ಟಿ20ಯಿಂದ ಡ್ರಾಪ್ ಆದ ಧೋನಿಗೆ ಗವಾಸ್ಕರ್ ನೀಡಿದ ಸಲಹೆ ಏನು?

By Web DeskFirst Published Nov 3, 2018, 3:41 PM IST
Highlights

ಚುಟುಕು ಮಾದರಿಯಿಂದ ಡ್ರಾಪ್ ಆಗಿರುವ ಎಂ.ಎಸ್.ಧೋನಿ ಇದೀಗ ವಿಶ್ರಾಂತಿಗೆ ಜಾರಿದ್ದಾರೆ. ಆದರೆ ಧೋನಿಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಸನ್ನಿ ಗವಾಸ್ಕರ್ ನೀಡಿದ ಟಿಪ್ಸ್ ಏನು? ಇಲ್ಲಿದೆ.
 

ಮುಂಬೈ(ನ.03): ಟಿ20 ಮಾದರಿಯಿಂದ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿಯನ್ನ ಡ್ರಾಪ್ ಮಾಡಿರೋದು ಅಭಿಮಾನಿಗಳು ಮಾತ್ರವಲ್ಲ, ದಿಗ್ಗಜ ಕ್ರಿಕೆಟಿಗರ ಅಸಮಧಾನಕ್ಕೂ ಕಾರಣವಾಗಿದೆ. ಚುಟುಕು ಮಾದರಿಯಿಂದ ಹೊರಗುಳಿದಿರುವ ಧೋನಿಗೆ, ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗರ  ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಟಿ20 ಸರಣಿಯಿಂದ ಧೋನಿಯನ್ನ ಹೊರಗಿಡುತ್ತಿದ್ದಂತೆ, ಪರ ವಿರೋಧಗಳು ವ್ಯಕ್ತವಾಗಿತ್ತು. ಇನ್ನು ಗವಾಸ್ಕರ್ ಧೋನಿ ಅವಶ್ಯಕತೆ ತಂಡಕ್ಕಿದೆ ಎಂದು ಆಯ್ಕೆ ಸಮಿತಿಗೆ ಪರೋಕ್ಷವಾಗಿ ಸೂಚನೆ ನೀಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಬಳಿಕ ವಿಶ್ರಾಂತಿಗೆ ಜಾರಿರುವ ಧೋನಿ, ಹೆಚ್ಚು ಕ್ರಿಕೆಟ್ ಆಡಲು ಸೂಚಿಸಿದ್ದಾರೆ.

ವಿಶ್ರಾಂತಿಯಲ್ಲಿರುವ ಧೋನಿ, ಜಾರ್ಖಂಡ್ ಪರ ಕಣಕ್ಕಿಳಿಯಬೇಕು. ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಎಂ.ಎಸ್.ಧೋನಿ ದೇಸಿ ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ವಿಶ್ವಕಪ್ ಟೂರ್ನಿಗೆ ತಯಾರಾಗಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.

click me!