ಅರ್ಜುನ ಪ್ರಶಸ್ತಿಗೆ ರವೀಂದ್ರ ಜಡೇಜಾ ಹೆಸರು ಶಿಫಾರಸು

By Web Desk  |  First Published Aug 17, 2019, 5:59 PM IST

ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಹೆಸರನ್ನು ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಹರ್ಭಜನ್ ಸಿಂಗ್ ಹೆಸರು ತಿರಸ್ಕೃತಗೊಂಡ ಬೆನ್ನಲ್ಲೇ, ಜಡೇಜಾ ಹೆಸರು ಶಿಫಾರಸು ಮಾಡಲಾಗಿದೆ.


ಮುಂಬೈ(ಆ.17): ಕ್ರೀಡಾ ಸಾಧಕರಿಗೆ ನೀಡೋ ಭಾರತದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ ಹೆಸರು ಶಿಫಾರಸು ಮಾಡಲಾಗಿದೆ. ಪ್ರದರ್ಶನ ಆಧರಿಸಿ ಜಡೇಜಾ ಹೆಸರನ್ನು ಪ್ರಶಸ್ತಿ ಆಯ್ಕೆ ಸಮಿತಿ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ರವೀಂದ್ರ ಜಡೇಜಾ, ಪ್ರಸಕ್ತ ಸಾಲಿನಲ್ಲಿ ಅರ್ಜುನ ಪ್ರಸಸ್ತಿಗೆ ನಾಮನಿರ್ದೇಶನಗೊಂಡಿರುವ 19ನೇ ಆಟಗಾರ . 

ಇದನ್ನೂ ಓದಿ: ನನ್ನ ಕೊನೆ ಉಸಿರಿರುವರೆಗೂ ಹೋರಾಡುತ್ತೇನೆ; ಜಡೇಜಾ ಭಾವನಾತ್ಮಕ ಸಂದೇಶ!

Tap to resize

Latest Videos

undefined

ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಹಾಗೂ ಕುಸ್ತಿ ಪಟು ಭಜರಂಗ್ ಪೂನಿಯಾ ಹೆಸರನ್ನು ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ ರತ್ನಗೆ ಶಿಫಾರಸು ಮಾಡಲಾಗಿದೆ. ಅರ್ಜುನ ಪ್ರಶಸ್ತಿಗೆ ಕ್ರಿಕೆಟ್‌ನಿಂದ ರವೀಂದ್ರ ಜಡೇಜಾ ಅವರ ಏಕೈಕ ಹೆಸರು ಶಿಫಾರಸು ಮಾಡಲಾಗಿದೆ. ಇದಕ್ಕೂ ಮೊದಲು ಹರ್ಭಜನ್ ಸಿಂಗ್ ಹೆಸರನ್ನು ತಿರಸ್ಕರಿಸಲಾಗಿತ್ತು.

ಇದನ್ನೂ ಓದಿ: ದಿಗ್ಗಜರ ದಾಖಲೆ ಪುಡಿ ಮಾಡಿದ ಧೋನಿ-ಜಡೇಜಾ ಜೋಡಿ!

ರವೀಂದ್ರ ಜಡೇಜಾ 41 ಟೆಸ್ಟ್ ಪಂದ್ಯದಿಂದ 1485 ರನ್ ಸಿಡಿಸಿದ್ದಾರೆ. ಇನ್ನು 192 ವಿಕೆಟ್ ಕಬಳಿಸಿದ್ದಾರೆ. 156 ಏಕದಿನ ಪಂದ್ಯದಿಂದ 2128 ರನ್ ಸಿಡಿಸಿದ್ದಾರೆ. ಏಕದಿನದಲ್ಲಿ ಜಡ್ಡು, 178 ವಿಕೆಟ್ ಉರುಳಿಸಿದ್ದಾರೆ.  42 ಟಿ20 ಪಂದ್ಯದಿಂದ 135 ರನ್ ಸಿಡಿಸಿರುವ ಜಡೇಜಾ 108 ವಿಕೆಟ್ ಕಬಳಿಸಿದ್ದಾರೆ. ಟೀಂ ಇಂಡಿಯಾದ ಅತ್ಯುತ್ತಮ ಫೀಲ್ಡರ್ ಅನ್ನೋ ಹೆಗ್ಗಳಿಕೆಗೂ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.

click me!