WFI Elections: ಕೊನೆಗೂ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ

By Kannadaprabha News  |  First Published Nov 29, 2023, 8:18 AM IST

ಚುನಾವಣೆಗೆ ತಡೆಯಾಜ್ಞೆ ಪ್ರಶ್ನಿಸಿ ಹರ್ಯಾಣ ಕುಸ್ತಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಭಯ್‌ ಓಕಾ ಹಾಗೂ ನ್ಯಾ.ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ, ‘ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಹೈಕೋರ್ಟ್‌ ಹೇಗೆ ವ್ಯರ್ಥಗೊಳಿಸಿದೆ ಎಂಬುದು ಅರ್ಥವಾಗುತ್ತಿಲ್ಲ. ಡಬ್ಲ್ಯುಎಫ್‌ಐಗೆ ಚುನಾವಣೆ ನಡೆಸುವುದೇ ಸರಿಯಾದ ಕ್ರಮ’ ಎಂದು ಹೇಳಿತು.


ನವದೆಹಲಿ(ನ.29): ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ನ ಚುನಾವಣೆಗೆ ಪಂಜಾಬ್‌-ಹರ್ಯಾಣ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಯನ್ನು ಮಂಗಳವಾರ ಸುಪ್ರೀಂಕೋರ್ಟ್‌ ತೆರವುಗೊಳಿಸಿದೆ. ಇದರೊಂದಿಗೆ ದೀರ್ಘಕಾಲ ವಿಳಂಬಗೊಂಡಿರುವ ಬಹುನಿರೀಕ್ಷಿತ ಚುನಾವಣೆಗೆ ಹಸಿರು ನಿಶಾನೆ ಲಭಿಸಿದೆ.

ಚುನಾವಣೆಗೆ ತಡೆಯಾಜ್ಞೆ ಪ್ರಶ್ನಿಸಿ ಹರ್ಯಾಣ ಕುಸ್ತಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಭಯ್‌ ಓಕಾ ಹಾಗೂ ನ್ಯಾ.ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ, ‘ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಹೈಕೋರ್ಟ್‌ ಹೇಗೆ ವ್ಯರ್ಥಗೊಳಿಸಿದೆ ಎಂಬುದು ಅರ್ಥವಾಗುತ್ತಿಲ್ಲ. ಡಬ್ಲ್ಯುಎಫ್‌ಐಗೆ ಚುನಾವಣೆ ನಡೆಸುವುದೇ ಸರಿಯಾದ ಕ್ರಮ’ ಎಂದು ಹೇಳಿತು.

Latest Videos

undefined

ಏಷ್ಯಾಕಪ್‌: ಹೆಚ್ಚುವರಿ ಹಣ ನೀಡುವಂತೆ ಪಟ್ಟುಹಿಡಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್

ಇಂದು ದಿನಾಂಕ ನಿಗದಿ?: ಚುನಾವಣೆಗೆ ಸುಪ್ರೀಂ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ, ಬುಧವಾರ ಚುನಾವಣೆಗೆ ಹೊಸ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ ಎಂದು ಡಬ್ಲ್ಯುಎಫ್‌ಐಗೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ನಿಯೋಜಿಸಿದ ತಾತ್ಕಾಲಿಕ ಸಮಿತಿ ಸದಸ್ಯ ಭೂಪೇಂದ್ರ ಸಿಂಗ್‌ ತಿಳಿಸಿದ್ದಾರೆ.

ಕಿರಿಯರ ಹಾಕಿ ವಿಶ್ವಕಪ್‌: ಇಂದು ಭಾರತ vs ಕೆನಡಾ

ಸ್ಯಾಂಟಿಯಾಗೊ(ಚಿಲಿ): 10ನೇ ಆವೃತ್ತಿಯ ಎಫ್‌ಐಎಚ್‌ ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ಗೆ ಬುಧವಾರ ಚಾಲನೆ ಸಿಗಲಿದ್ದು, ಚೊಚ್ಚಲ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಕೆನಡಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. 2022ರಲ್ಲಿ 4ನೇ ಸ್ಥಾನಿಯಾಗಿದ್ದ ಭಾರತ ಈ ಬಾರಿ ‘ಸಿ’ ಗುಂಪಿನಲ್ಲಿದೆ. ಡಿ.1ರಂದು ಜರ್ಮನಿ ವಿರುದ್ಧ ಆಡಲಿರುವ ಭಾರತ, ಡಿ.2ಕ್ಕೆ ಬೆಲ್ಜಿಯಂ ಸವಾಲು ಎದುರಿಸಲಿದೆ. 2013ರಲ್ಲಿ 3ನೇ ಸ್ಥಾನ ಪಡೆದಿದ್ದು ಭಾರತದ ಈ ವರೆಗಿನ ಶ್ರೇಷ್ಠ ಸಾಧನೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಡಿ.11ಕ್ಕೆ ಫೈನಲ್‌ ನಡೆಯಲಿದೆ.

ವಿಶ್ವಕಪ್ ಸೋತ ಭಾರತದ ವಿರುದ್ದವೇ ಘೋಷಣೆ ಕೂಗಿದ 7 ಕಾಶ್ಮೀರ ಯೂನಿವರ್ಸಿಟಿ ವಿದ್ಯಾರ್ಥಿಗಳು ಅರೆಸ್ಟ್..!

ಡಿ.13ರಿಂದ ತಿಪಟೂರಲ್ಲಿ ರಾಷ್ಟ್ರೀಯ ಖೋ-ಖೋ

ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಡಿ. 13ರಿಂದ 17ರವರೆಗೆ 33ನೇ ರಾಷ್ಟ್ರೀಯ ಸಬ್‌-ಜೂನಿಯರ್‌ ಬಾಲಕ, ಬಾಲಕಿಯರ ಖೋ-ಖೋ ಚಾಂಪಿಯನ್‌ಶಿಪ್‌ ನಡೆಯಲಿದೆ. 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿಂದ ತಲಾ 36 ಬಾಲಕ, ಬಾಲಕಿಯರ ತಂಡಗಳು ಭಾಗವಹಿಸಿದ್ದು, ಅಂದಾಜು 1300 ಆಟಗಾರರು ಆಗಮಿಸಲಿದ್ದಾರೆ. 200 ಅಧಿಕಾರಿಗಳು ಪಂದ್ಯಾವಳಿ ಯಶಸ್ಸು ಕಾಣಲು ಶ್ರಮಿಸಲಿದ್ದಾರೆ. ಕ್ರೀಡಾಂಗಣದಲ್ಲಿ 5 ಅಂಕಣಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಖಿಲ ಭಾರತ ಖೋ-ಖೋ ಸಂಸ್ಥೆ ಉಪಾಧ್ಯಕ್ಷ ಹಾಗೂ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ ಮಾಹಿತಿ ನೀಡಿದ್ದಾರೆ.
 

click me!