಿ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಐಸಿಸಿ ಅಣಕಕ್ಕೆ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!
IPL 2026: ಕೆಕೆಆರ್​ ತಂಡದಿಂದ ಶಾರುಖ್​- ಜೂಹಿ ಗಳಿಸೋದೆಷ್ಟು? ಈ ಜೋಡಿಗೆ ಐಪಿಎಲ್​ ಚಿನ್ನದ ಮೊಟ್ಟೆ ಆಗಿದ್ಹೇಗೆ?