ಈಜು: ರಾಜ್ಯದ ಲಿನೈಶಾ, ನೀನಾ ರಾಷ್ಟ್ರೀಯ ದಾಖಲೆ..!

Published : Jul 03, 2023, 12:54 PM IST
ಈಜು: ರಾಜ್ಯದ ಲಿನೈಶಾ, ನೀನಾ ರಾಷ್ಟ್ರೀಯ ದಾಖಲೆ..!

ಸಾರಾಂಶ

* ಹೈದರಾಬಾದ್‌ನಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ * ಮೊದಲ ದಿನವೇ 4 ರಾಷ್ಟ್ರೀಯ ದಾಖಲೆಗಳೂ ನಿರ್ಮಾಣ * ಮೊದಲ ದಿನವೇ ಕರ್ನಾಟಕ 3 ಚಿನ್ನ ಸೇರಿದಂತೆ 9 ಪದಕಗಳನ್ನು ಬಾಚಿಕೊಂಡಿವೆ

ಹೈದರಾಬಾದ್‌(ಜು.03): ಇಲ್ಲಿ ಭಾನುವಾರ ಆರಂಭಗೊಂಡ 76ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನವೇ ಕರ್ನಾಟಕ 3 ಚಿನ್ನ ಸೇರಿದಂತೆ 9 ಪದಕಗಳನ್ನು ಬಾಚಿಕೊಂಡಿದೆ. ಅಲ್ಲದೇ 4 ರಾಷ್ಟ್ರೀಯ ದಾಖಲೆಗಳೂ ನಿರ್ಮಾಣವಾಗಿದೆ. ಮಹಿಳೆಯರ 200 ಮೀಟರ್‌ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ರಾಜ್ಯದ ಲಿನೈಶಾ ಎ.ಕೆ. 2 ನಿಮಿಷ37.35 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದಲ್ಲದೇ, ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮಗೊಳಿಸಿದರು. ಇನ್ನು ಲಕ್ಷ್ಮಿ ಬೆಳ್ಳಿ ಪಡೆದರು.

ಮಹಿಳೆಯರ 50 ಮೀಟರ್‌ ಬಟರ್‌ಪ್ಲೈನಲ್ಲಿನೀನಾ ವೆಂಕಟೇಶ್ 27.74 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿ, ರಾಷ್ಟ್ರೀಯ ದಾಖಲೆ ಬರೆದರೆ, ಮಾನವಿ ವರ್ಮಾಗೆ ಕಂಚು ಲಭಿಸಿತು. ಇನ್ನು ಪುರುಷರ 4*200 ಮೀಟರ್ ಫ್ರೀಸ್ಟೈಲ್‌ನಲ್ಲೂ ಕರ್ನಾಟಕ ಚಿನ್ನ ಗೆದ್ದಿತು. ಪುರುಷರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್‌ ಪಾಟೀಲ್ ಬೆಳ್ಳಿ ಜಯಿಸಿದರು. ಮಹಿಳೆಯರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸುವನಾ ಬಾಸ್ಕರ್, ಪುರುಷರ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ, ಮಣಿಕಾಂತ್‌ 400 ಮೀಟರ್‌ ಫ್ರಿಸ್ಟೈಲ್‌ನಲ್ಲಿ ಆನೀಶ್‌ ಗೌಡ ಕಂಚು ಗೆದ್ದರು.

2024ರಲ್ಲಿ ಮತ್ತೆ ಹಾಕಿ ಇಂಡಿಯಾ ಲೀಗ್‌ ಶುರು?

ನವದೆಹಲಿ: 7 ವರ್ಷಗಳ ಬಳಿಕ ಮತ್ತೊಮ್ಮೆ ಹಾಕಿ ಇಂಡಿಯಾ ಲೀಗ್‌(ಎಚ್‌ಐಎಲ್) ಟೂರ್ನಿಯನ್ನು ಮುಂದಿನ ವರ್ಷ ಅಥವಾ 2025ರ ಆರಂಭದಲ್ಲಿ ನಡೆಸಲು ಹಾಕಿ ಇಂಡಿಯಾ ಚಿಂತನೆ ನಡೆಸುತ್ತಿದೆ. 2013ರಲ್ಲಿ ಆರಂಭಗೊಂಡಿದ್ದ ಟೂರ್ನಿ 5 ಆವೃತ್ತಿಗಳ ಬಳಿಕ ಅಂದರೆ 2017ರಲ್ಲಿ ಆರ್ಥಿಕ ಸಮಸ್ಯೆ ಹಾಗೂ ತಂಡಗಳ ಮಾಲಿಕರ ನಿರಾಸಕ್ತಿಯಿಂದಾಗಿ ಸ್ಥಗಿತಗೊಂಡಿತ್ತು.

