ಟ್ಯಾಟೂ ಅಭಿ​ಮಾ​ನಿಯ ಮೆಚ್ಚಿ ಅಪ್ಪಿದ ಕೊಹ್ಲಿ!

By Web Desk  |  First Published Oct 3, 2019, 3:30 PM IST

ಟ್ಯಾಟೂ ಪ್ರಿಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಯೊಬ್ಬನನ್ನ ಅಪ್ಪಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರೇ ಅದರಲ್ಲೇನು ವಿಶೇಷ ಅಂತಿರಾ, ಈ ಸ್ಟೋರಿ ಓದಿ, ನಿಮಗೆ ತಿಳಿಯುತ್ತೆ....


ವಿಶಾ​ಖ​ಪ​ಟ್ಟ​ಣಂ[ಅ.03]: ಭಾರತ ಕ್ರಿಕೆಟ್‌ ತಂಡದ ನಾಯ​ಕ ವಿರಾಟ್‌ ಕೊಹ್ಲಿ ಯಾವುದೇ ಮೈದಾ​ನ​ದಲ್ಲಿ ಆಡು​ತ್ತಿ​ದ್ದರೂ ಅಭಿ​ಮಾ​ನಿ​ಗಳನ್ನು ಸೆಳೆ​ಯು​ತ್ತಾರೆ. ವಿಶೇಷ ಅಭಿ​ಮಾ​ನಿ​ಯನ್ನು ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ಸುದ್ದಿ​ಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ ಭೇಟಿ​ಯಾ​ಗಿದ್ದು, ತಾವಾ​ಗಿಯೇ ಅಭಿ​ಮಾ​ನಿ​ಯನ್ನು ಅಪ್ಪಿ​ಕೊಂಡರು. 

ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್

Tap to resize

Latest Videos

undefined

ಎದೆ​ಯಲ್ಲಿ ದೊಡ್ಡ​ದಾಗಿ ಕೊಹ್ಲಿ, ಬಿಸಿ​ಸಿಐ ಲೋಗೋ ಹಾಗೂ ಬೆನ್ನಿನ ಹಿಂಭಾಗ ಕೊಹ್ಲಿ ಜೆರ್ಸಿ ಸಂಖ್ಯೆ 18, ಸಾಧ​ನೆ​ಗ​ ಳನ್ನು ಅಭಿ​ಮಾನಿ ಹಚ್ಚೆ ಹಾಕಿ​ಸಿ​ದ್ದಾ​ರೆ. ಸಾಮಾ​ಜಿಕ ತಾಣ​ಗ​ಳಲ್ಲಿ ಚಿತ್ರ​ಗಳು ಭಾರೀ ವೈರಲ್‌ ಆಗಿವೆ.

ಸೆಕೆಂಡ್‌ಗಳಲ್ಲಿ ದಾಖಲೆಯ ಹಿಟ್ಸ್; ವಿರುಷ್ಕಾ ಫೋಟೋಗೆ ಫಿದಾ ಆದ ಫ್ಯಾನ್ಸ್!

ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕ್ರಮವಾಗಿ 79 ಹಾಗೂ 9 ರನ್ ಬಾರಿಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 20 ರನ್ ಬಾರಿಸಿ ಮುತ್ತುಸ್ವಾಮಿಗೆ ಚೊಚ್ಚಲ ಬಲಿಯಾದರು.ಕಳೆದ ತಿಂಗಳಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಭಾರತ ಪರ ಅತಿಹೆಚ್ಚು[28] ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ ನಾಯಕರಾಗಿ ಹೊರಹೊಮ್ಮಿದ್ದರು.

click me!