
ಸಿಡ್ನಿ(ಡಿ.03): ತಮ್ಮ ತಂಡದ ಸಹ ಆಟಗಾರ ಮ್ಯಾಥ್ಯೂ ವೇಡ್ ವಿರುದ್ಧ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ತಂಡದ ಕೋಚ್ ಡರೇನ್ ಲೇಮನ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ದೇಶೀಯ ಪಂದ್ಯಾವಳಿಯಾದ ಶಫೀಲ್ಡ್ ಶೀಲ್ಡ್'ನಲ್ಲಿ ತಾವು ವಿಕ್ಟೋರಿಯಾ ತಂಡದಲ್ಲಿ ಆಡುವಾಗ ಮ್ಯಾಥ್ಯೂ ವೇಡ್ ಅವರಿಗಿಂತ ಕೆಳ ಹಂತದಲ್ಲಿ (6ನೇ ಕ್ರಮಾಂಕ) ಆಡಿದ್ದರಿಂದಾಗಿ, ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ವಾರ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡದ ಪರ ಆಡುವ ಅವಕಾಶದಿಂದ ವಂಚಿತನಾದೆ ಎಂದು ಗ್ಲೆನ್ ಹೇಳಿದ್ದರು.
ಮ್ಯಾಕ್ಸ್'ವೆಲ್ ಹೇಳಿಕೆ ತಂಡದ ಪ್ರತಿಯೊಬ್ಬರಿಗೂ ನೋವುಂಟು ಮಾಡಿದೆ. ಈ ಕುರಿತು ಮ್ಯಾಕ್ಸ್'ವೆಲ್ ಹಾಗೂ ತಂಡದೊಂದಿಗೆ ಗಂಭೀರವಾಗಿ ಚರ್ಚಿಸಿದ್ದೇನೆ ಎಂದು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಮ್ಯಾಕ್ಸ್'ವೆಲ್ ಅವರ ಈ ಹೇಳಿಕೆ ದುರದೃಷ್ಟಕರ ಎಂದು ಕೋಚ್ ಲೇಮನ್ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.