ಟೀಂ ಇಂಡಿಯಾ 187 ರನ್'ಗಳಿಗೆ ಆಲೌಟ್; ಎರಡಂಕಿ ಮುಟ್ಟಿದ್ದು ಮೂವರೇ ಬ್ಯಾಟ್ಸ್'ಮನ್'ಗಳು

By Suvarna Web DeskFirst Published Jan 24, 2018, 8:52 PM IST
Highlights

ವಿರಾಟ್ ಕೊಹ್ಲಿ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪೂಜಾರ 50 ರನ್'ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಕೆಳಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್(30 ರನ್) ಎರಡಂಕಿ ಮೊತ್ತ ಗಳಿಸಿದ್ದು ಬಿಟ್ಟರೆ ಮತ್ತೆ ಯಾವ ಆಟಗಾರನೂ ಎರಡಂಕಿ ಮೊತ್ತ ಮುಟ್ಟಲಿಲ್ಲ.

ಜೊಹಾನ್ಸ್'ಬರ್ಗ್(ಜ.24): ವಿಶ್ವದ ನಂ.1 ಟೆಸ್ಟ್ ತಂಡದ ದಯಾನೀಯ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಜಗತ್ತಿನೆದುರು ಬಯಲಾಗಿದೆ. ಆಫ್ರಿಕಾದ ಸ್ಪೀಡ್ ಪಿಚ್'ನಲ್ಲಿ ತರಗೆಲೆಗಳಂತೆ ಉದುರಿಹೋದ ಟೀಂ ಇಂಡಿಯಾ ಮೊದಲ ಇನಿಂಗ್ಸ್'ನಲ್ಲಿ 187 ರನ್'ಗಳಿಗೆ ಸರ್ವಪತನ ಕಂಡಿದೆ. ಕೊಹ್ಲಿ, ಪೂಜಾರ ಹಾಗೂ ಭುವನೇಶ್ವರ್ ಕುಮಾರ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್'ಮನ್'ಗಳು ಕೂಡಾ ಎರಡಂಕಿ ಮೊತ್ತ ಮುಟ್ಟಲಿಲ್ಲ. ಈಗಾಗಲೇ ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲೂ ಅದೇ ಹಳೆ ಚಾಳಿ ಮುಂದುವರೆಸಿದೆ.

 ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಮತ್ತೆ ಆರಂಭದಲ್ಲೇ ರಾಹುಲ್ ಹಾಗೂ ವಿಜಯ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 84 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾಯಿತು. ವಿರಾಟ್ ಕೊಹ್ಲಿ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪೂಜಾರ 50 ರನ್'ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಕೆಳಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್(30 ರನ್) ಎರಡಂಕಿ ಮೊತ್ತ ಗಳಿಸಿದ್ದು ಬಿಟ್ಟರೆ ಮತ್ತೆ ಯಾವ ಆಟಗಾರನೂ ಎರಡಂಕಿ ಮೊತ್ತ ಮುಟ್ಟಲಿಲ್ಲ.

ಪಟೇಲ್ ಪಾಂಡ್ಯ ರಹಾನೆ ಫೇಲ್:

ಒಂದು ಹಂತದಲ್ಲಿ 93 ರನ್'ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಉರುಳುತ್ತಿದ್ದಂತೆ ಪೆವಿಲಿಯನ್ ಪೆರೇಡ್ ನಡೆಸಿದರು. ರೋಹಿತ್ ಬದಲು ಸ್ಥಾನ ಪಡೆದ ರಹಾನೆ(9) ನಿರಾಸೆ ಮೂಡಿಸಿದರೆ, ಪಾರ್ಥಿವ್ ಪಟೇಲ್ ಆಟ ಕೇವಲ 2 ರನ್'ಗಳಿಗೆ ಸೀಮಿತವಾಯಿತು. ಇನ್ನು ಹಾರ್ದಿಕ್ ಪಾಂಡ್ಯ ಶೂನ್ಯ ಸುತ್ತಿ ಪೆವಿಲಿಯನ್ ಕೂಡಿಕೊಂಡರು.

ಆಫ್ರಿಕಾ ಪರ ಶಿಸ್ತಿನ ದಾಳಿ ನಡೆಸಿದ ಕಗಿಸೊ ರಬಾಡ 3 ವಿಕೆಟ್ ಕಬಳಿಸಿದರೆ, ಮಾರ್ಕೆಲ್, ಫಿಲಾಂಡರ್ ಹಾಗೂ ಫೆಲುಕ್ವೆನೋ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 187/10

ವಿರಾಟ್ ಕೊಹ್ಲಿ: 54

ಚೇತೇಶ್ವರ ಪೂಜಾರ: 50

ರಬಾಡ:39/3

(* ವಿವರ ಅಪೂರ್ಣ)

click me!