"ಅಸರಾಂ, ರಾಮ್ ರಹೀಮ್‌ರನ್ನೇ ಕಾನೂನು ಬಿಡಲಿಲ್ಲ, ಶಮಿ ಯಾವ ಲೆಕ್ಕ"?

Published : Sep 04, 2019, 06:38 PM IST
"ಅಸರಾಂ, ರಾಮ್ ರಹೀಮ್‌ರನ್ನೇ ಕಾನೂನು ಬಿಡಲಿಲ್ಲ, ಶಮಿ ಯಾವ ಲೆಕ್ಕ"?

ಸಾರಾಂಶ

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಬಂಧನ ವಾರೆಂಟ್ ನೀಡಲಾಗಿದೆ. ಇಷ್ಟು ದಿನ ಕಾನೂನಿನಿಂದ ತಪ್ಪಿಸಿಕೊಂಡ ಶಮಿಗೆ ಇನ್ನು ಸಾಧ್ಯವಿಲ್ಲ. ಅಸರಾಂ ಬಾಪು, ರಾಮ್ ರಹೀಮ್ ಸೇರಿದಂತೆ ಘಟಾನುಘಟಿಗಳೇ ಕಾನೂನಿನಿಂದ ತಪ್ಪಿಸಲು ಸಾಧ್ಯವಾಗಿಲ್ಲ. ಇದೀಗ ಮೊಹಮ್ಮದ್ ಶಮಿ ಯಾವ ಲೆಕ್ಕ ಎಂದು ಪತ್ನಿ ಹಸೀನ್ ಜಹಾನ್ ಶಮಿ ವಿರುದ್ಧ  ಕೆಂಡಾಮಂಡಲವಾಗಿದ್ದಾರೆ.

ಕೋಲ್ಕತಾ(ಸೆ.04): ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಸೇರಿದಂತೆ ಪತ್ನಿಯಿಂದ ಹಲವು ಆರೋಪಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಶಮಿ ಪತ್ನಿ ಹಸೀನ್ ಜಹಾನ್ ದೂರಿನ ಆಧಾರದಲ್ಲಿ ಕೋಲ್ಕತಾ ಕೋರ್ಟ್ ಬಂಧನ ವಾರೆಂಟ್ ನೀಡಿದೆ. ಕೋಲ್ಕತಾ ಕೋರ್ಟ್ ಶಮಿಗೆ ಆರೆಸ್ಟ್ ವಾರೆಂಟ್ ನೀಡಿದ ಬೆನ್ನಲ್ಲೇ ಪತ್ನಿ ಹಸೀನ್ ಜಹಾನ್ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಿದ ಸಂತಸದಲಿದ್ದಾರೆ. ಇಷ್ಟೇ ಅಲ್ಲ ಕಾನೂನಿನ ಮುಂದೆ ಎಲ್ಲರೂ ಸಮ ಎಂದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

ಸತ್ಯವನ್ನು ಮರೆಮಾಚಿ, ಕಾನೂನಿನಿಂದ ತಪ್ಪಿಸಿಕೊಳ್ಳೋ ಮೊಹಮ್ಮದ್  ಶಮಿಗೆ ತಕ್ಕ ಶಾಸ್ತಿಯಾಗಿದೆ. ತಪ್ಪು ಮಾಡಿದ ಅಸಾರಾಂ ಬಾಪು, ರಾಮ್ ರಹೀಮ್‌ರನ್ನೇ ಕಾನೂನು ಬಿಟ್ಟಿಲ್ಲ. ಇನ್ನು ಮೊಹಮ್ಮದ್ ಶಮಿ ಯಾವ ಲೆಕ್ಕ ಎಂದು ಪತ್ನಿ ಹಸೀನ್ ಜಹಾನ್ ಹೇಳಿದ್ದಾರೆ. ಈಗಾಗಲೇ ಶಮಿ ಬಂಧನವಾಗುತ್ತಿತ್ತು. ಆದರೆ ಬಿಸಿಸಿಐ ಹಾಗೂ ಕೆಲ ಪ್ರಮುಖ ಕ್ರಿಕೆಟಿಗರು ಶಮಿಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ವಿಳಂಬವಾಗಿದೆ. ಆದರೆ ಇನ್ನು ಸಾಧ್ಯವಿಲ್ಲ ಎಂದು ಹಸೀನ್ ಜಹಾನ್ ಹೇಳಿದರು.

ಇದನ್ನೂ ಓದಿ: ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

ಶಮಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಸಮಯದಲ್ಲಿ ಸರೆಂಡರ್ ಆಗಿ ಬೇಲ್‌ಗೆ ಮನವಿ ಸಲ್ಲಿಸಲು ಸೂಚಿಸಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಗಿಸಿರುವ ಮೊಹಮ್ಮದ್ ಶಮಿ ತವರಿಗೆ ವಾಪಾಸ್ಸಾಗಲಿದ್ದಾರೆ. ಈಗಾಗಲೇ ಶಮಿ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPL 2026: ಹೊಸದಾಗಿ ಕ್ಯೂಟ್ ಫೋಟ್ ಶೇರ್ ಮಾಡಿದ RCB ಬ್ಯೂಟಿ ಲಾರೆನ್ ಬೆಲ್!
ಬಾಂಗ್ಲಾದೇಶ ಮಾತ್ರವಲ್ಲ ಪಾಕಿಸ್ತಾನವೂ ಟಿ20 ವಿಶ್ವಕಪ್‌ನಿಂದ ಔಟ್! ಸಿದ್ದತೆ ನಿಲ್ಲಿಸಿದ ಪಾಕ್!