
ಚೆನ್ನೈ(ಜು.24): ಭಾರತ ಟೆಸ್ಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್, ತಮ್ಮ ಬೌಲಿಂಗ್ ಶೈಲಿಯನ್ನು ಆಗಿಂದಾಗ್ಗೆ ಬದಲಾವಣೆ ಮಾಡಿಕೊಂಡು ಗಮನಸೆಳೆಯುತ್ತಿರುತ್ತಾರೆ.
ಜಿಂಬಾಬ್ವೆ BAN: ಅಚ್ಚರಿಗೊಳಗಾದ ಅಶ್ವಿನ್..!
ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಅಶ್ವಿನ್ ವಿಚಿತ್ರ ಬೌಲಿಂಗ್ ಶೈಲಿಯಿಂದ ಸುದ್ದಿ ಯಾಗಿದ್ದರು. ಇದೀಗ ಅದೇ ಬೌಲಿಂಗ್ ಶೈಲಿ ಮೂಲಕ ವಿಕೆಟ್ ಪಡೆದಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೀಗಿದೆ ನೋಡಿ ಅಶ್ವಿನ್ ವಿಚಿತ್ರ ಶೈಲಿಯ ಬೌಲಿಂಗ್:
ಬೌಲಿಂಗ್ ಶೈಲಿಯನ್ನು ಸಂಪೂರ್ಣವಾಗಿ ಪೂರೈಸದೆ ಚೆಂಡನ್ನು ಬೆನ್ನ ಹಿಂದೆ ಇಟ್ಟುಕೊಂಡು ಬಂದು ಎಸೆಯುವ ಹೊಸದೊಂದು ಶೈಲಿಯ ವಿಧಾನವನ್ನು ಅಶ್ವಿನ್ ಕಂಡುಕೊಂಡಿದ್ದಾರೆ. ಅಶ್ವಿನ್ ಬಲಗಾಲನ್ನು ಮುಂದಿಟ್ಟು ಚೆಂಡನ್ನು ಎಸೆಯುವುದರಿಂದ ನೋಡುಗರಿಗೆ ಇದೊಂದು ವಿಚಿತ್ರ ಶೈಲಿ ಎನಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.