2020ರ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ತಂಡಗಳ ಪಟ್ಟಿಯನ್ನ ಐಸಿಸಿ ಪ್ರಕಟಿಸಿದೆ. ವಿಶೇಷ ಅಂದರೆ ಅಫ್ಘಾನಿಸ್ತಾನ ತಂಡ ಸೂಪರ್ 12ಗೆ ನೇರ ಅರ್ಹತೆ ಪಡೆದುಕೊಂಡರೆ, ಹಾಲಿ ಚಾಂಪಿಯನ್ ತಂಡವೊಂದು ಅರ್ಹತೆ ಪಡೆಯಲು ವಿಫಲವಾಗಿದೆ.
ದುಬೈ(ಜ.01): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ತಂಡಗಳ ಪಟ್ಟಿಯನ್ನ ಐಸಿಸಿ ಪ್ರಕಟಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ, ಪಾಕಿಸ್ತಾನ ಸೇರಿದಂತೆ 8 ತಂಡಗಳು ಸೂಪರ್ 12 ಹಂತಕ್ಕೆ ನೇರವಾಗಿ ಪ್ರವೇಶ ಪಡೆದುಕೊಂಡಿದೆ.
ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ!
ಮಾಜಿ ಚಾಂಪಿಯನ್ ಶ್ರೀಲಂಕಾ ತಂಡ ಸೂಪರ್ 12 ಹಂತಕ್ಕೆ ನೇರ ಅರ್ಹತೆ ಪಡೆಯಲು ವಿಫಲಾವಾಗಿದೆ. ಲಂಕಾ ಜೊತೆ ಬಾಂಗ್ಲಾದೇಶ ಕೂಡ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿಕೊಂಡಿಲ್ಲ. ಈ ಎರಡು ತಂಡಗಳು ಉಳಿದ 6 ತಂಡಗಳ ಜೊತೆ ಕ್ವಾಲಿಫೈಯರ್ ಪಂದ್ಯ ಆಡಬೇಕಿದೆ.
ಇದನ್ನೂ ಓದಿ: ಕ್ರಿಕೆಟ್‌ಗಾಗಿ ವಿರಾಟ್ ಕೊಹ್ಲಿ ಅತ್ತಿದ್ದು ಯಾವಾಗ?
ಭಾರತ ಹಾಗೂ ಪಾಕಿಸ್ತಾನ ಜೊತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಸೂಪರ್ 12 ಹಂತಕ್ಕೆ ನೇರ ಅರ್ಹತೆ ಪಡೆದುಕೊಂಡಿದೆ. ಡಿಸೆಂಬರ್ 31, 2018ಕ್ಕೆ ಐಸಿಸಿ ತಂಡಗಳ ಶ್ರೇಯಾಂಕದ ಆಧಾರದಲ್ಲಿ ಅರ್ಹತೆಗಳನ್ನ ಪ್ರಕಟಿಸಲಾಗಿದೆ.