ಟಿ20 ಕ್ರಿಕೆಟ್: ಕರ್ನಾಟಕಕ್ಕೆ ಶಾಕ್ ಕೊಟ್ಟ ತಮಿಳುನಾಡು

By Suvarna Web DeskFirst Published Jan 29, 2017, 1:07 PM IST
Highlights

ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಕೇರಳ ವಿರುದ್ಧ ನಾಳೆ ಆಡಲಿದೆ.

ಚೆನ್ನೈ(ಜ. 29): ಸಯದ್ ಮುಷ್ತಾಕ್ ಅಲಿ ಅಂತಾರಾಜ್ಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ನಿರಾಶೆಯ ಅರಂಭ ಕಂಡಿದೆ. ಇಂದು ನಡೆದ ದಕ್ಷಿಣ ವಲಯ ಗುಂಪಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ 4 ವಿಕೆಟ್'ಗಳಿಂದ ಸೋಲನುಭವಿಸಿದೆ. ಗೆಲ್ಲಲು ಕರ್ನಾಟಕ ಒಡ್ಡಿದ 145 ರನ್ ಗುರಿಯನ್ನು ತಮಿಳುನಾಡು 4 ಎಸೆತ ಬಾಕಿ ಇರುವಂತೆ ಮೆಟ್ಟಿ ನಿಂತಿತು. ತಮಿಳುನಾಡಿನ ವಿಜಯ್'ಶಂಕರ್, ದಿನೇಶ್ ಕಾರ್ತಿಕ್ ಮತ್ತು ಅಶ್ವಿನ್ ಮುರುಗನ್ ಅವರು ಗೆಲುವಿನ ರೂವಾರಿಯಾದರು. ಅಶ್ವಿನ್ ಕೇವಲ 20 ಬಾಲ್'ನಲ್ಲಿ ಅಜೇಯ 34 ರನ್ ಗಳಿಸಿ ತಂಡಕ್ಕೆ ನಿರೀಕ್ಷೆಮೀರಿ ಸುಲಭ ಗೆಲುವನ್ನು ಸಾಧ್ಯವಾಗಿಸಿದರು. 6ನೇ ವಿಕೆಟ್'ಗೆ ಅಶ್ವಿನ್ ಮುರುಗನ್ ಮತ್ತು ದಿನೇಶ್ ಕಾರ್ತಿಕ್ ಗಳಿಸಿದ 55 ರನ್ ಜೊತೆಯಾಟ ಕೂಡ ತಮಿಳುನಾಡಿನ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ಇನ್ನಿಂಗ್ಸಲ್ಲಿ ರವಿಕುಮಾರ್ ಸಮರ್ಥ್ ಹೊರತುಪಡಿಸಿ ಉಳಿದವರು ನಿರಾಶೆ ಮೂಡಿಸಿದರು. ಮಯಂಕ್ ಅಗರ್ವಾಲ್ ಶೂನ್ಯ ಸಂಪಾದನೆ ಮಾಡಿದರೆ, ಕರುಣ್ ನಾಯರ್ ಕೇವಲ 14 ರನ್'ಗೆ ತೃಪ್ತಿಪಟ್ಟರು.

ಇನ್ನು, ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಕೇರಳ ವಿರುದ್ಧ ನಾಳೆ ಆಡಲಿದೆ. ಇದೂ ಕೂಡ ಚೆನ್ನೈನಲ್ಲೇ ನಡೆಯಲಿದ್ದು, ಕರ್ನಾಟಕಕ್ಕೆ ಒಂದು ರೀತಿಯಲ್ಲಿ ಡೂ ಆರ್ ಡೈ ಸ್ಥಿತಿ ಇದೆ.

ಸ್ಕೋರು ವಿವರ:

ಕರ್ನಾಟಕ 20 ಓವರ್ 144/9
(ರವಿಕುಮಾರ್ ಸಮರ್ಥ್ 40, ಸಿಎಂ ಗೌತಮ್ 16, ಅನಿರುದ್ಧ್ ಜೋಷಿ 16, ಸ್ಟಾಲಿನ್ ಹೂವರ್ 16, ಕೆ.ಗೌತಮ್ 16, ಕರುಣ್ ನಾಯರ್ 14 ರನ್ - ಎಂ.ಅಶ್ವಿನ್ 21/2, ರಾಹಿಲ್ ಶಾ 24/2, ಟಿ.ನಟರಾಜನ್ 26/2, ಕೆ.ವಿಘ್ನೇಶ್ 29/2)

ತಮಿಳುನಾಡು 19.2 ಓವರ್ 145/6
(ದಿನೇಶ್ ಕಾರ್ತಿಕ್ 45, ಎಂ.ಅಶ್ವಿನ್ ಅಜೇಯ 34, ವಿಜಯ್'ಶಂಕರ್ 30 ರನ್ - ಕೆ.ಗೌತಮ್ 25/2)

click me!