ಮುಂದಿನ ಐಪಿಎಲ್‌ಗೆ ತಮಿಳು ಕಲೀತಾರೆ ಧೋನಿ- ಕೊಹ್ಲಿ ಕನ್ನಡ ಕಲೀತಾರ?

By Web DeskFirst Published Aug 5, 2018, 6:12 PM IST
Highlights

ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕ ಎಂ ಎಸ್ ಧೋನಿ ಇದೀಗ ತಮಿಳು ಕಲಿಯಲು ಮುಂದಾಗಿದ್ದಾರೆ. ತಮಿಳುನಾಡು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗಾಗಿ ಧೋನಿ ತಮಿಳು ಕಲಿಯಲು ನಿರ್ಧರಿಸಿದ್ದಾರೆ. ಆದರೆ ಕನ್ನಡಿಗರಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕನ್ನಡ ಕಲಿಯೋದು ಯಾವಾಗ? ಇಲ್ಲಿದೆ ಉತ್ತರ.

ಚೆನ್ನೈ(ಆ.05): ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಯ ಎರಡನೇ ತವರು ಚೆನ್ನೈ. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುತ್ತಿರುವ ಧೋನಿ ಎಂದರೆ ತಮಿಳುನಾಡಿ ಜನತೆಗೆ ತಲೈವಾ. ಧೋನಿ ಕೂಡ ಅಷ್ಟೇ ಚೆನ್ನೆೈ ಹಾಗೂ ತಮಿಳುನಾಡಿನ ಜನರ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ.

ಐಪಿಎಲ್ ಟೂರ್ನಿ ವೇಳೆ ಧೋನಿ ಹಲವು ಬಾರಿ ತಮಿಳಿನಲ್ಲಿ ಕೆಲ ಶಬ್ದ ಮಾತನಾಡಿದ್ದಾರೆ. ಇದೀಗ ಮುಂದಿನ ಐಪಿಎಲ್ ಟೂರ್ನಿ ವೇಳೆಗೆ ಪಕ್ಕಾ ತಮಿಳು ಮಾತನಾಡೋದಾಗಿ ಧೋನಿ ಭರವಸೆ ನೀಡಿದ್ದಾರೆ. 

ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿಗೆ ದಿಢೀರ್ ಭೇಟಿ ನೀಡಿ ಎಂ ಎಸ್ ಧೋನಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು. ಮಧುರೈ ಪ್ಯಾಂಥರ್ಸ್ ಹಾಗೂ ಕೊವೈ ಕಿಂಗ್ಸ್ ನಡುವಿನ ಪಂದ್ಯಕ್ಕೆ ಹಾಜರಾದ ಧೋನಿಗೆ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ನೀಡಿದರು. ಟಾಸ್ ವೇಳೆ ತಮಿಳಿನಲ್ಲಿ ಮಾತನಾಡಲು ಪ್ರಯತ್ನಿಸಿದ ಧೋನಿ ಮುಂದಿನ ಐಪಿಎಲ್ ಟೂರ್ನಿ ವೇಳೆ ಸ್ಪಷ್ಟ ತಮಿಳು ಮಾತನಾಡೋದಾಗಿ ಹೇಳಿದ್ದಾರೆ.

 

Singam ondru purapattathey! pic.twitter.com/JNY4LYDf6f

— TNPL (@TNPremierLeague)

 

ಧೋನಿ ಈಗಾಗಲೇ ಹಲವು ಭಾರಿ ತಮಿಳಿನಲ್ಲಿ ಮಾತನಾಡಿ ತಮಿಳುನಾಡಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಧೋನಿ ಮಾತ್ರವಲ್ಲ ಕಳೆದ 11 ವರ್ಷಗಳಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನ ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ ಕೂಡ ಕನ್ನಡದಲ್ಲಿ ಮಾತನಾಡಿದ್ದಾರೆ.  ಮುಂದಿನ ಐಪಿಎಲ್ ಟೂರ್ನಿ ವೇಳೆಗೆ ಧೋನಿ ರೀತಿ, ಕೊಹ್ಲಿ ಕೂಡ ಕನ್ನಡ ಮಾತನಾಡಲು ಪ್ರಯತ್ನಿಸಿದ್ದರೆ ಅದಕ್ಕಿಂತ ಹೆಮ್ಮೆಯ ವಿಚಾರ ಮತ್ತೊಂದಿಲ್ಲ. 
 

click me!