ಕೊಹ್ಲಿ ನಾಯಕತ್ವ ಮುಂದುವರಿಕೆಗೆ ಗವಾಸ್ಕರ್ ಆಕ್ಷೇಪ

By Web DeskFirst Published Jul 30, 2019, 10:32 AM IST
Highlights

ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕತ್ವ ಬದಲಾವಣೆಗೆ ಆಗ್ರಹ ಕೇಳಿ ಬಂದಿತ್ತು. ನಿಗದಿತ ಓವರ್ ಕ್ರಿಕೆಟ್ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಲು ಒತ್ತಾಯ ಕೇಳಿ ಬಂದಿತ್ತು. ಇದೀಗ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೊಹ್ಲಿ ನಾಯಕತ್ವ ಮುಂದುವರಿಗೆ ಆಕ್ಷೇಪ  ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಜು.30): ಐಸಿಸಿ ಏಕದಿನ ವಿಶ್ವಕಪ್‌ ಮುಕ್ತಾಯದ ಬಳಿಕ ವಿರಾಟ್‌ ಕೊಹ್ಲಿಯನ್ನು ಭಾರತ ಕ್ರಿಕೆಟ್‌ ತಂಡದ ನಾಯಕನನ್ನಾಗಿ ಮುಂದುವರಿಸುತ್ತಿರುವುದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿಯನ್ನು ಮರು ನೇಮಕ ಮಾಡಲು ಬಿಸಿಸಿಐ ಅಧಿಕೃತವಾಗಿ ಸಭೆ ನಡೆಸಬೇಕಿತ್ತು ಎಂದು ಗವಾಸ್ಕರ್‌ ಅಭಿಪ್ರಾಯಿಸಿದ್ದಾರೆ. 

ಇದನ್ನೂ ಓದಿ: ಕೊಹ್ಲಿ-ರೋಹಿತ್ ಕೋಲ್ಡ್ ವಾರ್; ಕೊನೆಗೂ ಸ್ಪಷ್ಟನೆ ನೀಡಿದ ನಾಯಕ!

ತಮಗಿರುವ ಮಾಹಿತಿ ಪ್ರಕಾರ ವಿಶ್ವಕಪ್‌ ವರೆಗೂ ಅಷ್ಟೇ ಕೊಹ್ಲಿ ನಾಯಕನಾಗಿ ನೇಮಕಗೊಂಡಿದ್ದರು ಎಂದಿರುವ ಗವಾಸ್ಕರ್‌, ‘ವಿಂಡೀಸ್‌ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲು ಸಭೆ ಸೇರುವ ಮೊದಲು ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಸಬೇಕಿತ್ತು. ಕೊಹ್ಲಿ ನೇರವಾಗಿ ನಾಯಕನಾಗಿದ್ದಾರೆ ಎಂದರೆ ಅವರು ತಮ್ಮ ಇಚ್ಛೆಯಂತೆ ನಾಯಕನಾಗಿದ್ದಾರೆಯೇ ಇಲ್ಲವೇ ಆಯ್ಕೆ ಸಮಿತಿಯ ಇಚ್ಛೆಯಂತೆ ನಾಯಕನಾಗಿದ್ದಾರೆಯೇ ಎನ್ನುವುದನ್ನು ಪ್ರಶ್ನಿಸಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಜೊತೆ ಸಂಬಂಧ; ಮೌನ ಮುರಿದ ಉರ್ವಶಿ ರೌಟೆಲಾ!

ವಿಶ್ವಕಪ್ ಟೂರ್ನಿ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಕುರಿತು ಪ್ರಶ್ನೆ ಎದ್ದಿತ್ತು. ಕೊಹ್ಲಿಗೆ ಟೆಸ್ಟ್ ನಾಯಕತ್ವ ಮಾತ್ರ ಸಾಕು, ಏಕದಿನ ಹಾಗೂ ಟಿ20 ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಲು ಒತ್ತಾಯ ಕೇಳಿ ಬಂದಿತ್ತು. ಇದೀಗ ಗವಾಸ್ಕರ್ ಬಹಿರಂಗವಾಗಿ ಕೊಹ್ಲಿ ನಾಯಕತ್ವವನ್ನು ಪಶ್ನಿಸಿದ್ದಾರೆ.

click me!