
ಕೋಲ್ಕತಾ(ಜ.24): ಕರುಣ್ ನಾಯರ್ ಬಾರಿಸಿದ ಸ್ಫೋಟಕ ಶತಕ ಹಾಗೂ ವೇಗಿಗಳ ಕರಾರುವಕ್ಕಾದ ದಾಳಿಯ ನೆರವಿನಿಂದ ಕರ್ನಾಟಕ ಸಯ್ಯದ್ ಮುಷ್ತಾಕ್ ಅಲಿ ಸೂಪರ್ ಲೀಗ್ ನಾಕೌಟ್'ನಲ್ಲಿ ಮೊದಲ ಜಯ ದಾಖಲಿಸಿತು. ಮೊದಲೆರಡು ಪಂದ್ಯಗಳಲ್ಲಿ ನಿರಾಸೆ ಕರುಣ್ ನಾಯರ್ ಬಳಗ ಕೊನೆಗೂ 123 ರನ್'ಗಳ ಭರ್ಜರಿ ಜಯದ ನಗೆ ಬೀರಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಆರಂಭದ ಆಘಾತದ ಹೊರತಾಗಿಯೂ ಕರುಣ್ ನಾಯರ್(100ರನ್ 52 ಎಸೆತ) ಬಾರಿಸಿದ ಸ್ಫೋಟಕ ಶತಕ ಹಾಗೂ ಪವನ್ ದೇಶ್‌ಪಾಂಡೆ ಚಚ್ಚಿದ ಉಪಯುಕ್ತ ಅರ್ಧಶತಕದ ನೆರವಿನಿಂದ 201 ರನ್ ಕಲೆಹಾಕಿತು.
ಕರ್ನಾಟಕ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಿದ ಜಾರ್ಖಂಡ್ ತಂಡಕ್ಕೆ ಕರ್ನಾಟಕದ ವೇಗಿಗಳು ತಬ್ಬಿಬ್ಬುಗೊಳಿಸಿದರು. ಮೊದಲ 5 ಓವರ್'ಗೆ 4 ವಿಕೆಟ್ ಕಳೆದುಕೊಂಡಿದ್ದ ವರೂಣ್ ಆರೋನ್ ಬಳಗ ಆ ಬಳಿಕ ತಂಡದ ಖಾತೆಗೆ 8 ರನ್ ಕೂಡಿಹಾಕುವುದರೊಳಗಾಗಿ ಮತ್ತೆ 4 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಜಾರ್ಖಂಡ್ ಕೇವಲ 78 ರನ್'ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.
ಮಿಥುನ್, ಅರವಿಂದ್, ಪ್ರಸಿದ್ಧ್, ಹಾಗೂ ಸುಚಿತ್ ದಾಳಿಗೆ ಜಾರ್ಖಂಡ್ ಬ್ಯಾಟ್ಸ್'ಮನ್'ಗಳ ಬಳಿ ಉತ್ತರವೇ ಇರಲಿಲ್ಲ. ಇದೀಗ ಕರ್ನಾಟಕ ತಂಡವು ಮುಂದಿನ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ 201/4
ಕರುಣ್ 100, ಪವನ್ 56
ಜಾರ್ಖಂಡ್ 78/10
ವಿಕಾಸ್ 25
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.