ಮಹಿಳಾ ವಿಶ್ವಕಪ್ ಫೈನಲ್: ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿರುವ 'ಕಿಚ್ಚ'

By Suvarna Web DeskFirst Published Jul 22, 2017, 6:52 PM IST
Highlights

ಶೂಟಿಂಗ್ ಮುಗಿದ ನಂತರವೂ ಇಂಗ್ಲೆಂಡ್'ನಲ್ಲಿಯೇ ಉಳಿದುಕೊಂಡಿರುವ ಸುದೀಪ್ ಸ್ಮರಣೀಯ ಹಾಗೂ ರೋಚಕ ಪಂದ್ಯವನ್ನು ಮಿಸ್ ಮಾಡಿಕೊಳ್ಳದೆ ತಾವು ಸಾಕ್ಷಿಯಾಗುವುದಾಗಿ ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್'ನಲ್ಲಿ ನಡೆಯಲಿರುವ ಟೀಂ ಇಂಡಿಯಾ ವನಿತೆಯರ ಭಾರತ ಹಾಗೂ ಇಂಗ್ಲೆಂಡ್ ನಡುವಿನ  ಮಹಿಳಾ ವಿಶ್ವಕಪ್'ನ ಫೈನಲ್ ಪಂದ್ಯವನ್ನು ವೀಕ್ಷಿಸುವುದಾಗಿ ಸ್ಯಾಂಡಲ್'ವುಡ್ ಸ್ಟಾರ್ ಕಿಚ್ಚ ಸುದೀಪ್ ಟ್ವಿಟರ್'ನಲ್ಲಿ ಹೇಳಿಕೊಂಡಿದ್ದಾರೆ. ಸುದೀಪ್ ಹಾಗೂ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದ ಶೂಟಿಂಗ್ ಇತ್ತೀಚಿಗಷ್ಟೆ ಇಂಗ್ಲೆಂಡ್'ನಲ್ಲಿ ಮುಗಿದಿತ್ತು.

ಶೂಟಿಂಗ್ ಮುಗಿದ ನಂತರವೂ ಇಂಗ್ಲೆಂಡ್'ನಲ್ಲಿಯೇ ಉಳಿದುಕೊಂಡಿರುವ ಸುದೀಪ್ ಸ್ಮರಣೀಯ ಹಾಗೂ ರೋಚಕ ಪಂದ್ಯವನ್ನು ಮಿಸ್ ಮಾಡಿಕೊಳ್ಳದೆ ತಾವು ಸಾಕ್ಷಿಯಾಗುವುದಾಗಿ ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ. ಸುದೀಪ್ ಮಾತ್ರವಲ್ಲದೆ ಹಲವಾರು ಗಣ್ಯರು ಸಹ ಅದ್ಭುತ ಪಂದ್ಯವನ್ನು ವೀಕ್ಷಿಸಲು ತೆರಳುತ್ತಿದ್ದಾರೆ.

Wrappd a gud schedule. All excited to witness th Indian women's world cup cricket finals at Lords on Sunday.Can't miss this proud moment.

— Kichcha Sudeepa (@KicchaSudeep) July 21, 2017

 

click me!