ಭಾರತ ತಂಡ ಇಂದು ವಿಂಡೀಸ್‌ಗೆ ಪ್ರಯಾಣ

Published : Jul 29, 2019, 09:36 AM IST
ಭಾರತ ತಂಡ ಇಂದು ವಿಂಡೀಸ್‌ಗೆ ಪ್ರಯಾಣ

ಸಾರಾಂಶ

ಟೀಂ ಇಂಡಿಯಾ ಆಗಸ್ಟ್ 03ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಪ್ರಯಾಣ ಬೆಳೆಸಲಿದೆ. ಆಗಸ್ಟ್ 03ರಿಂದ ಸೆಪ್ಟೆಂಬರ್ 03ರವರೆಗೆ ಟಿ20, ಏಕದಿನ ಹಾಗೂ ಟೆಸ್ಟ್ ಚಾಂಪಿಯನ್ ಶಿಪ್ ಸರಣಿ ಆಡಲಿದೆ.

ನವದೆಹಲಿ(ಜು.29): ಆಗಸ್ಟ್‌ 3 ರಿಂದ ಸುಮಾರು ಒಂದು ತಿಂಗಳುಗಳ ಕಾಲ ನಡೆಯಲಿರುವ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್‌ ತಂಡ ಸೋಮವಾರ ವಿಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ಕೆರಿಬಿಯನ್‌ ಪ್ರವಾಸದಲ್ಲಿ ಭಾರತ ತಂಡ, 3 ಟಿ20, 3 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಡ್ರೆಸ್ಸಿಂಗ್ ರೂಂ ಗುದ್ದಾಟ; ವಿಂಡೀಸ್ ಪ್ರವಾಸದ ಸುದ್ದಿಗೋಷ್ಠಿಗೆ ಕೊಹ್ಲಿ ಗೈರು?

ಸುದ್ದಿಗೋಷ್ಠಿ ಅನುಮಾನ:

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್‌ ಶರ್ಮಾ ಅವರ ನಡುವೆ ನಡೆದಿದೆ ಎನ್ನಲಾದ ಒಳಜಗಳದ ಕಾರಣದಿಂದಾಗಿ ವಿಂಡೀಸ್‌ ಪ್ರವಾಸಕ್ಕೆ ತೆರಳುವ ಮುನ್ನ ನಡೆಸಬೇಕಿದ್ದ ಸುದ್ದಿಗೋಷ್ಠಿ ರದ್ದಾಗಿದೆ ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವದಂತಿ ಹಬ್ಬಿಸಲಾಗಿದೆ. ಆದರೆ ಕೆಲ ಆಂಗ್ಲ ಮಾಧ್ಯಮಗಳ ಪ್ರಕಾರ ಭಾರತ ತಂಡ, ಸುದ್ದಿಗೋಷ್ಠಿ ನಡೆಸಿ ತೆರಳಲಿದ್ದಾರೆ ಎಂದು ವರದಿ ಮಾಡಿವೆ.

ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ

ಸುದ್ದಿಗೋಷ್ಠಿ ಯಾವ ಕಾರಣಕ್ಕೆ ನಡೆಯುವುದಿಲ್ಲ ಎನ್ನುವುದಾದರೆ, ಕೊಹ್ಲಿ ಹಾಗೂ ರೋಹಿತ್‌ ನಡುವಿನ ಬಿರುಕಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಸಂಭಾವ್ಯ ಪ್ರಶ್ನೆ ಎತ್ತಲಿವೆ. ಈ ಮುಜುಗರ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೊಹ್ಲಿ ಸುದ್ದಿಗೋಷ್ಠಿಯನ್ನು ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಸುದ್ದಿ ಆಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ಟೀಂ ಇಂಡಿಯಾ ವಿಂಡೀಸ್‌ ಪ್ರವಾಸ: ವೇಳಾಪಟ್ಟಿ ಪ್ರಕಟ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?