ಸಾನಿಯಾ ಮಿರ್ಜಾ ಮಗು ಫೋಟೋ ವೈರಲ್!

Published : Nov 03, 2018, 02:50 PM IST
ಸಾನಿಯಾ ಮಿರ್ಜಾ ಮಗು ಫೋಟೋ ವೈರಲ್!

ಸಾರಾಂಶ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿ ಮಗುವಿನ ಫೋಟೋಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಸಾನಿಯಾ ಮಗುವಿನ ಫೋಟೋ ಬಹಿರಂಗವಾಗಿದೆ. ಇಲ್ಲಿದೆ ಇಜಾನ್ ಮಿರ್ಜಾ ಮಲಿಕ್ ಫೋಟೋ ವಿವರ.

ಹೈದರಾಬಾದ್(ನ.03): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಳೆದ ವಾರ ಮುದ್ದಾದ ಗಂಡು ಮುಗುವಿಗೆ ಜನ್ಮ ನೀಡಿದ್ದರು. ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಸಂತಸವನ್ನ ಹಂಚಿಕೊಂಡಿದ್ದರು. ಇದೀಗ ಮೊದಲ ಬಾರಿಗೆ ಸಾನಿಯಾ ಹಾಗೂ ಶೊಯೆಬ್ ದಂಪತಿ ಮಗುವಿನ ಫೋಟೋ ವೈರಲ್ ಆಗಿದೆ.

ಆಸ್ಪತ್ರೆಯಲ್ಲಿದ್ದ ಸಾನಿಯಾ ಮಿರ್ಜಾ ಇದೀಗ ಮನಗೆ ತೆರಳಿದ್ದಾರೆ. ಈ ವೇಳೆ ಮಗುವಿನ ಜೊತೆ ಹೊರಬಂದ ಸಾನಿಯಾ ಮಿರ್ಜಾ ಕ್ಯಾಮರ ಕಣ್ಣಿಗೆ ಸೆರೆಯಾಗಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಮಗುವಿಗೆ ಇಜಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದಾರೆ. ಉರ್ದು ಭಾಷೆಯಲ್ಲಿ ಇಝ್‌ಹಾನ್ ಅಂದರೆ ದೇವರ ಉಡುಗೊರೆ ಎಂದರ್ಥ.  ಸಾನಿಯಾ-ಮಲಿಕ್ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೇ ಏಪ್ರಿಲ್ ತಿಂಗಳಲ್ಲಿ ಸಾನಿಯಾ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದರು. ಹೀಗಾಗಿ ಕೆಲವು ತಿಂಗಳುಗಳಿಂದಲೇ ಟೆನಿಸ್’ನಿಂದ ಹೊರಗುಳಿದಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ವೇಳೆಗೆ ಸಾನಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ.   

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
ನಿವೃತ್ತಿಗೆ ಯು ಟರ್ನ್ ಹೊಡೆದ ವಿನೇಶ್ ಫೋಗಟ್; 2028ರ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಶಾಸಕಿ!