ಇಂದು ಬೆಂಗ್ಳೂರು 10ಕೆ ಮ್ಯಾರಥಾನ್‌ಗೆ ಚಾಲನೆ

By Naveen KodaseFirst Published May 21, 2023, 9:21 AM IST
Highlights

* ವಿಶ್ವ  10ಕೆ ಬೆಂಗಳೂರು ಮ್ಯಾರಥಾನ್‌ ಓಟಕ್ಕೆ ಚಾಲನೆ
* ಹಾಲಿ ಚಾಂಪಿಯನ್‌ ಕೀನ್ಯಾದ ನಿಕೋಲಸ್‌ ಕಿಪ್ಕೋರಿರ್‌ ಭಾಗಿ
* ಪ್ರಶಸ್ತಿ ಗೆಲ್ಲುವ ಕ್ರೀಡಾಪಟುವಿಗೆ 26,000 ಅಮೆರಿಕನ್‌ ಡಾಲರ್‌

ಬೆಂಗಳೂರು(ಮಾ.21): 15ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ ಓಟ ಭಾನುವಾರ ನಡೆಯಲಿದ್ದು, 27000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ತಾರಾ ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ಜೊತೆ ಭಾರತದ ಅಗ್ರ ಓಟಗಾರರೂ ಭಾಗವಹಿಸಲಿದ್ದಾರೆ. ಮಹಿಳೆಯರ 10 ಕಿ.ಮೀ. ಓಟ ಬೆಳಗ್ಗೆ 7.10ಕ್ಕೆ ಆರಂಭಗೊಂಡಿದ್ದು, ಪುರುಷರ 10 ಕಿ.ಮೀ. ಓಟಕ್ಕೆ ಬೆಳಗ್ಗೆ 8 ಗಂಟೆಗೆ ಚಾಲನೆ ಸಿಗಲಿದೆ.

ಹಾಲಿ ಚಾಂಪಿಯನ್‌ ಕೀನ್ಯಾದ ನಿಕೋಲಸ್‌ ಕಿಪ್ಕೋರಿರ್‌, ವಿಶ್ವದ 5ನೇ ಅತಿವೇಗದ 10ಕೆ ಓಟಗಾರ ಸೆಬಾಸ್ಟಿಯನ್‌ ಸಾವೆ, ಸ್ಟೀಫನ್‌ ಕಿಸ್ಸಾ ಪುರುಷರ ಸ್ಪರ್ಧೆಯಲ್ಲಿ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಮಹಿಳೆಯರ ಪೈಕಿ ಕೀನ್ಯಾದ ವಿಕೋಟಿ ಚೆಪ್‌ಗೆನೊ ಫೇವರಿಟ್‌ ಎನಿಸಿದ್ದಾರೆ. ಪ್ರಶಸ್ತಿ ಗೆಲ್ಲುವ ಕ್ರೀಡಾಪಟುವಿಗೆ 26,000 ಅಮೆರಿಕನ್‌ ಡಾಲರ್‌(ಅಂದಾಜು 21.55 ಲಕ್ಷ ರು.) ಬಹುಮಾನ ಮೊತ್ತ ಗೆಲ್ಲಲಿದ್ದು, ಕೂಟ ದಾಖಲೆ ಮುರಿದರೆ ಹೆಚ್ಚುವರಿ 8000 ಅಮೆರಿಕನ್‌ ಡಾಲರ್‌(ಅಂದಾಜು 6.63 ಲಕ್ಷ ರು.) ಸಿಗಲಿದೆ. ಒಲಿಂಪಿಕ್ಸ್‌ 400 ಮೀ. ಚಿನ್ನ ವಿಜೇತೆ ಅಮೆರಿಕದ ಸಾನ್ಯಾ ರಿಚರ್ಡ್ಸ್ ರಾಸ್‌ ಓಟದ ರಾಯಭಾರಿಯಾಗಿದ್ದಾರೆ.

We have at Bengaluru 🔥📷 pic.twitter.com/wIiOYo1GkM

— tcsw10k (@TCSWorld10K)

ಹಾಲೆಪ್‌ ವಿರುದ್ಧ 2ನೇ ಡೋಪಿಂಗ್‌ ಆರೋಪ!

