ಮುಂಬೈ, ರಾಯಲ್ಸ್ ಹೊರಗೋಗೊರ್ಯಾರು : 2 ತಂಡಕ್ಕೂ ನಿರ್ಣಾಯಕ

Published : May 13, 2018, 07:10 PM IST
ಮುಂಬೈ, ರಾಯಲ್ಸ್ ಹೊರಗೋಗೊರ್ಯಾರು : 2 ತಂಡಕ್ಕೂ ನಿರ್ಣಾಯಕ

ಸಾರಾಂಶ

ದಿಢೀರನೆ ಲಯಕ್ಕೆ ಮರಳಿರುವ ಮುಂ ಬೈ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 102 ರನ್'ಗಳ ಭರ್ಜರಿ ಗೆಲುವು ಸಾಧಿಸಿ  ರನ್ ರೇಟ್ ಸುಧಾರಿಸುವಂತೆ ಮಾಡಿಕೊಂಡಿತ್ತು. ತಂಡದ ಬ್ಯಾಟ್ಸ್'ಮೆನ್'ಗಳು ಉತ್ತಮ ಲಯದಲ್ಲಿದ್ದರೆ, ಬೌಲರ್'ಗಳು ಸಹ ಮಿಂಚಿನ ಪ್ರದರ್ಶನ ತೋರುತ್ತಿದಾರೆ. ಮತ್ತೊಂದೆಡೆ ಜೋಸ್ ಬಟ್ಲರ್ ಸ್ಫೋಟಕ ಲಯದಲ್ಲಿರುವು ದು ರಾಜಸ್ಥಾನ ಪ್ಲೇ-ಆಫ್ ರೇಸ್'ನಲ್ಲಿ ಉಳಿಯಲು ನೆರವಾಗಿದೆ. 

ಮುಂಬೈ(ಮೇ.13): ಹಾಲಿ ಚಾಂಪಿಯನ್ಸ್  ಮುಂ ಬೈ ಇಂಡಿಯನ್ಸ್ ಆರಂಭಿಕ ಆಘಾತದ ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ಲೇ ಆಫ್ ರೇಸಲ್ಲಿ ಉಳಿದುಕೊಂಡಿದ್ದು, ಭಾನುವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸವಾಲನ್ನು ಎದುರಿಸಲಿದೆ.
ಆರಂಭ ದಲ್ಲಿ ಅಬ್ಬರಿಸಿದ ಬಳಿಕ ಮಂಕಾದ ರಾಯಲ್ಸ್ , ಸತತ 3 ಪಂದ್ಯಗಳಲ್ಲಿ ಸೋಲುಂಡು ಪ್ಲೇ-ಆಫ್ ರೇಸ್'ನಿಂದ ಹೊರಬೀಳುವ ಸ್ಥಿತಿಗೆ ಸಿಲುಕಿತ್ತು. ಎರಡೂ ತಂಡಗಳು ಆಡಿರುವ 11 ಪಂದ್ಯಗಳಿಂದ 10 ಅಂಕ ಕಲೆಹಾಕಿದ್ದು, ಈ ಪಂದ್ಯದಲ್ಲಿ ಸೋಲುವ ತಂಡ ಪ್ಲೇ-ಆಫ್'ನಿಂದ ಬಹುತೇಕ ಹೊರಬೀಳಲಿದೆ.
ದಿಢೀರನೆ ಲಯಕ್ಕೆ ಮರಳಿರುವ ಮುಂ ಬೈ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 102 ರನ್'ಗಳ ಭರ್ಜರಿ ಗೆಲುವು ಸಾಧಿಸಿ  ರನ್ ರೇಟ್ ಸುಧಾರಿಸುವಂತೆ ಮಾಡಿಕೊಂಡಿತ್ತು. ತಂಡದ ಬ್ಯಾಟ್ಸ್'ಮೆನ್'ಗಳು ಉತ್ತಮ ಲಯದಲ್ಲಿದ್ದರೆ, ಬೌಲರ್'ಗಳು ಸಹ ಮಿಂಚಿನ ಪ್ರದರ್ಶನ ತೋರುತ್ತಿದಾರೆ. ಮತ್ತೊಂದೆಡೆ ಜೋಸ್ ಬಟ್ಲರ್ ಸ್ಫೋಟಕ ಲಯದಲ್ಲಿರುವು ದು ರಾಜಸ್ಥಾನ ಪ್ಲೇ-ಆಫ್ ರೇಸ್'ನಲ್ಲಿ ಉಳಿಯಲು ನೆರವಾಗಿದೆ. 
ಸಂಜು ಸ್ಯಾಮ್ಸನ್,ಅಜಿಂಕ್ಯ ರಹಾನೆ,  ಬೆನ್ ಸ್ಟೋಕ್ಸ್ ಹೀಗೆ ಘಟಾನುಘಟಿಗಳನ್ನು ಹೊಂದಿದ್ದರೂ, ತಂಡಕ್ಕೆ ಹೆಚ್ಚಿನ ಲಾಭವೇನೂ ಆಗುತ್ತಿಲ್ಲ. ಒಂದೊಮ್ಮೆ ಬಟ್ಲರ್ ಬೇಗನೆ ಔಟಾದರೆ ರಾಯಲ್ಸ್ ಬ್ಯಾಟಿಂಗ್ ಕ್ರಮಾಂಕ ಕುಸಿಯಲಿದೆ. ತಂಡದ ಆಯ್ಕೆಯಲ್ಲೂ ರಾಜಸ್ಥಾನ ಕೆಲ ಎಡವಟ್ಟುಗಳನ್ನು ಮಾಡುತ್ತಿದೆ.  ಬ್ಯಾಟಿಂಗ್ ಕ್ರಮಾಂಕದಲ್ಲಿ ಅನಗತ್ಯ ಪ್ರಯೋಗಗಳು ಸಹ ತಂಡದ ಗೆಲುವಿಗೆ ಅಡ್ಡಿಯಾಗಬಹುದು.

ತಂಡ
ಮುಂಬೈ ಇಂಡಿಯನ್ಸ್ : ಸೂರ್ಯಕುಮಾರ್ ಯಾದವ್, ಎವಿನ್ ಲೆವೀಸ್, ರೋಹಿತ್(ನಾಯಕ), ಇಶಾನ್, ಹಾರ್ದಿಕ್, ಕಟ್ಟಿಂಗ್, ಕೃನಾಲ್, ಡುಮಿನಿ, ಮಿಚೆಲ್  ಮೆಕ್ಲೆನಫ್, ಮರ್ಕಂಡೆ,  ಬೂಮ್ರಾ
ರಾಜಸ್ಥಾನ ರಾಯಲ್ಸ್:  ಬಟ್ಲರ್ ,ಸ್ಟೋಕ್ಸ್, ರಹಾನೆ(ನಾಯಕ), ಸಂಜು ಸ್ಯಾಮ್ಸನ್, ಪ್ರಶಾಂತ್ ಚೋಪ್ರಾ, ಸ್ಟುವರ್ಟ್ ಬಿನ್ನಿ. ಕೆ.ಗೌತಮ್, ಜೋಫ್ರಾ ಆರ್ಚರ್ , ಅಂಕಿತ್ ಶರ್ಮಾ,
ಉನಾದ್ಕಕ್ತ್, ಸೋಧಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!