
ದೆಹಲಿ(ಮೇ.20): ಐಪಿಎಲ್ 2023 ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಬಳಿಕ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 77 ರನ್ ಗೆಲುವು ದಾಖಲಿಸಿದೆ. ಅಂಕಪಟ್ಟಿಯಲ್ಲಿ 17 ಅಂಕದೊಂದಿಗೆ 2ನೇ ಸ್ಥಾನ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಸ್ಥಾನ ಖಚಿಕಪಡಿಸಿಕೊಂಡಿದೆ. ಇದೀಗ ಮೊದಲ ಕ್ಲಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಹಾಗೂ ಗುಜರಾತ್ ಟೈಟಾನ್ಸ್ ಹೋರಾಟ ಮಾಡುವುದು ಬಹುತೇಕ ಪಕ್ಕಾ ಆಗಿದೆ.
224 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡಯಲಿಲ್ಲ. ಪೃಥ್ವಿ ಶಾ ಕೇವಲ 5 ರನ್ ಸಿಡಿಸಿ ಔಟಾದರು. ಆದರೆ ತಂಡದ ಜವಾಬ್ದಾರಿ ಹೊತ್ತ ನಾಯಕ ಡೇವಿಡ್ ವಾರ್ನರ್ ದಿಟ್ಟ ಹೋರಾಟ ನೀಡಿದರು. ಇತ್ತ ಫಿಲಿಪ್ ಸಾಲ್ಟ್ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ರಿಲೋ ರೋಸೋ ಡಕೌಟ್ ಆದರು. ಇತ್ತ ವಾರ್ನರ್ ಏಕಾಂಗಿ ಹೋರಾಟ ನಡಸಿದರು.
ಡೆಲ್ಲಿ ಎದುರು 11 ವರ್ಷಗಳ ಹಳೆಯ IPL ದಾಖಲೆ ಮುರಿದ CSK
ವಾರ್ನರ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಯಶ್ ಧುಲ್ 13 ರನ್ ಸಿಡಿಸಿ ನಿರ್ಗಮಿಸಿದರು. ಅಕ್ಸರ್ ಪಟೇಲ್ ಹೋರಾಟದ ಸೂಚನೆ ನೀಡಿದರು. ಆದರೆ ಅಕ್ಸರ್ ಆಟ 15 ರನ್‌ಗೆ ಅಂತ್ಯವಾಯಿತು. ಅಮನ್ ಹಕೀಮ್ ಖಾನ್ 7 ರನ್ ಸಿಡಿಸಿ ಔಟಾದರು. ಇತ್ತ ಇಡೀ ಜವಾಬ್ದಾರಿ ಹೊತ್ತು ಆಡಿದ ವಾರ್ನರ್ 58 ಎಸೆತದಲ್ಲಿ 86 ರನ್ ಸಿಡಿಸಿ ಔಟಾದರು.
ವಾರ್ನರ್ ಔಟಾಗುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಪತನ ಮತ್ತಷ್ಟು ತೀವ್ರಗೊಂಡಿತು. ಲಲಿತ್ ಯಾದವ್ 6 ರನ್ ಸಿಡಿಸಿ ಔಟಾದರು. ಕುಲ್ದೀಪ್ ಯಾದವ್, ಚೇತನ್ ಸಕಾರಿಯಾ ಡಕೌಟ್ ಆದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ನಷ್ಟಕ್ಕೆ 146 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 77 ರನ್ ಭರ್ಜರಿ ಗೆಲುವು ದಾಖಲಿಸಿದ ಚೆನ್ನೈ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ.
ಐಪಿಎಲ್ ಪ್ಲೇಆಫ್ ಹೋರಾಟದ ಆರಂಭಿಕ 2 ಸ್ಥಾನಗಳು ಬಹುತೇಕ ಪಕ್ಕ. ಗುಜರಾತ್ ಟೈಟಾನ್ಸ್ ಮೊದಲ ಸ್ಥಾನ ಖಚಿತಪಡಿಸಿಕೊಂಡಿದೆ. ಇಂದಿನ ಗೆಲುವಿನ ಮೂಲಕ ಸಿಎಸ್‌ಕೆ 2ನೇ ಸ್ಥಾನ ಬಹುತೇಕ ಖಚಿವಾಗಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್, ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಇನ್ನುಳಿದ 2 ಸ್ಥಾನಕ್ಕೆ ಹೋರಾಟ ನಡೆಸಲಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆರ್‌ಸಿಬಿ ಯಾವುದೇ ಆತಂಕವಿಲ್ಲದೆ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲಿದೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಜೋಸ್ ಬಟ್ಲರ್..!
ಸದ್ಯ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ 18 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 17 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ 15 ಅಂಕ ಪಡೆದು 3ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 14 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ 5ನೇ ಸ್ಥಾನದಲ್ಲಿದೆ. ಆದರೆ 14 ಅಂಕ ಸಂಪಾದಿಸಿರುವ ರಾಜಸ್ಥಾನ ಈಗಾಗಲೇ ಲೀಗ್ ಪಂದ್ಯ ಮುಗಿಸಿದೆ. ಆದರೆ 6ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 13 ಪಂದ್ಯದಿಂದ 14 ಅಂಕ ಸಂಪಾದಿಸಿದೆ. ಅಂತಿಮ ಪಂದ್ಯದಲ್ಲಿ ಮುಂಬೈ ಹಾಗೂ ಆರ್‌ಸಿಬಿ ತಮ್ಮ ಲೀಗ್ ಪಂದ್ಯದಲ್ಲಿ ತಂಡಗಳು ಗೆಲುವು ಸಾಧಿಸಿದರೆ, ಸದ್ಯದ ನೆಟ್ ರೇಟ್ ಪ್ರಕಾರ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಪಡಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.