ಆಸ್ಪತ್ರೆ ಸೇರಿದ ಸುರೇಶ್ ರೈನಾ..!

By Web Desk  |  First Published Aug 11, 2019, 2:42 PM IST

ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದೊಂದು ವರ್ಷದಿಂದ ಟಿಂ ಇಂಡಿಯಾದಿಂದ ಹೊರಗುಳಿದಿರುವ ರೈನಾ ಇದೀಗ ಕನಿಷ್ಠ 4-6 ವಾರಗಳ ವಿಶ್ರಾಂತಿ ಅಗತ್ಯವಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವದೆಹಲಿ[ಆ.11]: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಸುರೇಶ್ ರೈನಾ, ಶುಕ್ರವಾರ ಹಾಲೆಂಡ್‌ನ ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದರಿಂದಾಗಿ ಮುಂಬರುವ ದೇಸೀ ಕ್ರಿಕೆಟ್‌ನಿಂದ ರೈನಾ ದೂರ ಉಳಿಯಲಿದ್ದಾರೆ. 

Mr Suresh Raina underwent a knee surgery where he had been facing discomfort for the last few months. The surgery has been successful and it will require him 4-6 week of rehab for recovery.

We wish him a speedy recovery 🙏 pic.twitter.com/osOHnFLqpB

— BCCI (@BCCI)

ಕಳೆದ ವರ್ಷದಿಂದಲೇ ರೈನಾ ಎಡ ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೈನಾಗೆ 4 ರಿಂದ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ.

Latest Videos

ಸುರೇಶ್ ರೈನಾ ಭಾರತ ಪರ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. 38 ವರ್ಷದ ರೈನಾ ಜುಲೈ 2018ರಲ್ಲಿ ಭಾರತ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. 
 

click me!