ತಮಿಳುನಾಡಿನ 18 ವರ್ಷದ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೇಘಾಲಯ (ಏ. 18): ತಮಿಳುನಾಡಿನ 18 ವರ್ಷದ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ಭಾನುವಾರ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಹೇಳಿಕೆಯಲ್ಲಿ ತಿಳಿಸಿದೆ. ಸೋಮವಾರದಿಂದ ಆರಂಭವಾಗಲಿರುವ 83ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ಗಾಗಿ ಅವರು ಮೂವರು ಸಹ ಆಟಗಾರರೊಂದಿಗೆ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಪ್ರಯಾಣಿಸುತ್ತಿದ್ದರು.
ವಿಶ್ವ ಅವರೊಂದಿಗೆ ಪ್ರಯಾಣಿಸುತ್ತಿದ್ದ ರಮೇಶ್ ಸಂತೋಷ್ ಕುಮಾರ್, ಅಬಿನಾಶ್ ಪ್ರಸನ್ನಜಿ ಶ್ರೀನಿವಾಸನ್ ಮತ್ತು ಕಿಶೋರ್ ಕುಮಾರ್ ಎಂಬ ಮೂವರು ಗಂಭೀರ ಗಾಯಗೊಂಡಿದ್ದಾರೆ.ಗ ಮೂವರಿಗೂ ಚಿಕಿತ್ಸೆ ನೀಡುಲಾಗುತ್ತಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ದೃಡಪಡಿಸಿದ್ದಾರೆ.
"ವಿರುದ್ಧ ದಿಕ್ಕಿನಿಂದ ಬರುತ್ತಿದ್ದ 12 ಚಕ್ರಗಳ ಟ್ರೈಲರ್, ರಸ್ತೆ ವಿಭಜಕವನ್ನು ಡಿಕ್ಕಿಯಾಗಿ ಉಮ್ಲಿ ಚೆಕ್ ಪೋಸ್ಟ್ ನಂತರ ಶಾಂಗ್ಬಂಗ್ಲಾದಲ್ಲಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದು ಕಂದಕ್ಕೆ ಧುಮುಕಿತು" ಎಂದು ಟಿಟಿಎಫ್ಐ (TTFI) ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಗಣಿ ತ್ಯಾಜ್ಯದ ರಾಶಿ ಕುಸಿದು ಇಬ್ಬರ ಸಾವು: 6 ಜನರ ವಿರುದ್ದ ಎಫ್ಐಆರ್ ದಾಖಲು!
ಇನ್ನು ಘಟನೆಯಲ್ಲಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ವಿಶ್ವ ಮೃತಪಟ್ಟಿದ್ದಾನೆ ಎಂದು ನಾರ್ತ್ ಈಸ್ಟರ್ನ್ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆ ತಿಳಿಸಿದೆ. ಮೇಘಾಲಯ ಸರ್ಕಾರದ ಸಹಾಯದಿಂದ ವಿಶ್ವ ಮತ್ತು ಅವರ ಮೂವರು ಸಹ ಆಟಗಾರರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ವಿಶ್ವ ದೀನದಯಾಳನ್ ನಿಧನಕ್ಕೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸಂತಾಪ ಸೂಚಿಸಿದ್ದಾರೆ. "ನಮ್ಮ ರಾಜ್ಯದಲ್ಲಿ 83 ನೇ ಸೀನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ತೆರಳುತ್ತಿದ್ದಾಗ ತಮಿಳುನಾಡಿನ ಪ್ಯಾಡ್ಲರ್ ದೀನದಯಾಳನ್ ವಿಶ್ವ ಅವರು ರಿ ಭೋಯ್ ಜಿಲ್ಲೆಯಲ್ಲಿ ಅಪಘಾತದಲ್ಲಿ ನಿಧನರಾದರು ಎಂದು ತಿಳಿದು ದುಃಖವಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
Saddened to learn that Tamil Nadu paddler, Deenadayalan Vishwa passed away after an accident in Ri Bhoi District while on his way to Shillong to participate in the 83rd Senior National Table Tennis Championship in our State pic.twitter.com/sGvAc3eDhe
— Conrad Sangma (@SangmaConrad)
ಹಲವಾರು ರಾಷ್ಟ್ರೀಯ ರ‍್ಯಾಂಕಿಂಗ್ಸ್ ಮತ್ತು ಅಂತರರಾಷ್ಟ್ರೀಯ ಪದಕಗಳನ್ನು ಹೊಂದಿರುವ ಭರವಸೆಯ ಆಟಗಾರ ವಿಶ್ವ, ಏಪ್ರಿಲ್ 27 ರಿಂದ ಆಸ್ಟ್ರಿಯಾದ ಲಿಂಜ್‌ನಲ್ಲಿ WTT Youth Contender ಭಾರತವನ್ನು ಪ್ರತಿನಿಧಿಸಬೇಕಿತ್ತು.
ಅಣ್ಣಾನಗರದಲ್ಲಿರುವ ಕೃಷ್ಣಸ್ವಾಮಿ TT ಕ್ಲಬ್‌ನಲ್ಲಿ ತರಬೇತಿ ಪಡೆದಿರುವ ವಿಶ್ವ, ರಾಮ್ನಾಥ್ ಪ್ರಸಾದ್ ಮತ್ತು ಜೈ ಪ್ರಭು ರಾಮ್ ಅವರಿಂದ ತರಬೇತಿ ಪಡೆದಿದ್ದರು. ಅಲ್ಲದೇ ಒಂಬತ್ತು ಬಾರಿ ಸಿನಿಯರ್ ನ್ಯಾಷನಲ್ ಚಾಂಪಿಯನ್ ಆದ ಮೊದಲ ಭಾರತೀಯ ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್ ಅವರಿಂದ ಪ್ರಶಸಂಸೆಗೆ ಒಳಗಾಗಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Shocked beyond words to hear about the heartbreaking & untimely demise of our young, promising Table Tennis player Vishwa Deenadayalan. He was a legend-in-making and it pains me that he left us too soon.
I offer my deepest condolences to his family, friends & sports fraternity. pic.twitter.com/hFlrR0Mycl