ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಟೆನಿಸಿಗ ಸುಮಿತ್ ನಗಾಲ್

By Kannadaprabha NewsFirst Published Jun 23, 2024, 10:38 AM IST
Highlights

ಇತ್ತೀಚೆಗಷ್ಟೇ ಹೀಲ್‌ಬ್ರಾನ್ ಚಾಲೆಂಜರ್ ಟೂರ್ನಿಯಲ್ಲಿ ಗೆದ್ದಿದ್ದ ಸುಮಿತ್ ವಿಶ್ವ ಶ್ರೇಯಾಂಕದಲ್ಲಿ ಅಗ್ರ-80ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರು ಶ್ರೇಯಾಂಕದ ಆಧಾರದ ಮೇಲೆ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದು, ಸದ್ಯ 71ನೇ ಸ್ಥಾನದಲ್ಲಿದ್ದಾರೆ. 26 ವರ್ಷದ ಸುಮಿತ್‌ಗೆ ಇದು 2ನೇ ಒಲಿಂಪಿಕ್ಸ್ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲೂ ಆಡಿದ್ದ ಅವರು, 2ನೇ ಸುತ್ತಿನಲ್ಲಿ ಸೋತಿದ್ದರು.

ಚೆನ್ನೈ: ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದನ್ನು ಸ್ವತಃ ಅವರೇ ಖಚಿತಪಡಿಸಿಕೊಂಡಿದ್ದು, ಓಲಿಂಪಿಕ್ಸ್‌ಗೆ ಅಧಿಕೃತವಾಗಿ ಪ್ರವೇಶ ಪಡೆದಿದ್ದೇನೆ' ಎಂದು ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ. 

ಇತ್ತೀಚೆಗಷ್ಟೇ ಹೀಲ್‌ಬ್ರಾನ್ ಚಾಲೆಂಜರ್ ಟೂರ್ನಿಯಲ್ಲಿ ಗೆದ್ದಿದ್ದ ಸುಮಿತ್ ವಿಶ್ವ ಶ್ರೇಯಾಂಕದಲ್ಲಿ ಅಗ್ರ-80ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರು ಶ್ರೇಯಾಂಕದ ಆಧಾರದ ಮೇಲೆ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದು, ಸದ್ಯ 71ನೇ ಸ್ಥಾನದಲ್ಲಿದ್ದಾರೆ. 26 ವರ್ಷದ ಸುಮಿತ್‌ಗೆ ಇದು 2ನೇ ಒಲಿಂಪಿಕ್ಸ್ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲೂ ಆಡಿದ್ದ ಅವರು, 2ನೇ ಸುತ್ತಿನಲ್ಲಿ ಸೋತಿದ್ದರು.

Latest Videos

ಒಲಿಂಪಿಕ್ಸ್‌ಗೂ ಮುನ್ನ 2 ಟೂರ್ನಿಗಳಲ್ಲಿ ಜತೆಯಾಗಿ ಬೋಪಣ್ಣ-ಶ್ರೀರಾಂ ಕಣಕ್ಕೆ

ನವದೆಹಲಿ: ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನಲ್ಲಿ ಒಟ್ಟಾಗಿ ಆಡಲಿರುವ ಭಾರತದ ರೋಹನ್‌ ಬೋಪಣ್ಣ ಹಾಗೂ ಶ್ರೀರಾಮ್‌ ಬಾಲಾಜಿ ಜೋಡಿ, ಅದಕ್ಕೂ ಮುನ್ನ 2 ಟೂರ್ನಿಗಳಲ್ಲಿ ಜೊತೆಯಾಗಿ ಕಣಕ್ಕಿಳಿಯಲಿದೆ. 

ಶ್ರೀರಾಮ್ ಬಾಲಾಜಿ ಮುಂಬರುವ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂನಲ್ಲಿ ಆಡಲಿದ್ದು, ಬಳಿಕ ಬೋಪಣ್ಣ ಅವರ ಜೊತೆಗೂಡಿ ಜರ್ಮನಿಯ ಹಂಬರ್ಗ್‌ ಎಟಿಪಿ 500 ಹಾಗೂ ಕ್ರೊವೇಷಿಯಾದ ಉಮಾಗ್‌ ಎಟಿಪಿ 250 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಬಳಿಕ ಜು.26ರಿಂದ ಆರಂಭಗೊಳ್ಳಲಿರುವ ಒಲಿಂಪಿಕ್ಸ್‌ನಲ್ಲಿ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ. 

