ಸತತ 3ನೇ ಸೋಲಿನೊಂದಿಗೆ ಪುಣೇರಿ ಪಲ್ಟಾನ್ ಅಂಕಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಭರ್ದರಿ ಗೆಲುವಿನೊಂದಿಗೆ ಬೆಂಗಾಲ್ ವಾರಿಯರ್ಸ್ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬೆಂಗಾಲ್ ಹಾಗೂ ಪುಣೇರಿ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಮುಂಬೈ(ಜು.29): ಪ್ರೊ ಕಬಡ್ಡಿ 7ನೇ ಆವೃತ್ತಿ ಟೂರ್ನಿಯಲ್ಲಿ ರೋಚಕ ತಮಿಳ್ ತಲೈವಾಸ್ ಹಾಗೂ ಪಾಟ್ನಾ ಪೈರೇಟ್ಸ್ ಪಂದ್ಯದ ಬಳಿಕ ಅಂಕಗಳ ಸುರಿಮಳೈ ಪಂದ್ಯ ಅಭಿಮಾನಿಗಳಿಗೆ ರಸದೌತಣ ನೀಡಿತು. ಪುಣೇರಿ ಪಲ್ಟಾನ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 43-23 ಅಂಕಗಳ ಭರ್ದಜರಿ ಗೆಲುವು ಸಾಧಿಸಿತು.
ಇದನ್ನೂ ಓದಿ: PKL7: ಮಹಾರಾಷ್ಟ್ರ ಡರ್ಬಿ ಹೋರಾಟಕ್ಕೆ ಹಾಜರಾದ ಕೊಹ್ಲಿ!
ಮೊದಲಾರ್ಧದ ಆರಂಭದ ರೈಡ್‌ನಲ್ಲಿ ಬೆಂಗಾಲ್ ಹಾಗೂ ಪುಣೇರಿ ಅಂಕಗಳಿಸಲಿಲ್ಲ. ಪುಣೇರಿ ತಂಡದ ಮಂಜೀತ್ ರೈಡ್ ಮೂಲಕ ಅಂಕ ಖಾತೆ ತೆರೆದರು. ಬೆಂಗಾಲ್ ಕೂಡ ಅಷ್ಟೇ ವೇಗದಲ್ಲಿ ಅಂಕ ಬೇಟೆ ಆರಂಭಿಸಿತು. 2ನೇ ನಿಮಿಷದಲ್ಲಿ ಮನೀಂದರ್ ಸಿಂಗ್ ಸೂಪರ್ ರೈಡ್ ಮೂಲಕ ಬೆಂಗಾಲ್ 4-1 ಅಂಕಗಳ ಮುನ್ನಡೆ ಸಾಧಿಸಿತು. ಈ ಸೂಪರ್ ರೈಡ್ ಬೆಂಗಾಲ್ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಪುಣೇರಿ ಪಲ್ಟಾನ್ ಆತ್ಮವಿಶ್ವಾಸ ಕುಗ್ಗಿತು. ಅಂಕ ಗಳಿಸಲು ಪುಣೇರಿಗೆ ಸಾಧ್ಯವಾಗಲಿಲ್ಲ. ಇತ್ತ ಬೆಂಗಾಲ್ ಮೊದಲಾರ್ಧದ ಅಂತ್ಯದಲ್ಲಿ 18-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲೂ ಪುಣೇರಿ ಎಚ್ಚೆತ್ತುಕೊಳ್ಳಲಿಲ್ಲ. ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಬೆಂಗಾಲ್ ವಾರಿಯರ್ಸ್ ಭಾರಿ ಅಂತರ ಕಾಯ್ದುಕೊಂಡಿತು.
ಪಂದ್ಯದ ಅಂತ್ಯದಲ್ಲಿ ಬೆಂಗಾಲ್ 43-23 ಅಂಕಗಳಿಂದ ಗೆಲುವು ಸಾಧಿಸಿತು. 3 ಪಂದ್ಯದಲ್ಲಿ 2 ಗೆಲುವಿನೊಂದಿಗೆ ಬೆಂಗಾಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಆದರೆ ಸತತ 3 ಸೋಲು ಕಂಡ ಪುಣೇರಿ ಪಲ್ಟಾನ್ 11ನೇ ಸ್ಥಾನಕ್ಕೆ ಕುಸಿಯಿತು.