ಸನ್ ರೈಸರ್ಸ್ ನಾಗಲೋಟಕ್ಕೆ ಧೋನಿ ಪಡೆ ತಡೆ : ರಾಯುಡು ಶತಕ

Published : May 13, 2018, 07:37 PM ISTUpdated : May 13, 2018, 07:51 PM IST
ಸನ್ ರೈಸರ್ಸ್ ನಾಗಲೋಟಕ್ಕೆ ಧೋನಿ ಪಡೆ ತಡೆ : ರಾಯುಡು ಶತಕ

ಸಾರಾಂಶ

ಸ್ಫೋಟಕ ಆಟವಾಡಿದ ಅಂಬಾಟಿ ರಾಯುಡು 7 ಸಿಕ್ಸ್ ಹಾಗೂ 7 ಬೌಂಡರಿಯಿಂದ 100 ರನ್'ನೊಂದಿಗೆ ಶತಕ ದಾಖಲಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ  ವ್ಯಾಟ್ಸ್'ನ್ 35 ಚಂಡುಗಳಲ್ಲಿ  3 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ  57 ರನ್ ಬಾರಿಸಿದರು. 

ಪುಣೆ(ಮೇ.13): ಸತತ ಗೆಲುವಿನಿಂದ ಬೀಗುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಧೋನಿ ಪಡೆ  ಬಗ್ಗು ಬಡಿದಿದೆ.
180 ರನ್'ಗಳ ಸವಾಲನ್ನು ಬೆನ್ನಟ್ಟಿದ ಚೆನ್ನೈ 19 ಓವರ್'ಗಳಲ್ಲಿ 8 ವಿಕೇಟ್'ಗಳ ಗೆಲುವು ಸಾಧಿಸಿದರು. ಆರಂಭಿಕ ಆಟಗಾರರಾದ ಅಂಬಾಡಿ ರಾಯುಡು ಹಾಗೂ ಶೇನ್ ವ್ಯಾಟ್ಸ'ನ್ ಅವರ 13.3 ಓವರ್'ಗಳಲ್ಲಿ 134 ರನ್ ಜೊತೆಯಾಟದಿಂದ ಗೆಲುವು ಸುಲಭವಾಯಿತು.
ಸ್ಫೋಟಕ ಆಟವಾಡಿದ ಅಂಬಾಟಿ ರಾಯುಡು 7 ಸಿಕ್ಸ್ ಹಾಗೂ 7 ಬೌಂಡರಿಯಿಂದ 100 ರನ್'ನೊಂದಿಗೆ ಶತಕ ದಾಖಲಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ  ವ್ಯಾಟ್ಸ್'ನ್ 35 ಚಂಡುಗಳಲ್ಲಿ  3 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ  57 ರನ್ ಬಾರಿಸಿದರು. 
ಈ ಮೊದಲು ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಸನ್ ರೈಸರ್ಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕ ಆಟಗಾರ ಅಲೆಕ್ಸ್ ಹೆಲ್ಸ್ ಔಟಾದ ನಂತರ ಧವನ್ ಹಾಗೂ ಕೇನ್ ವಿಲಿಯಮ್ಸ್'ನ್ 12.3 ಓವರ್'ಗಳಲ್ಲಿ 123 ರನ್ ಪೇರಿಸಿದರು.
ಇಬ್ಬರು ಆಟಗಾರರು ಅರ್ಧ ಶತಕ ದಾಖಲಿಸಿದರು. ಹೈದರಾಬಾದ್ ಧವನ್  49 ಎಸೆತಗಳಲ್ಲಿ10 ಬೌಂಡರಿ ಹಾಗೂ 3 ಸಿಕ್ಸ್'ನೊಂದಿಗೆ  79 ರನ್ ಪೇರಿಸಿದರೆ,  ಕೇನ್ 39 ಚಂಡುಗಳಲ್ಲಿ  5ಬೌಂಡರಿ, 2ಸಿಕ್ಸ್ ನೊಂದಿಗೆ 51 ರನ್ ಬಾರಿಸಿದರು. ಕೇನ್ ಅವರದು ಈ ಆವೃತ್ತಿಯಲ್ಲಿ 7ನೇ ಅರ್ಧ ಶತಕ ಹಾಗೂ ಐಪಿಎಲ್ ವೃತ್ತಿ ಜೀವನದಲ್ಲಿ 10ನೆಯದು.  

ಸ್ಕೋರ್ 
ಸನ್ ರೈಸರ್ಸ್ ಹೈದರಾಬಾದ್ 20 ಓವರ್'ಗಳಲ್ಲಿ 179/4
(ಶಿಖರ್ ಧವನ್ 79, ಕೇನ್ 51)

ಚೆನ್ನೈ ಸೂಪರ್ ಕಿಂಗ್ಸ್  19 ಓವರ್'ಗಳಲ್ಲಿ 180/2
(ಅಂಬಾಟಿ ರಾಯುಡು ಅಜೇಯ 100, ವ್ಯಾಟ್ಸನ್ 57)

ಫಲಿತಾಂಶ: ಚೆನ್ನೈ'ಗೆ 8 ವಿಕೇಟ್ ಜಯ

ಪಂದ್ಯ ಪುರುಶೋತ್ತಮ: ಅಂಬಾಟಿ ರಾಯುಡು 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
John Cena ಕೊನೆಯ ಮ್ಯಾಚ್ ಯಾವಾಗ? ಎದುರಾಳಿ ಯಾರು? ಲೈವ್ ಸ್ಟ್ರೀಮಿಂಗ್ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್