T20 World Cup 2024: ಬಲಿಷ್ಠ ಆಸ್ಟ್ರೇಲಿಯಾಗೆ ಸೋಲುಣಿಸಿ ಇತಿಹಾಸ ಬರೆದ ಆಫ್ಘಾನಿಸ್ತಾನ..!

ಇತ್ತೀಚೆಗಷ್ಟೇ ಶ್ರೀರಾಮ್‌ ಬಾಲಾಜಿ ಫ್ರೆಂಚ್‌ ಓಪನ್‌ ಟೆನಿಸ್‌ನಲ್ಲಿ 3ನೇ ಸುತ್ತಿಗೇರಿ, ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ವಿರುದ್ಧ ಸೋಲನುಭವಿಸಿದ್ದರು. ಆ ಬಳಿಕ ಬಾಲಾಜಿ ಅವರನ್ನು ಒಲಿಂಪಿಕ್ಸ್‌ನ ಜೊತೆಗಾರನಾಗಿ ಬೋಪಣ್ಣ ಆಯ್ಕೆ ಮಾಡಿದ್ದರು.

ಆರ್ಚರಿ ವಿಶ್ವಕಪ್: ಭಾರತ ವನಿತೆಯರಿಗೆ ಹ್ಯಾಟ್ರಿಕ್ ಚಿನ್ನ

ಅಂಟಾಲ್ಯ (ಟರ್ಕಿ): ಭಾರತ ಮಹಿಳಾ ಕಾಂಪೌಂಡ್ ತಂಡ ಆರ್ಚರಿ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕದ ಸಾಧನೆ ಮಾಡಿದೆ. ಇಲ್ಲಿ ನಡೆಯುತ್ತಿ ರುವ ವಿಶ್ವಕಪ್ 3ನೇ ಹಂತದಲ್ಲಿ ಜ್ಯೋತಿ ಸುರೇಖಾ, ಅದಿತಿ ಸ್ವಾಮಿ ಹಾಗೂಪರ್‌ನೀತ್ ಕೌರ್ ಅವರನ್ನೊಳ ಗೊಂಡ ತಂಡ ಫೈನಲ್‌ನಲ್ಲಿ ಎಸ್ಟೋನಿಯಾ ವಿರುದ್ಧ 232-229 ಅಂಕಗಳಿಂದ ಜಯಗಳಿಸಿದ ಬಂಗಾರಕ್ಕೆ ಮುತ್ತಿಟ್ಟಿತು.

ಈತ ಇರುವವರೆಗೂ ಭಾರತ ಫುಟ್ಬಾಲ್ ಉನ್ನತಿಗೇರಲ್ಲ: ಹೊಸ ಬಾಂಬ್ ಸಿಡಿಸಿದ ಉಚ್ಚಾಟಿತ ಕೋಚ್‌ ಸ್ಟಿಮಾಕ್!

ಈ ಜೋಡಿ ಏಪ್ರಿಲ್‌ನಲ್ಲಿ ಶಾಂಫ್ಟ್ ವಿಶ್ವಕಪ್ ಹಂತ-1, ಮೇ ತಿಂಗಳಲ್ಲಿ ಯೆಕೋನ್ ವಿಶ್ವಕಪ್ ಹಂತ-2ರಲ್ಲಿ ಚಿನ್ನದ ಸಾಧನೆ ಮಾಡಿತ್ತು. ಇದೇ ವೇಳೆ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾನ್ಸ್‌ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು, ರಿಕರ್ವ್ ವಿಭಾಗದಲ್ಲಿ ಅಂಕಿತಾ ಭಕತ್ ಹಾಗೂ ಧೀರಜ್ ಬೊಮ್ಮದೇವರ ವೈಯಕ್ತಿಕ ವಿಭಾಗ ಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

click me!