ಲಂಡನ್‌: 2 ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತ ಟೆನಿಸ್‌ ಆಟಗಾರ್ತಿ, ರೊಮೇನಿಯಾದ ಸಿಮೋನಾ ಹಾಲೆಪ್‌ 2ನೇ ಬಾರಿಗೆ ಡೋಪಿಂಗ್‌ ಆರೋಪಕ್ಕೆ ತುತ್ತಾಗಿದ್ದಾರೆ. ಕಳೆದ ವರ್ಷ ಯು.ಎಸ್‌. ಓಪನ್‌ ವೇಳೆ ನಡೆಸಿದ ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಹಾಲೆಪ್‌ರನ್ನು ತಾತ್ಕಾಲಿಕ ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೊಂದು ಪರೀಕ್ಷಾ ಮಾದರಿಯಲ್ಲೂ ಹಾಲೆಪ್‌ ನಿಷೇಧಿತ ಮದ್ದು ಸೇವಿಸಿರುವುದು ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ಟೆನಿಸ್‌ನ ಭದ್ರತಾ ಘಟಕ ತಿಳಿಸಿದೆ. ಈ ಆರೋಪವನ್ನು ನಿರಾಕರಿಸಿರುವ ಹಾಲೆಪ್‌, ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

Wrestlers Protest ಕುಸ್ತಿಪಟುಗಳು ಪ್ರಶಸ್ತಿ ಹಣ ವಾಪಸ್‌ ನೀಡಲಿ: ಬ್ರಿಜ್‌ಭೂಷಣ್‌ ವಿವಾದಾತ್ಮಕ ಹೇಳಿಕೆ

ಆರ್ಚರಿ ವಿಶ್ವಕಪ್‌: ಭಾರತಕ್ಕೆ 2 ಚಿನ್ನ

ಶಾಂಘೈ: ಭಾರತದ ಯುವ ಆರ್ಚರಿ ಪಟು ಪ್ರಥಮೇಶ್‌ ಜಾವ್ಕರ್‌ ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ 2ನೇ ಹಂತದ ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ವಿಶ್ವ ನಂ.1 ನೆದರ್‌ಲೆಂಡ್‌್ಸನ ಮೈಕ್‌ ಸ್ಕೊ$್ಲೕಸರ್‌ ವಿರುದ್ಧ 149-148 ಅಂಕಗಳಲ್ಲಿ ಜಯಗಳಿಸಿ ಅಚ್ಚರಿ ಮೂಡಿಸಿದರು. ಇದೇ ವೇಳೆ ಕಾಂಪೌಂಡ್‌ ಮಿಶ್ರ ತಂಡದ ವಿಭಾಗದ ಫೈನಲ್‌ನಲ್ಲಿ ಓಜಸ್‌ ಹಾಗೂ ಜ್ಯೋತಿ ಸುರೇಖಾ ಕೊರಿಯಾದ ಕಿಮ್‌ ಜೊಂಗೊ ಹಾಗೂ ಓಹ್‌ ಯೋಯುನ್‌ ವಿರುದ್ಧ 156-155ರಲ್ಲಿ ರೋಚಕ ಗೆಲುವು ಪಡೆದು ಚಿನ್ನಕ್ಕೆ ಮುತ್ತಿಟ್ಟರು.

ರೈತರ ರೀತಿ ನಮ್ಮ ಹೋರಾಟ ಬದಲಾಗಲಿದೆ: ವಿನೇಶ್‌!

ನವದೆಹಲಿ: ಕುಸ್ತಿಪಟುಗಳ ಪ್ರತಿಭಟನೆಯೂ ರೈತ ಹೋರಾಟದ ರೀತಿ ಬದಲಾಗಬಹುದು. ಅದರಿಂದ ದೇಶಕ್ಕೆ ತೊಂದರೆಯಾಗಬಹುದು ಎಂದು ಪ್ರತಿಭಟನಾ ನಿರತ ಕುಸ್ತಿಪಟು ವಿನೇಶ್‌ ಫೋಗಾಟ್‌ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಬಂಧನಕ್ಕೆ ಭಾನುವಾರ(ಮೇ 21)ರ ಗಡುವು ನೀಡಿರುವ ಕುಸ್ತಿಪಟುಗಳು, ತಮ್ಮನ್ನು ಬೆಂಬಲಿಸುತ್ತಿರುವ ರೈತ ಸಂಘಟನೆ, ಖಾಪ್‌ ಪಂಚಾಯತ್‌ ಸೇರಿ ಒಟ್ಟು 31 ಸದಸ್ಯರ ಸಮಿತಿಯು ಗಂಭೀರ ಸ್ವರೂಪದ ನಿರ್ಧಾರ ಕೈಗೊಳ್ಳಲು ಸಿದ್ಧವಿದೆ ಎಂದಿದ್ದಾರೆ. 

‘ಕೃಷಿ ಕಾಯ್ದೆ ವಾಪಸ್‌ಗಾಗಿ ಸಾವಿರಾರು ರೈತರು 13 ತಿಂಗಳು ಹೋರಾಟ ನಡೆಸಿದ್ದರು. ನಾವೂ ಅಂತದ್ದೇ ಹೋರಾಟಕ್ಕೆ ಸಿದ್ಧವಿದ್ದೇವೆ’ ಎಂದು ವಿನೇಶ್‌ ಶನಿವಾರ ಹೇಳಿದರು.

click me!