ಟೀಂ ಇಂಡಿಯಾ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

By Web DeskFirst Published Aug 21, 2019, 11:31 AM IST
Highlights

ಭಾರತ ಹಾಗೂ ವೆಸ್ಟ್ ಇಂಡೀಸ್ ’ಎ’ ತಂಡಗಳ ನಡುವಿನ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಪೂಜಾರ, ರೋಹಿತ್ ಶರ್ಮಾ, ಹನುಮಾ ವಿಹಾರಿ, ಅಜಿಂಕ್ಯ ರಹಾನೆ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಕೂಲಿಡ್ಜ್‌(ಆ.21): ಭಾರತ ಹಾಗೂ ವೆಸ್ಟ್‌ಇಂಡೀಸ್‌ ‘ಎ’ ನಡುವಿನ 3 ದಿನಗಳ ಅಭ್ಯಾಸ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತು. 

ವಿಂಡೀಸ್ ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿಗೆ ಶುರುವಾಗಿದೆ ಟೆನ್ಶನ್..!

ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 297 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದ ಭಾರತ, ವಿಂಡೀಸ್‌ ‘ಎ’ ತಂಡವನ್ನು 181 ರನ್‌ಗಳಿಗೆ ಆಲೌಟ್‌ ಮಾಡಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 188 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ವಿಂಡೀಸ್‌ 3 ವಿಕೆಟ್‌ಗೆ 47 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

ಅಭ್ಯಾಸ ಪಂದ್ಯ: ಪೂಜಾರ ಭರ್ಜರಿ ಶತಕ

ಭಾರತ ಪರ ಮೊದಲ ಇನಿಂಗ್ಸ್’ನಲ್ಲಿ ಚೇತೇಶ್ವರ್ ಪೂಜಾರ ಶತಕ ಬಾರಿಸಿದರೆ, ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇನ್ನು ಬೌಲಿಂಗ್’ನಲ್ಲಿ ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಕುಲ್ದೀಪ್ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದ್ದರು. ಇನ್ನು ದ್ವಿತೀಯ ಇನಿಂಗ್ಸ್’ನಲ್ಲಿ ಅಜಿಂಕ್ಯ ರಹಾನೆ ಹಾಗೂ ಹನುಮಾ ವಿಹಾರಿ ಅರ್ಧಶತಕ ಬಾರಿಸಿದ್ದರು. 

ಸ್ಕೋರ್‌: ಭಾರತ 297/6 ಡಿ. (ಪೂಜಾರ 100, ರೋಹಿತ್‌ 68) ಹಾಗೂ 188/5 ಡಿ. (ವಿಹಾರಿ 64, ರಹಾನೆ 54) 

ವಿಂಡೀಸ್‌ ‘ಎ’ 181/10 ಹಾಗೂ 47/3
 

click me!