ಸೀನಿಯರ್ ಕೋಚ್ ಪತ್ನಿಯಿಂದ ಅಥ್ಲೀಟ್ ಬಿಂದು ರಾಣಿ ಮೇಲೆ ದೌರ್ಜನ್ಯ..! ಈ ಬಗ್ಗೆ ಸೀನಿಯರ್ ಕೋಚ್ ಹೇಳಿದ್ದೇನು?

ಈ ಬಾರಿ ಮತ್ತೆ ಟೂರ್ನಿ ಆಯೋಜನೆಗೆ ಸಿದ್ಧತೆ ಆರಂಭಿಸಿರುವ ಹಾಕಿ ಇಂಡಿಯಾ, ಟೂರ್ನಿಗೆ ಬೇಕಾದ ಸಮಯಾವಕಾಶವನ್ನು ಮೀಸಲಿಡಲು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌)ಗೆ ಮನವಿಯನ್ನೂ ಸಲ್ಲಿಸಿದೆ. ಈ ಬಾರಿ ಪುರುಷರ ಜೊತೆ ಮಹಿಳೆಯರ ಟೂರ್ನಿಯನ್ನೂ ನಡೆಸಲು ಹಾಕಿ ಇಂಡಿಯಾ ಚಿಂತಿಸುತ್ತಿದ್ದು, ಎಫ್‌ಐಎಚ್‌ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.

ರ್‍ಯಾಲಿ ಸ್ಪ್ರಿಂಟ್‌ ಗೆದ್ದ ಬೆಂಗಳೂರಿನ ರಾಜೇಂದ್ರ

ಬೆಂಗಳೂರು: ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರೆನಿಸಿರುವ ಬೆಂಗಳೂರಿನ ರಾಜೇಂದ್ರ ಆರ್., ಭಾನುವಾರ ಇಲ್ಲಿ ನಡೆದ ಭಾರತೀಯ ರಾಷ್ಟ್ರಿಯ ರ್‍ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್(ಐಎನ್‌ಆರ್‌ಎಸ್‌ಸಿ) ದಕ್ಷಿಣ ವಲಯ ಸುತ್ತಿನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ 10 ಕಿ.ಮೀ. ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಮೊದಲ ಸ್ಥಾನ ಪಡೆದರು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಉತ್ತರ, ಪೂರ್ವ, ಪಶ್ಚಿಮ ವಲಯಗಳ ಸ್ಪರ್ಧೆ ಬಳಿಕ ಗೋವಾದಲ್ಲಿ ಫೈನಲ್‌ ನಡೆಯಲಿದೆ.

ಬೆಂಗಳೂರು ತಂಡಕ್ಕೆ ಬಾಸ್ಕೆಟ್‌ಬಾಲ್‌ ಪ್ರಶಸ್ತಿ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ 3*3 ಪುರುಷರ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಸ್ಪೇಸ್‌ ಜಾಮ್‌ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತರಿಗೆ ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಕ್ರೀಡಾ ಸಚಿವ ಬಿ.ನಾಗೇಂದ್ರ ಟ್ರೋಫಿ ಹಾಗೂ 1.50 ಲಕ್ಷ ರು. ನಗದು ಬಹುಮಾನ ವಿತರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಹ್ಲಿ ಹೊಸ ವರ್ಷದ ಪೋಸ್ಟ್‌ಗೆ 80 ಲಕ್ಷ ಲೈಕ್ಸ್; ವಿರುಷ್ಕಾ ಜೋಡಿ ನೋಡಿ ದೃಷ್ಠಿ ಆಗೋದು ಗ್ಯಾರಂಟಿ ಎಂದ ಫ್ಯಾನ್ಸ್
ಮುಗಿಲು ಮುಟ್ಟಿದ ಕೊಹ್ಲಿ-ರೋಹಿತ್ ಕ್ರೇಜ್‌; ಭಾರತ-ಕಿವೀಸ್ ಮೊದಲ ಒನ್‌ಡೇ ಮ್ಯಾಚ್ ಟಿಕೆಟ್ 8 ನಿಮಿಷದಲ್ಲಿ ಸೋಲ್ಡೌಟ್